ETV Bharat / state

ಉಕ್ಕಿ ಹರಿಯುತ್ತಿದೆ ಭೀಮೆ... ಸಂತ್ರಸ್ತರಿಗೆ 39 ಕಾಳಜಿ‌ ಕೇಂದ್ರ ಆರಂಭ - ಕಾಳಜಿ‌ ಕೇಂದ್ರ

ಪ್ರವಾಹದಿಂದ ಸಿಲುಕಿ ನಿರಾಶ್ರಿತರಾದ ಸಂತ್ರಸ್ತರಿಗೆ ಒಟ್ಟು 39 ಕಾಳಜಿ‌ ಕೇಂದ್ರ ಆರಂಭಿಸಲಾಗಿದೆ. ಇಲ್ಲಿ ಸದ್ಯ 881 ಕುಟುಂಬ ಆಶ್ರಯ ಪಡೆದುಕೊಂಡಿದ್ದಾರೆ. ಒಟ್ಟು 4431 ಜನರಲ್ಲಿ1264 ಮಕ್ಕಳು ಆಶ್ರಯ ಪಡೆದುಕೊಂಡಿದ್ದಾರೆ.

Vijayapura
ಕಾಳಜಿ‌ ಕೇಂದ್ರ
author img

By

Published : Oct 19, 2020, 3:58 PM IST

ವಿಜಯಪುರ: ಕಳೆದ ಒಂದು ವಾರದಿಂದ ಆರ್ಭಟಿಸುತ್ತಿರುವ ಮಹಾಮಳೆಗೆ ಭೀಮಾ ನದಿ ಪಾತ್ರದ ಜನ ತತ್ತರಿಸಿ ಹೋಗಿದ್ದಾರೆ. ಇಲ್ಲಿಯವರೆಗೆ ಭೀಮಾತೀರದ 28 ಗ್ರಾಮಗಳು ಜಲಾವೃತವಾಗಿವೆ.

ಸಂತ್ರಸ್ತರಿಗೆ 39 ಕಾಳಜಿ‌ ಕೇಂದ್ರ ಆರಂಭ

ಇವುಗಳಲ್ಲಿ ಚಡಚಣ 8, ಇಂಡಿ 12, ಸಿಂದಗಿ ತಾಲೂಕಿನ 8 ಗ್ರಾಮಗಳು ಜಲಾವೃತವಾಗಿವೆ. ಸುಮಾರು 2543 ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿ ನೀರು ನುಗ್ಗಿವೆ. 12,217 ಜನರನ್ನು ಸ್ಥಳಾಂತರ ಮಾಡಲಾಗಿದೆ. ಇವರಲ್ಲಿ ಜಲಾವೃತದಲ್ಲಿ ಸಿಲುಕಿದ್ದ 1516 ಜನರನ್ನು ಎನ್​ಡಿಆರ್​ಎಫ್ ಪಡೆ ಹಾಗೂ ಜಿಲ್ಲಾಡಳಿತ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ಮೂಲಕ ರಕ್ಷಿಸಲಾಗಿದೆ. ಒಟ್ಟು 72,534 ಜನ ಜಲಾವೃತದಲ್ಲಿ ನಿರಾಶ್ರಿತರಾಗಿದ್ದಾರೆ.

ಮನೆಗಳ ಹಾನಿ:

ಒಟ್ಟು 8 ತಾಲೂಕು ಕೇಂದ್ರದ 2445 ಮನೆಗಳಿಗೆ ಹಾನಿಯಾಗಿವೆ. ಇದರಲ್ಲಿ 2437 ಮನೆಗಳು ಭಾಗಶಃ ಹಾನಿಯಾಗಿದ್ದರೆ, 8 ಮನೆಗಳು ಸಂಪೂರ್ಣ ಬಿದ್ದಿದೆ. ಮನೆಗಳ ಹಾನಿ ಕುರಿತು ಸಮೀಕ್ಷೆ ನಡೆಸಲು ತಾಂತ್ರಿಕ ತಂಡ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ.

ಕಾಳಜಿ‌ ಕೇಂದ್ರ ಆರಂಭ:

ಪ್ರವಾಹದಿಂದ ಸಿಲುಕಿ ನಿರಾಶ್ರಿತರಾದ ಸಂತ್ರಸ್ತರಿಗೆ ಒಟ್ಟು 39 ಕಾಳಜಿ‌ ಕೇಂದ್ರ ಆರಂಭಿಸಲಾಗಿದೆ. ಚಡಚಣ 7, ಇಂಡಿ 21, ಸಿಂದಗಿ 11 ಸೇರಿ 39 ಕಾಳಜಿ ಕೇಂದ್ರ ಆರಂಭಿಸಲಾಗಿದೆ. ಇಲ್ಲಿ ಸದ್ಯ 881 ಕುಟುಂಬ ಆಶ್ರಯ ಪಡೆದುಕೊಂಡಿದ್ದಾರೆ. ಒಟ್ಟು 4431 ಜನರಲ್ಲಿ1264 ಮಕ್ಕಳು ಆಶ್ರಯ ಪಡೆದುಕೊಂಡಿದ್ದಾರೆ.

ರಕ್ಷಣಾ ಕಾರ್ಯಾಚರಣೆಗೆ ಎನ್​ಡಿಆರ್​ಎಫ್:

ಜಲಾವೃತರಾದವರ ರಕ್ಷಣಾ ಕಾರ್ಯಾಚರಣೆಗೆ 16 ಜನ ಇರುವ 2 ಎನ್​ಡಿಆರ್​ಎಫ್ ಪಡೆ, ಬೆಳಗಾವಿಯ ಮರಾಠಾ ಲೈಫ್ ಇನ್ಫೆಂಟರಿ ರೆಸ್ಕ್ಯೂ ತಂಡ ಆಗಮಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.