ವಿಜಯಪುರ: ಜವಳಿ ಸೋಷಿಯಲ್ ಗ್ರೂಪ್ ವತಿಯಿಂದ ಜನವರಿ 05 ರಂದು ಉಚಿತ ಸರ್ವ ಧರ್ಮ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡ ಯಾಸಿನ್ ಜವಳಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಅತಿವೃಷ್ಠಿ ಅನಾವೃಷ್ಠಿಯಿಂದ ಬಡ ಜನರ ಆಸ್ತಿಪಾಸ್ತಿಗಳು ನಷ್ಟವಾಗಿದೆ. ಇದರ ನಡುವೆ ಮದುವೆ ಕಾರ್ಯಕ್ರಮಗಳ ಆಯೋಜನೆ ಮಾಡುವುದು ಕಷ್ಟವಾಗಿದೆ. ನಮ್ಮ ಸಂಸ್ಥೆಯಿಂದ ಉಚಿತ ಸಾಮೂಹಿಕ ವಿವಾಹ ಆಯೋಜನೆ ಮಾಡಲಾಗಿದ್ದು, ನೊಂದಣಿ ಕಾರ್ಯ ಆರಂಭವಾಗಿದೆ. ಸೂಕ್ತ ದಾಖಲೆಗಳೊಂದಿಗೆ ಜೋಡಿಗಳು ನೊಂದಣಿ ಮಾಡಿಕೊಳ್ಳಬಹುದು ಎಂದು ಯಾಸೀನ್ ಜವಳಿ ಹೇಳಿದರು.
ಸರ್ವಧರ್ಮ ಸಾಮೂಹಿಕ ವಿವಾಹವಾಗುವ ಜೋಡಿಗಳಿಗೆ ತಾಳಿ, ಬಟ್ಟೆ, ಬೆಡ್ ಸೇರಿದಂತೆ ಅನೇಕ ಸಾಮಾಗ್ರಿಗಳನ್ನು ಉಚಿವಾಗಿ ಜವಳಿ ಸೋಷಿಯಲ್ ಗ್ರೂಪ್ ನೀಡಲಿದೆ. ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸಾಮೀಜಿ, ಡಾ.ಸೈಯ್ಯದ್ ತಕೀ ಪೀರಾ ಹುಸೈನಿ ಸಾನಿಧ್ಯ ವಹಿಸಲಿದ್ದಾರೆ.