ETV Bharat / state

ನನ್ನ ರಾಜಕೀಯ ಬೆನ್ನೆಲುಬೇ ನೀನಾಗಿದ್ದೇ.. ಆಪ್ತಮಿತ್ರನ ಅಗಲಿಕೆಗೆ ಮಾಜಿ ಶಾಸಕ ನಾಡಗೌಡ ಕಂಬನಿ - Former MLA Nadagouda tears

ಸಾಮಾಜಿಕ ಚಿಂತನೆಯುಳ್ಳ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ನನ್ನ ರಾಜಕೀಯದ ಏಳುಬೀಳಿನ ಹಿಂದೆ ಬೆನ್ನೆಲುಬಾಗಿ, ಕಾವಲುಗಾರನಾಗಿ ನಿಂತುಕೊಂಡಿದ್ದ ಅಮೂಲ್ಯ ರತ್ನವನ್ನು ಕಳೆದುಕೊಂಡಿದ್ದೇನೆ..

ffdf
ಕಣ್ಣೀರು ಸುರಿಸಿದ ಮಾಜಿ ಶಾಸಕ ನಾಡಗೌಡ
author img

By

Published : Jul 25, 2020, 10:09 PM IST

ಮುದ್ದೇಬಿಹಾಳ: ಅಗಲಿದ ಗೆಳೆಯನನ್ನು ನೆನೆದು ಮಾಜಿ ಶಾಸಕ ಸಿ ಎಸ್ ನಾಡಗೌಡ ಕಣ್ಣೀರು ಹಾಕಿರುವ ಪ್ರಸಂಗ ನಡೆದಿದೆ.

ಅಗಲಿದ ಗೆಳೆಯನ ನೆನೆದು ಕಣ್ಣೀರು ಸುರಿಸಿದ ಮಾಜಿ ಶಾಸಕ ನಾಡಗೌಡ

ಇಂದು ಪಟ್ಟಣದ ದ್ಯಾಮವ್ವನ ಕಟ್ಟೆಯ ಮೇಲೆ ಪುರಸಭೆ ಮಾಜಿ ಅಧ್ಯಕ್ಷ ಕಾಂಗ್ರೆಸ್ ಮುಖಂಡ ಎಸ್ ಜಿ ಪಾಟೀಲ್​ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯಾರೇ ತೀರಿಕೊಂಡ್ರು ಅವರಿಗೆ ಹಾರ ಹಾಕಿ ಗೌರವ ಸಲ್ಲಿಸುವುದನ್ನು ಹೇಳಿಕೊಟ್ಟ ನಿನಗೆ ಹಾರ ಹಾಕುವ ಸೌಭಾಗ್ಯ ನನಗೆ ಸಿಗಲಿಲ್ಲ. ನಿನ್ನಂತಹ ಸ್ನೇಹಿತನನ್ನು ಎಲ್ಲಿ ಹುಡಕಾಡಲಿ ಎಂದು ಕಣ್ಣೀರು ಹಾಕಿದ್ದಾರೆ.

ಸಾಮಾಜಿಕ ಚಿಂತನೆಯುಳ್ಳ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ನನ್ನ ರಾಜಕೀಯದ ಏಳುಬೀಳಿನ ಹಿಂದೆ ಬೆನ್ನೆಲುಬಾಗಿ, ಕಾವಲುಗಾರನಾಗಿ ನಿಂತುಕೊಂಡಿದ್ದ ಅಮೂಲ್ಯ ರತ್ನವನ್ನು ಕಳೆದುಕೊಂಡಿದ್ದೇನೆ ಎಂದಿದ್ದಾರೆ.

ಮುಖಂಡ ಎಸ್ ಜಿ ಪಾಟೀಲ(ಶೃಂಗಾರಗೌಡ್ರು) ನಿಧನದ ಹಿನ್ನೆಲೆ ಗೌರವಾರ್ಥ ಪಟ್ಟಣದಾದ್ಯಂತ ಎಲ್ಲ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಗೌರವ ಸೂಚಿಸಲಾಯಿತು. ಶಾಸಕ ಎ ಎಸ್ ಪಾಟೀಲ ನಡಹಳ್ಳಿ ಮಾತನಾಡಿ, ಎಸ್ ಜಿ ಪಾಟೀಲ ಶೃಂಗಾರಗೌಡರು ಜನರ ಪ್ರೀತಿ,ವಿಶ್ವಾಸ ಗಳಿಸಿದ್ದವರು ಎಂದು ಮರೆಯಾದ ಕಾಂಗ್ರೆಸ್ ಮುಖಂಡನನ್ನು ನೆನೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.