ETV Bharat / state

ಹೆಚ್ಚುತ್ತಿರುವ ಕೊರೊನಾ.. ಮತ್ತೆ ಸರ್ಕಾರಿ ಕಚೇರಿಗಳ ಸಮಯ ಬದಲಾವಣೆ..

author img

By

Published : Apr 21, 2021, 5:03 PM IST

ಕೊರೊನಾ ಪ್ರಕರಣಗಳು ದಿಢೀರನೆ ಹೆಚ್ಚಾಗುತ್ತಿರುವುದರಿಂದ ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ. ನಾಳೆಯಿಂದ ಎಂದಿನಂತೆ ನೌಕರರು ಬೆಳಗ್ಗೆ 10-30 ರಿಂದ ಸಂಜೆ 5-30ರವರೆಗೆ ಕಾರ್ಯನಿರ್ವಹಿಸಬೇಕಿದೆ..

Office
Office

ವಿಜಯಪುರ : ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಿಬ್ಬಂದಿ ಕೊರತೆ ಹಿನ್ನೆಲೆ ಕಂದಾಯ ಇಲಾಖೆ ವ್ಯಾಪ್ತಿಗೆ ಬರುವ ವಿವಿಧ ಇಲಾಖೆಯ ಸಿಬ್ಬಂದಿ ಮೊದಲಿನಂತೆ ಬೆಳಗ್ಗೆ 10-30ರಿಂದ ಸಂಜೆ 5-30ರವರೆಗೆ ಕೆಲಸ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಆದೇಶಿಸಿದ್ದಾರೆ.‌

ಬಿಸಿಲು ಹೆಚ್ಚಿರುವ ಕಾರಣ ಬೆಳಗಾವಿ ವಿಭಾಗದ ನೌಕರರಿಗೆ ಪ್ರತಿವರ್ಷ ಏಪ್ರಿಲ್, ಮೇ ತಿಂಗಳಲ್ಲಿ ಬೆಳಗ್ಗೆ 8-30 ರಿಂದ ಮಧ್ಯಾಹ್ನ 1.30ರವರೆಗೆ ಮಾತ್ರ ಕಚೇರಿ ಅವಧಿ ಇರುವಂತೆ ಸರ್ಕಾರ ಆದೇಶಿಸುತ್ತಿತ್ತು. ಈ ವರ್ಷ ಸಹ ಸರ್ಕಾರ ಎರಡು ತಿಂಗಳು ಬೆಳಗ್ಗೆ ಕಚೇರಿ ಸಮಯ ‌ನಿಗದಿಗೊಳಿಸಿ ಆದೇಶ ಹೊರಡಿಸಿತ್ತು.

ಆದರೆ, ಕೊರೊನಾ ಪ್ರಕರಣಗಳು ದಿಢೀರನೆ ಹೆಚ್ಚಾಗುತ್ತಿರುವುದರಿಂದ ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ. ನಾಳೆಯಿಂದ ಎಂದಿನಂತೆ ನೌಕರರು ಬೆಳಗ್ಗೆ 10-30 ರಿಂದ ಸಂಜೆ 5-30ರವರೆಗೆ ಕಾರ್ಯನಿರ್ವಹಿಸಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.