ETV Bharat / state

ಪ್ರೀತಿಸಿದ ಯುವಕನ ಕೈ ಬಿಡದ ಯುವತಿ.. ತಂದೆಯಿಂದಲೇ ಮಗಳ ಮೇಲೆ ಚಾಕು ಇರಿತ - ತಂದೆಯಿಂದ ಮಗಳ ಮೇಲೆ ಹಲ್ಲೆ

ಗುಮ್ಮಟನಗರಿ ವಿಜಯಪುರ ಜಿಲ್ಲೆಯಲ್ಲಿ ಮರ್ಯಾದಾ ಹತ್ಯೆ ಯತ್ನ ಮಾಡಲಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ.

ತಂದೆಯಿಂದಲೇ ಮಗಳ ಮೇಲೆ ಚಾಕು ಇರಿತ
author img

By

Published : Aug 2, 2019, 9:21 AM IST

ವಿಜಯಪುರ: ತಂದೆಯ ಇಚ್ಛೆಗೆ ವಿರುದ್ಧವಾಗಿ ಬೇರೊಬ್ಬ ಯುವಕನನ್ನ ಪ್ರೀತಿಸುತ್ತಿದ್ದಾಳೆ ಎಂದು ತಂದೆಯೇ ಮಗಳ ಮೇಲೆ ಚಾಕುವಿನಿಂದ ಮನಬಂದಂತೆ ಹಲ್ಲೆ ನಡೆಸಿದ್ದಾನೆ.

ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ರಾಮತೀರ್ಥ ತಾಂಡಾದ ಯುವತಿ ಅದೇ ಗ್ರಾಮದ ಯುವಕನನ್ನು ಪ್ರಿತಿಸಿದ ತಪ್ಪಿಗೆ ಆಕೆಯೆ ತಂದೆಯೇ ಪುತ್ರಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ. ರಾಮತೀರ್ಥ ತಾಂಡಾದಲ್ಲೆ ಇರುವ ಅವರ ಸಂಬಂಧಿಯನ್ನೇ ಯುವತಿ ಪ್ರೀತಿಸುತ್ತಿದ್ದಳು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಆಕೆಯ ತಂದೆ, ಆ ಯುವಕನ ಸಹವಾಸ ಬಿಟ್ಟುಬಿಡು ಎಂದು ತಿಳಿಸಿದ್ದಾನೆ. ಜೊತೆಗೆ ಯುವಕನಿಗೂ ಬುದ್ದಿ ಹೇಳಿದ್ದಾನೆ

ತಂದೆಯಿಂದಲೇ ಮಗಳ ಮೇಲೆ ಚಾಕು ಇರಿತ

ಆದ್ರೆ, ತಂದೆಯ ಮಾತಿಗೆ ಕ್ಯಾರೆ ಅನ್ನದೇ, ಜುಲೈ 29 ರಂದು ಯುವಕ ಹಾಗೂ ಯುವತಿ ಮನೆಯೊಂದರಲ್ಲಿ ಏಕಾಂತವಾಗಿ ಕುಳಿತಿದ್ದಾಗ ರೆಡಹ್ಯಾಂಡ್ ಆಗಿ ಹಿಡಿದಿದ್ದಾನೆ. ಬಳಿಕ ಅವರಿಬ್ಬರು ಕುಳಿತಿದ್ದ ಮನೆಗೆ ಹೊರಗಡೆಯಿಂದ ಬೀಗ ಹಾಕಿ, ತಮ್ಮ ಸಂಬಂಧಿಗಳಿಗೆ ವಿಷಯ ತಿಳಿಸಿದ್ದಾನೆ. ಅಷ್ಟರಲ್ಲಾಗಲೇ ಸ್ಥಳಕ್ಕೆ ಬಂದ ಊರಿನ ಹಿರಿಯರು, ಬುದ್ದಿ ಮಾತು ಹೇಳಿ ಬೀಗ ತೆಗೆದಿದ್ದರಂತೆ. ಅದೇ ದಿನ ಸಾಯಂಕಾಲ ಸಿಟ್ಟಿನಲ್ಲಿ ತನ್ನ ಮಗಳು ಮನೆಯ ಮರ್ಯಾದೆ ಕಳೆಯುತ್ತಿದ್ದಾಳೆ ಎಂದು ಚಾಕುವಿನಿಂದ ಪುತ್ರಿಗೆ ಮನ ಬಂದಂತೆ ಇರಿದಿದ್ದಾನೆ ಎನ್ನಲಾಗಿದೆ. ಆದ್ರೆ ಕುಟುಂಬಸ್ಥರು ಮಾತ್ರ ಯಾವುದೇ ಮರ್ಯಾದಾ ಹತ್ಯೆ ಯತ್ನ ನಡೆದಿಲ್ಲ ಎಂದು ಹೇಳುತ್ತಿದ್ದಾರೆ

ಹಲ್ಲೆ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನ ಗ್ರಾಮಸ್ಥರು ಹಾಗೂ ಸಂಬಂಧಿಗಳು ವಿಜಯಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ. ತುರ್ತು ಚಿಕಿತ್ಸೆ ನಂತರ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಕೈ, ಕಾಲುಗಳಿಗೆ, ಹೊಟ್ಟೆ, ಎದೆಯ ಭಾಗ ಹಾಗೂ ಕುತ್ತಿಗೆಗೆ ಚಾಕುವಿನಿಂದ ಇರಿಯಲಾಗಿದೆ.

ಘಟನೆ ಸಂಬಂಧ ಹೊರ್ತಿ ಪೊಲೀಸ್ ಠಾಣೆಯಲ್ಲಿ ಯುವತಿ ಸಂಬಂಧಿಗಳು ಆಕೆಯ ತಂದೆ ವಿರುದ್ಧ ದೂರು ನೀಡಿದ್ದಾರೆ. ದೂರಿನ ಅನ್ವಯ ಯುವತಿ ತಂದೆಯನ್ನ ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಎಸ್​ಪಿ ಪ್ರಕಾಶ ನಿಕ್ಕಂ ಹೇಳಿದ್ದಾರೆ.

Intro:ವಿಜಯಪುರ Body:ವಿಜಯಪುರ: ಗುಮ್ಮಟನಗರಿ ವಿಜಯಪುರ ಜಿಲ್ಲೆಯಲ್ಲಿ ಮರ್ಯಾದಾ ಹತ್ಯೆ ಯತ್ನ ಮಾಡಲಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ. ಜಿಲ್ಲೆಯ ತಾಂಡಾ ವೊಂದರಲ್ಲಿ ಪ್ರಿಯಕರನ ಜೊತೆ ಮಾತನಾಡುತ್ತಿದ್ದ ವೇಳೆ ರೆಡಹ್ಯಾಂಡ ಆಗಿ ಹಿಡಿದ ತಂದೆ ಮಗಳ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಸದ್ಯ ಗಾಯಗೊಂಡಿರುವ ಯುವತಿ ಆಸ್ಪತ್ರೆ ಪಾಲಾಗಿದ್ದರೆ, ಹಲ್ಲೆ ಮಾಡಿದ ತಂದೆ ಪೊಲೀಸ್ ವಶದಲ್ಲಿದ್ದಾನೆ.
ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ರಾಮತೀರ್ಥ ತಾಂಡಾದ ಕರೀಷ್ಮಾ ಚೌಹಾಣ್. ಯುವಕನನ್ನು ಪ್ರಿತಿಸಿದ ತಪ್ಪಿಗೆ ಆಕೆಯೆ ತಂದೆ ಶಂಕರ ಶಿವಲಾಲ್ ಚೌಹಾಣ್ ಮಾರಕಾಸ್ತಗಳಿಂದ ಹಲ್ಲೆ ಮಾಡಿದ್ದಾನೆ. ರಾಮತೀರ್ಥ ತಾಂಡಾದಲ್ಲೆ ಇರುವ ಅವರ ಸಂಬಂಧಿಯಾಗಿದ್ದ ಅರುಣ್ ಅಂಬಾತನನ್ನು ಕರೀಷ್ಮಾ ಪ್ರಿತಿಸುತ್ತಿದ್ದಳು. ಆದ್ರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಆಕೆಯ ತಂದೆ ಶಂಕರ್, ಆ ಯುವಕನ ಸಹವಾಸ ಬಿಟ್ಟುಬಿಡು ಎಂದು ತಿಳಿಸಿದ್ದಾನೆ. ಜೊತೆಗೆ ಅರುಣ್ ಗೂ ಬುದ್ದಿ ಹೇಳಿದ್ದನೆ.ಅದ್ರೆ ತಂದೆಯ ಮಾತಿಗೆ ಕ್ಯಾರೆ ಅನ್ನದೆ, ಮೊನ್ನೆ ಜುಲೈ 29 ರಂದು ಅರುಣ ಹಾಗೂ ಕರಿಷ್ಮಾ ಮನೆಯೊಂದರಲ್ಲಿ ಏಕಾಂತವಾಗಿ ಕುಳಿತಿದ್ದಾಗ ರೆಡಹ್ಯಾಂಡ್ ಆಗಿ ಹಿಡಿದಿದ್ದಾನೆ. ಬಳಿಕ ಅವರಿಬ್ಬರು ಕುಳಿತಿದ್ದ ಮನೆಗೆ ಹೊರಗಡೆಯಿಂದ ಬೀಗ ಹಾಕಿ, ತಮ್ಮ ಸಂಬಂಧಿಗಳಿಗೆ ವಿಷಯ ತಿಳಿಸಿದ್ದಾನೆ. ಅಷ್ಟರಲ್ಲಾಗಲೇ ಸ್ಥಳಕ್ಕೆ ಬಂದ ಊರಿನ ಹಿರಿಯರು, ಬುದ್ದಿ ಮಾತು ಹೇಳಿ ಬೀಗ ತೆಗೆದಿದ್ದರಂತೆ. ಅದೇ ದಿನ ಸಾಯಂಕಾಲ ಶಂಕರ ಇದೇ ಸಿಟ್ಟಲ್ಲಿ ತನ್ನ ಮಗಳು ಮನೆಯ ಮರ್ಯಾದೆ ಕಳೆಯುತ್ತಿದ್ದಾಳೆ ಎಂದು ಚಾಕೂವಿನಿಂದ ಕರಿಷ್ಮಾಳಿಗೆ ಮನ ಬಂದಂತೆ ಇರಿದಿದ್ದಾನೆ ಎನ್ನಲಾಗಿದೆ. ಆದ್ರೆ ಕುಟುಂಬಸ್ಥರು ಮಾತ್ರ ಯಾವುದೇ ಮರ್ಯಾದೆ ಹತ್ಯೆ ಯತ್ನ ನಡೆದಿಲ್ಲ ಎಂದು ಹೇಳುತ್ತಿದ್ದಾರೆ.

ಬೈಟ್: ಗಂಗೂಬಾಯಿ, ಕರಿಷ್ಮಾ ಸಂಬಂಧಿ
ಹಲ್ಲೆ ಬಳಿಕ ಗಂಭೀರವಾಗಿ ಗಾಯಗೊಂಡು ಬಿದ್ದಿದ್ದ ಕರೀಷ್ಮಾಳನ್ನು ಗ್ರಾಮಸ್ಥರು ಹಾಗೂ ಸಂಬಂಧಿಗಳು ವಿಜಯಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ. ತುರ್ತು ಚಿಕಿತ್ಸೆ ನೀಡಿದ ಕಾರಣ ಕರೀಷ್ಮಾ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಎರಡೂ ಕೈಗಳಿಗೆ, ಕಾಲುಗಳಿಗೆ, ಹೊಟ್ಟೆ ಎದೆಯ ಭಾಗ ಹಾಗೂ ಕತ್ತಿಗೆ ಚಾಕೂ ಇರಿತವಾಗಿದೆ. ಘಟನೆಯ ಹಿನ್ನಲೆಯಲ್ಲಿ ಹೊರ್ತಿ ಪೊಲೀಸ್ ಠಾಣೆಯಲ್ಲಿ ಕರಿಷ್ಮಾ ಸಂಬಂಧಿಗಳು ಆಕೆಯ ತಂದೆ ಶಂಕರ್ ವಿರುದ್ಧ ದೂರು ನೀಡಿದ್ದಾರೆ. ದೂರಿನ ಅನ್ವಯ ಶಂಕರ್ ಚೌಹಾಣ್ ನನ್ನು ಹೊರ್ತಿ ಪೊಲೀಸರು ಬಂಧಿಸಿದ್ದಾರೆ. ಘಟನೆಯ ಬಗ್ಗೆ ತನಿಖೆಯನ್ನು ಮುಂದುವರೆಸಿದ್ದಾರೆ ಎಂದು ಎಸ್ಪಿ ಪ್ರಕಾಶ ನಿಕ್ಕಂ ಹೇಳಿದ್ದಾರೆ.
ಬೈಟ್: ಪ್ರಕಾಶ ನಿಕ್ಕಂ, ಎಸ್ಪಿ ವಿಜಯಪುರ
ಒಟ್ಟಾರೆ, ಪ್ರೀತಿಗೆ ಕಣ್ಣಿಲ್ಲಾ ಎಂಬ ಮಾತಿನಂತೆ ಯುವಕ ಯುವತಿ ಸಂಬಂಧಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಪ್ರೇಮದಲ್ಲಿ ಬಂಧಿಯಾಗಿದ್ದರು. ಮನೆಯ ಮಗಳು ಮನೆತನದ ಮರ್ಯಾದೆ ತೆಗೆದಳು ಎಂಬ ಕೋಪದಲ್ಲಿಯೇ ಆಕೆಯನ್ನು ಇಲ್ಲವಾಗಿಸಲು ತೀರ್ಮಾನ ಮಾಡಿದ್ದ ತಂದೆ ಜೈಲು ಸೇರಿದ್ದಾನೆ. ಯುವತಿ ಆಸ್ಪತ್ರೆ ಪಾಲಾಗಿದ್ದಾಳೆ.Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.