ETV Bharat / state

ವಿಜಯಪುರ ಜಿಲ್ಲೆಯಾದ್ಯಂತ ವರುಣನ ಅಬ್ಬರ: ಧರೆಗುರುಳಿದ ಮರಗಳು, ಹೊಲಗಳಿಗೆ ನೀರು ನುಗ್ಗಿ ಅವಾಂತರ - ಮುದ್ದೇಬಿಹಾಳದಲ್ಲಿ ಮಳೆ

ವಿಜಯಪುರ ಜಿಲ್ಲೆಯಾದ್ಯಂತ ಬುಧವಾರ ರಾತ್ರಿ ಭಾರೀ ಮಳೆಯಾಗಿದೆ. ವರುಣನ ಆರ್ಭಟಕ್ಕೆ ಹಲವೆಡೆ ಮರಗಳು ಧರೆಗುರುಳಿವೆ.

Rain in Vijayapur
ವಿಜಯಪುರ ಜಿಲ್ಲೆಯಾದ್ಯಂತ ವರುಣನ ಅಬ್ಬರ
author img

By

Published : Jun 3, 2021, 2:01 PM IST

ವಿಜಯಪುರ/ ಮುದ್ದೇಬಿಹಾಳ: ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಆರಂಭಿಸಲು ಮಳೆರಾಯ ನಾಲ್ಕು ದಿನಗಳ ಮುಂಚೆಯೇ ಎಂಟ್ರಿ ಕೊಟ್ಟಿದ್ದಾನೆ.

ಮುದ್ದೇಬಿಹಾಳ ತಾಲೂಕಿನಾದ್ಯಂತ ಬುಧವಾರ ರಾತ್ರಿ ಭಾರೀ ಮಳೆ ಸುರಿದಿದ್ದು, ಹಲವೆಡೆ ಮರಗಳು ಧರೆಗುರುಳಿವೆ. ಹೊಲಗಳ ಒಡ್ಡು ಒಡೆದು ನೀರು ತುಂಬಿ ಹರಿದು ಮಣ್ಣು ಕೊಚ್ಚಿ ಹೋಗಿದೆ. ಢವಳಗಿ ರಸ್ತೆಯಲ್ಲಿ ಎರಡ್ಮೂರು ಮರಗಳು ಧರೆಗುರುಳಿದ್ದು, ತಾಲೂಕಿನ ಇಣಚಗಲ್ ಕ್ರಾಸ್ ಬಳಿ ಕಿರು ಕಾಲುವೆಯ ನೀರು ರಸ್ತೆಯ ಮೇಲೆ ಹರಿದಿದೆ. ಬಿದರಕುಂದಿ ಗ್ರಾಮದಲ್ಲಿ ಎರಡು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

ಧರೆಗುರುಳಿದ ಮರಗಳು, ಹೊಲಗಳಿಗೆ ನೀರು ನುಗ್ಗಿರುವುದು

ಮಳೆಯಿಂದ ಮೂರ್ನಾಲ್ಕು ಗಂಟೆಗಳ ಕಾಲ ವಿದ್ಯುತ್ ಸ್ಥಗಿತಗೊಳಿಸಲಾಗಿತ್ತು. ಹೊಲಗಳಲ್ಲಿ ನೀರು ಸಂಗ್ರಹವಾಗಿದ್ದು, ಮುದ್ದೇಬಿಹಾಳ ಪಟ್ಟಣದ ಕೆರೆಯೂ ಭರ್ತಿಯಾಗಿದೆ. ಈ ಮಳೆ ಬಿತ್ತನೆಗೆ ಅನುಕೂವಾಗಿದೆ ಎಂದು ರೈತರು ಹೇಳಿದ್ದಾರೆ.

Heavy Rain InVijayapur District
ಮುರಿದು ಬಿದ್ದ ಮರ

ಬಬಲೇಶ್ವರ ತಾಲೂಕಿನಲ್ಲಿ ಸುರಿದ ಮಳೆಗೆ ಡೋಣಿ ನದಿಗೆ ಅಪಾರ ಪ್ರಮಾಣದ ನೀರು ಹರಿದು‌ ಬಂದಿದ್ದು, ಸುತ್ತಮುತ್ತಲಿನ ಹೊಲಗಳಿಗೆ ನೀರು ನುಗ್ಗಿ ಬಿತ್ತನೆ ಕಾರ್ಯಕ್ಕೆ ಅಡಚಣೆಯಾಗಿದೆ. ಇದೇ ಮೊದಲ ಬಾರಿ ಜೂನ್ ಮೊದಲ ವಾರದಲ್ಲಿಯೇ ಡೋಣಿ‌ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ. ಇದರಿಂದ ಅನ್ನದಾತರ ಮೊಗದಲ್ಲಿ ಸಂತಸ ಮೂಡಿದೆ.

Heavy Rain InVijayapur District
ತುಂಬಿ ಹರಿಯುತ್ತಿರುವ ಹಳ್ಳ

ಓದಿ : ಕಲಬುರಗಿ ಜಿಲ್ಲೆಯಾದ್ಯಂತ ಭಾರೀ ಮಳೆ: ಹಲವೆಡೆ ಹಾನಿ

ಈ ನಡುವೆ ಡೋಣಿ ನದಿಯ ಅಕ್ಕಪಕ್ಕ ಗ್ರಾಮಗಳಾದ ಸಾರವಾಡ, ಬಬಲೇಶ್ವರ ಗ್ರಾಮಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ಸುಮಾರು 10 ವರ್ಷಗಳ ಹಿಂದೆ ಡೋಣಿ ನದಿ ತುಂಬಿ ಹರಿದ ಪರಿಣಾಮ ಸಾರವಾಡ ಗ್ರಾಮದೊಳಗೆ ನೀರು ನುಗ್ಗಿತ್ತು. ಕಳೆದ ವರ್ಷ ಸಹ ಗ್ರಾಮದೊಳಗೆ ಸ್ವಲ್ಪ ಪ್ರಮಾಣದಲ್ಲಿ ನೀರು ಬಂದಿತ್ತು.‌

ಮಳೆ ಪ್ರಮಾಣ: ಕಳೆದ ರಾತ್ರಿ ಬಬಲೇಶ್ವರ ತಾಲೂಕಿನಲ್ಲಿ 40.6 ಮೀ.ಮೀ. ಮಳೆಯಾಗಿದೆ. ಮಮದಾಪುರದಲ್ಲಿ 46.4 ಮಿ.ಮೀ., ವಿಜಯಪುರ ತಾಲೂಕಿನಲ್ಲಿ 1.8 ಮಿ.ಮೀ., ನಾಗಠಾಣ 3.0, ಭೂತನಾಳ 5.8, ತಿಕೋಟಾ 18.4, ಚಡಚಣ 22.4, ಇಂಡಿ 10.6, ಸಿಂದಗಿ ತಾಲೂಕಿನಲ್ಲಿ 70.00, ದೇವರಹಿಪ್ಪರಗಿಯಲ್ಲಿ ಅತಿ ಹೆಚ್ಚು 118.0, ಆಲಮೇಲದಲ್ಲಿ 65.00 ಮೀ.ಮೀಟರ್ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಹೊಳೆತ್ತಲು ಆಗ್ರಹ: ಹಲವು ವರ್ಷಗಳಿಂದ ಡೋಣಿ ನದಿಯ ಹೊಳೆತ್ತದ ಕಾರಣ ಸ್ವಲ್ಪ ಮಳೆಯಾದರೂ ಸಾಕು ನದಿ ತುಂಬಿ ಹರಿದು ಹೊಲಗಳಿಗೆ ನೀರು ನುಗ್ಗುತ್ತಿದೆ. ಸಾಕಷ್ಟು ಬಾರಿ ಹೊಳೆತ್ತಲು ಆಗ್ರಹಿಸಿದರೂ ಸರ್ಕಾರ ಇತ್ತ ಗಮನಹರಿಸುತ್ತಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.