ವಿಜಯಪುರ : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಟೌಟ್‌ಗೆ ದುರ್ಷ್ಕಮಿಗಳು ಅವಮಾನ ಮಾಡಿರುವ ಘಟನೆ ಇಂಡಿ ತಾಲೂಕಿನ ಹಂಜಗಿ ಗ್ರಾಮದಲ್ಲಿ ನಡೆದಿದೆ. ಘಟನೆಯಿಂದ ಆಕ್ರೋಶಗೊಂಡ ರಾಯಣ್ಣನ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ.
ಕಿಡಿಗೇಡಿಗಳಿಂದ ರಾಯಣ್ಣ, ಕನಕದಾಸರು, ಚೆನ್ನಮ್ಮನವರ ಭಾವಚಿತ್ರಕ್ಕೂ ಅವಮಾನಿಸಲಾಗಿದೆ ಎಂದು ಹಂಜಗಿ ಗ್ರಾಮದ ರಾಯಣ್ಣ ಸರ್ಕಲ್‌ನಲ್ಲಿರುವ ಬೃಹತ್ ಕಟೌಟ್ ಬಳಿ ಪ್ರತಿಭಟನೆ ನಡೆಸಲಾಗಿದೆ. ಸದ್ಯ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಇಂಡಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.