ETV Bharat / state

ವಿಜಯಪುರದಲ್ಲಿ ಮೊದಲ ಮಹಿಳಾ ವಸ್ತು ಸಂಗ್ರಹಾಲಯ ಆರಂಭ - ವಿಜಯಪುರದಲ್ಲಿ ಮೊದಲ ಮಹಿಳಾ ವಸ್ತು ಸಂಗ್ರಹಾಲಯ

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ದೇಶದ ಮೊದಲ ಮಹಿಳಾ ವಸ್ತು ಸಂಗ್ರಹಾಲಯ ಆರಂಭಗೊಳ್ಳುತ್ತಿದ್ದು, ನವೆಂಬರ್​​ ಕೊನೆ ವಾರದಲ್ಲಿ ಈ ವಸ್ತು ಸಂಗ್ರಹಾಲಯ ಲೋಕಾರ್ಪಣೆಗೊಳ್ಳುವ ಸಾಧ್ಯತೆಗಳಿವೆ.

first woman's  museum start in vijaypur
ವಿಜಯಪುರದಲ್ಲಿ ಮೊದಲ ಮಹಿಳಾ ವಸ್ತು ಸಂಗ್ರಹಾಲಯ ಆರಂಭ
author img

By

Published : Sep 27, 2020, 6:26 PM IST

ವಿಜಯಪುರ: ರಾಜ್ಯದ ಏಕೈಕ‌ ಮಹಿಳಾ ವಿಶ್ವವಿದ್ಯಾಲಯವಾಗಿರುವ ಅಕ್ಕಮಹಾದೇವಿ ಮಹಿಳಾ ವಿವಿ ಈಗ ಮಹಿಳೆಯರ ಘನತೆ ಬದುಕು, ಅನಾದಿ ಕಾಲದಿಂದ ಸಮಾಜಕ್ಕೆ ನೀಡಿದ ಅಪರೂಪದ ಕೊಡುಗೆಯನ್ನು ಅನಾವರಣಗೊಳಿಸಲು ದೇಶದ ಮೊದಲ ಮಹಿಳಾ ವಸ್ತು ಸಂಗ್ರಹಾಲಯ ಆರಂಭಿಸಲು ಮುಂದಾಗಿದೆ,. ದಾನಿಗಳ ಸಹಯೋಗದಲ್ಲಿ ಇದೇ ನವೆಂಬರ್​​​ ನಲ್ಲಿ ಈ ವಸ್ತು ಸಂಗ್ರಹಾಲಯ ಲೋಕಾರ್ಪಣೆಗೊಳ್ಳಲಿದೆ.

ವಿಜಯಪುರದಲ್ಲಿ ಮೊದಲ ಮಹಿಳಾ ವಸ್ತು ಸಂಗ್ರಹಾಲಯ ಆರಂಭ

ರಾಜ್ಯದಲ್ಲಿ ಮಹಿಳಾ ಸಬಲೀಕರಣ, ಸಮಾನತೆ ಹಾಗೂ ಯಾವುದೇ ಹಿಂಜರಿಕೆ ಇಲ್ಲದೇ ಉನ್ನತ ವ್ಯಾಸಂಗಕ್ಕಾಗಿ ರಾಜ್ಯದಲ್ಲಿ ಮೊದಲು ಮಹಿಳಾ ವಿಶ್ವವಿದ್ಯಾಲಯವನ್ನು ವಿಜಯಪುರದಲ್ಲಿ ಆರಂಭಿಸಲಾಗಿದೆ. ಇಲ್ಲಿನ ವಿದ್ಯಾರ್ಥಿನಿಯರಿಗೆ ಸ್ಪೂರ್ತಿ ನೀಡಲೆಂದು ಈ ವಿವಿ ಈಗಾಗಲೇ ಮಹಿಳಾ ಸಾಧಕಿಯರ ಪ್ರತಿಮೆಗಳನ್ನು ಸ್ಥಾಪಿಸಿ ಮೆಚ್ಚುಗೆಗೆ ಕಾರಣವಾಗಿತ್ತು. ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಮಹಿಳಾ ವಿವಿ ಅಧ್ಯಾಪಕ ಹಾಗೂ ಆಡಳಿತ ವೃಂದ, ಮಹಿಳಾ ವಿವಿ ಆವರಣದಲ್ಲಿ ಮಹಿಳಾ ವಸ್ತು ಸಂಗ್ರಹಾಲಯ ಸ್ಥಾಪಿಸಲು ಮುಂದಾಗಿದೆ. ಇದಕ್ಕಾಗಿ ರಾಜ್ಯದ 30 ಜಿಲ್ಲೆಗಳಿಗೆ ನುರಿತ ತಂಡವನ್ನು ಕಳುಹಿಸಿ ಗ್ರಾಮೀಣ ಭಾಗದಲ್ಲಿ ಮಹಿಳೆಯರು ಅಡುಗೆ ಮನೆ, ಹೊಲ, ಮನೆ ಅಂದ ಹೆಚ್ಚಿಸಲು ಉಪಯೋಗಿರುವ ಸುಮಾರು 4 ಸಾವಿರಕ್ಕಿಂತ ಹೆಚ್ಚು ಪುರಾತನ ವಸ್ತುಗಳನ್ನು ಸಂಗ್ರಹಿಸಿದೆ.

ಇಂದು ಅಡುಗೆ ಮನೆಯಲ್ಲಿ ಎಲ್ಲವೂ ಹೈಟೆಕ್ ವಸ್ತುಗಳು ಇವೆ. ಕ್ಷಣಾರ್ಧದಲ್ಲಿ ಅಡುಗೆ ಮಾಡಬಹುದಾಗಿದೆ. ಆದರೆ ಈ ಹಿಂದೆ ಅಡುಗೆ ಮಾಡಲು ಬಳಕೆಯಾಗುತ್ತಿದ್ದ ವಸ್ತುಗಳನ್ನು ನೋಡಿದರೆ ಎಂಥವರು ದಂಗಾಗಬಹುದು. ಇಟ್ಟಿಗೆ, ಮಣ್ಣಿನ ಒಲೆ, ಬೆಳ್ಳಿ ಬಟ್ಟಲು ಸೇರಿದಂತೆ ಹತ್ತಾರು ವಸ್ತುಗಳು ಉಪಯೋಗಿಸುತ್ತಾರೆ. ಉದರ ಜತೆ ಕಂದಿಲು ಸೇರಿದಂತೆ ಗೃಹೋಪಯೋಗಿ ವಸ್ತುಗಳು ಇಂದಿನ ಜನಾಂಗಕ್ಕೆ ನೋಡಲು ಸಿಗುವುದಿಲ್ಲ. ಅದನ್ನು ಕೇವಲ ಹಳೆಯ ಸಿನೆಮಾದಲ್ಲಿ ನೋಡಬಹುದಾಗಿದೆ. ಅಂಥ ವಸ್ತುಗಳನ್ನು ಪ್ರತಿ ಜಿಲ್ಲೆಗೆ ಹೋಗಿ ಹಣ ನೀಡಿ ಅವುಗಳನ್ನು ತಂದು ಈ ವಸ್ತು ಸಂಗ್ರಹಾಲಯದಲ್ಲಿ ಶೇಖರಣೆ ಮಾಡಲಾಗಿದೆ. ವಸ್ತು ಸಂಗ್ರಹಾಲಯ ಸ್ಥಾಪನೆ ಕಟ್ಟಡಕ್ಕೆ 5.8 ಕೋಟಿ ರೂ. ಖರ್ಚು ಮಾಡಲಾಗಿದೆ. ಪುರಾತನ ವಸ್ತುಗಳ ಅಲಂಕಾರಕ್ಕೆ ದಾನಿಗಳ ಸಹಾಯದ ನಿರೀಕ್ಷೆಯನ್ನು ಮಹಿಳಾ ವಿವಿ ಹೊಂದಿದೆ.

ವಸ್ತು ಸಂಗ್ರಹಾಲಯವನ್ನು ಕೇವಲ ಸಂಗ್ರಹಾಲಯವಾಗಿ ಗುರುತಿಸಿಕೊಳ್ಳದೆ, ಅದನ್ನು ಕುರಿತು ಅಧ್ಯಯನ‌ ನಡೆಸುವ ಉದ್ದೇಶ ಹೊಂದಲಾಗಿದೆ. ಅದೊಂದು ಡಿಪ್ಲೊಮಾ ಕೋರ್ಸ್ ಆರಂಭಿಸಲು ಚಿಂತನೆ ನಡೆಸಲಾಗಿದೆ. ಈಗಾಗಲೇ ಕರ್ನಾಟಕ ಸಂಗೀತಗಾರ್ತಿ ಅಮೀರಬಾಯಿ ಕರ್ನಾಟಕ ಹಾಗೂ ಪುರಾತನ ಕಾಲದ ಅಡುಗೆ ಒಲೆಯ ಪದ್ದತಿ ಕುರಿತಂತೆ ಅಧ್ಯಯನ ನಡೆಸುತ್ತಿದ್ದಾರೆ. ಮಹಿಳಾ ವಸ್ತು ಸಂಗ್ರಹಾಲಯ ಆರಂಭವಾದ ಮೇಲೆ ಅಲ್ಲಿನ ಪ್ರತಿ ಒಂದು ವಸ್ತುಗಳ ಡಾಕ್ಯುಮೆಂಟ್ರಿ ಮಾಡುವ ಉದ್ದೇಶವನ್ನು ಹೊಂದಿದೆ. ನವೆಂಬರ್​​ ಕೊನೆ ವಾರದಲ್ಲಿ ಈ ವಸ್ತು ಸಂಗ್ರಹಾಲಯ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗುವ ಸಾಧ್ಯತೆಗಳಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.