ವಿಜಯಪುರ: ಕಳೆದ ರಾತ್ರಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಗೆವು ಪತ್ತೆಯಾಗಿದೆ. ಭಾರೀ ಮಳೆಗೆ ಆ ಹಗೆವು ಕುಸಿತಗೊಂಡಿತ್ತು.
ತಿಕೋಟಾದ ಖಾಸಗಿ ಶಾಲೆಯೊಂದರ ಆಟದ ಮೈದಾನದಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ ದಾರಿಹೋಕರು ನೋಡಿ ಜನ ಬೀಳಬಾರದು ಎಂದು ಸುತ್ತಲೂ ಕಲ್ಲುಗಳನ್ನು ಇಟ್ಟು ಎಚ್ಚರ ಮೂಡಿಸಿದ್ದಾರೆ.
ಭೂಮಿಯೊಳಗಡೆ ನಿರ್ಮಿಸಿದ್ದ ಹಳೆಯ ಕಾಲದ ಕಲ್ಲಿನ ಗೋಡೆಯ ಕಟ್ಟಡ ಧಾರಾಕಾರ ಮಳೆಯಿಂದ ಕುಸಿದಿದೆ. ತಿಕೋಟಾ ವಾಡೆ ಪ್ರದೇಶದ ನಿವಾಸಿಗಳು ಘಟನೆಯಿಂದ ಆತಂಕಕ್ಕೆ ಒಳಗಾಗಿದ್ದಾರೆ. ಈ ಹಿಂದೆ ಗ್ರಾಮದ ಜನ ಜೋಳ ಸಂಗ್ರಹಿಸಿಡಲು ಈ ಹಗೆವುಗಳನ್ನು ನಿರ್ಮಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ರಾಮನಗರ: ಮ್ಯಾನ್ ಹೋಲ್ನಲ್ಲಿ ಉಸಿರುಗಟ್ಟಿ ಮೂವರು ಕಾರ್ಮಿಕರ ದುರ್ಮರಣ