ವಿಜಯಪುರ: ನಿನ್ನೆ ಸಂಜೆ ಇದ್ದಕ್ಕಿದ್ದಂತೆ ಇಬ್ರಾಹಿಂ ರೋಜಾ ಕಟ್ಟಡದ ರಕ್ಷಣೆಗೆ ಕಟ್ಟಿದ್ದ ತಡೆಗೋಡೆ ನೆಲಕ್ಕಚ್ಚಿದೆ. ಗೋಡೆ ಪಕ್ಕದಲ್ಲಿ ನಿಂತಿದ್ದ ಓಮಿನಿ ವಾಹನದ ಮೇಲೆ ಕಲ್ಲುಗಳು ಬಿದ್ದಿವೆ ಎಂಬ ಮಾಹಿತಿ ಇದೆ.
ಕಾಂಪೌಂಡ್ ಪಕ್ಕದ ಎರಡು ವಿದ್ಯುತ್ ಕಂಬಗಳು ವಾಲಿದ್ದು ಹೆಸ್ಕಾಂ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಕಂಬಗಳು ವಾಲುತ್ತಿದ್ದಂತೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
ತಡೆಗೋಡೆ ಪಕ್ಕದಲ್ಲಿ ಜನರು ಸಂಚರಿಸದಂತೆ ಪಕ್ಕದ ರಸ್ತೆಗೆ ಕಲ್ಲು ಹಾಕಲಾಗಿದೆ. ಘಟನೆಯಿಂದ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.