ವಿಜಯಪುರ : ನಗರದಲ್ಲಿ ಸುರಿಯುತ್ತಿವ ಧಾರಾಕಾರ ಮಳೆಗೆ ಈಡೀ ನಗರ ನಿವಾಸಿಗಳು ಹೈರಾಣಾಗಿದ್ದಾರೆ. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ನಗರದ ಬಹುತೇಕ ರಸ್ತೆಗಳು ಹದಗೆಟ್ಟ ಪರಿಣಾಮ ವಾಹನ ಸವಾರರು ರಸ್ತೆ ಮೇಲೆ ಸಂಚರಿಸಲು ಪರದಾಡುತ್ತಿದ್ದಾರೆ.
ಇಂದು ಬೆಳಗಿನಿಂದ ಸುರಿಯಿತ್ತಿರುವ ಧಾರಾಕಾರ ಮಳೆಗೆ ಬಸರಿ ಬಾವಿ ಬಡಾವಣೆಯಲ್ಲಿ 5 ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಬಡಾವಣೆ ನಿವಾಸಿಗಳು ಪರದಾಟ ನಡೆಸುವಂತಾಯಿತು. ಇತ್ತ ನಗರದಲ್ಲಿ ಡ್ರ್ಯಾನೇಜ್ ವ್ಯವಸ್ಥೆ, ರಸ್ತೆಗಳು ಹಾಳಾಗಿದ್ದು, ಇಂದು ರಸ್ತೆಗೆ ಮಳೆ ನೀರು ನುಗ್ಗಿ ಸಾರ್ವಜನಿಕರಿಗೆ ತೊಂದರೆಯುಂಟಾಯಿತು. ಚಳರಂಡಿ ಹಾಗೂ ರಸ್ತೆ ಅಭಿವೃದ್ಧಿ ಮಾಡುವಂತೆ ಜಿಲ್ಲಾಡಳಿತಕ್ಕೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಧಾರಾಕಾರವಾಗಿ ಸುರಿಯುತ್ತಿರುವ ಮಳೆ ನಗರ ನಿವಾಸಿಗಳು ಮನೆಯಿಂದ ಹೊರ ಬರದಂತಾಗಿದೆ. ಇತ್ತ ನಗರದ ಕೆಲವು ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ಇದಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರುಣನ ನರ್ತನಕ್ಕೆ ಇಂದು ಎಪಿಎಂಸಿ ಮಾರುಕಟ್ಟೆಯತ್ತ ರೈತರು ಹೆಚ್ಚಾಗಿ ಸುಳಿಯದಿರುವುದು, ಮದ್ಯವರ್ತಿಗಳಿಗೆ ನಷ್ಟವನ್ನುಂಟು ಮಾಡಿದೆ. ನಗರದ ಷಾ ಪೇಟೆ, ಗೋಪಾಲಪುರ ಗಲ್ಲಿ ಸೇರಿದಂತೆ ಹಲವು ತಗ್ಗು ಪ್ರದೇಶಗಳ ಬಡಾವಣೆಗೆ ನೀರು ನುಗ್ಗಿದ್ದರಿಂದ ಜನರು ಪರದಾಡುವಂತಾಗಿದೆ. ಇತ್ತ ಲಿಂಬೆ, ತರಕಾರಿ ಸೇರಿದಂತೆ ಪ್ರತಿ ಬುಧವಾರ ನಡೆಯುವ ಎಪಿಎಂಸಿ ವಹಿವಾಟಿಗೆ ಮಳೆ ಅಡ್ಡಿಪಡಿಸಿದ್ದು, ವರ್ತಕರ ಕಳವಳಕ್ಕೆ ಕಾರಣವಾಗದೆ.