ವಿಜಯಪುರ: ಸುರ ಸಿಂಗಾರ ಕಲೆ, ಸಾಂಸ್ಕೃತಿಕ ಸಂಸ್ಥೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ವಿಜಯಪುರ ಇವರ ಸಹಯೋಗದಲ್ಲಿ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಿನ್ನೆ ನಡೆಯಿತು.
ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜರುಗಿದ ಸಂಗೀತ ಕಾರ್ಯಕ್ರಮದಲ್ಲಿ ಮುಂಬೈ ಮೂಲದ ಗಾಯಕಿ ಡಾ. ಚೇತನಾ ಬಿ. ಪಾಠಕ್ ಗಾನಸುಧೆ ಹರಿಸಿದ್ದು, ಬೆಳಗಾವಿಯ ಖ್ಯಾತ ಹಾರ್ಮೋನಿಯಂ ವಾದಕ ಸಾರಂಗ ಕುಲಕರ್ಣಿ, ತಬಲಾ ವಾದಕ ಶ್ರೀಧರ ಮಾಂಡ್ರೆ ಸಾಥ್ ನೀಡಿದರು.
ಸಂಜೆ 6 ಗಂಟೆಗೆ ಪ್ರಾರಂಭವಾದ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಕ್ಕೆ ನಗರದ ಅನೇಕ ಸಂಗೀತ ಪ್ರಿಯರು ಆಗಮಿಸಿದ್ದು, ಸಂಗೀತದ ರಸದೌತಣವನ್ನು ಆಸ್ವಾದಿಸಿದರು.