ವಿಜಯಪುರ: ತಂದೆಯೊಬ್ಬ ತನ್ನ ಮಗಳ ಪರೀಕ್ಷಾ ಫಲಿತಾಂಶಕ್ಕಾಗಿ ಕಾಯುತ್ತಿರುವಾಗಲೇ ಇಹಲೋಕ ತ್ಯಜಿಸಿದ್ದಾರೆ. ಆದರೆ, ಈಗ ಫಲಿತಾಂಶ ಬಂದಿದ್ದು, ಮಗಳು ಉತ್ತಮ ಅಂಕ ಗಳಿಸಿದ್ದಾಳೆ.
ಆದರೆ, ಈ ಸಂತೋಷ ಹಂಚಿಕೊಳ್ಳಲು ತಂದೆಯೇ ಇಲ್ಲ. ಎಸ್ಎಸ್ಎಲ್ಸಿ ಪರೀಕ್ಷೆ ಕೇವಲ ವಿದ್ಯಾರ್ಥಿಗಳಲ್ಲಷ್ಟೇ ಅಲ್ಲ, ಅವರ ಪೋಷಕರಲ್ಲಿಯೂ ಸಾಕಷ್ಟು ಕುತೂಹಲ ಮತ್ತು ಸಂತೋಷಕ್ಕೆ ಕಾರಣವಾಗುತ್ತೆ. ನಿನ್ನೆ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಬಂದಿದ್ದು, ಇಲ್ಲಿನ ಎಕ್ಸ್ಲೆಂಟ್ ಶಾಲೆಯ ವಿದ್ಯಾರ್ಥಿನಿ ತೇಜಸ್ವಿನಿ ಶೆಟಗಾರ ಶೇ. 82ರಷ್ಟು ಅಂಕಗಳಿಸಿ ತೇರ್ಗಡೆ ಹೊಂದಿದ್ದಾಳೆ. ಆದರೆ, ಆಕೆಯ ಮೊಗದಲ್ಲಿ ಮಾತ್ರ ಸಂತೋಷವೇ ಇರಲಿಲ್ಲ.
![father of sslc student dies](https://etvbharatimages.akamaized.net/etvbharat/prod-images/8373838_971_8373838_1597120464276.png)
ವಿಜಯಪುರ ನಗರದ ಪ್ರತಿಷ್ಠಿತ ಜಿಒಸಿಸಿ (ಸರಕಾರಿ ನೌಕರರ ಸಹಕಾರಿ ಸಂಘ) ಬ್ಯಾಂಕ್ನ ಅಸಿಸ್ಟೆಂಟ್ ಮ್ಯಾನೇಜರ್ ಮತ್ತು ಚೀಫ್ ಅಕೌಂಟೆಂಟ್ ಸಿದ್ದರಾಮ ಶೆಟಗಾರ ಕಳೆದ ಆ. 6ರಂದು ನಿಧನರಾಗಿದ್ದಾರೆ. ಮಗಳ ಸಾಧನೆಯ ಖುಷಿ ಅನುಭವಿಸಿ ಕಾಲೇಜಿಗೆ ಸೇರಿಸಬೇಕಾಗಿದ್ದ ತಂದೆ ಈಗ ಇಲ್ಲ.
ತಂದೆಯ ಅಕಾಲಿಕ ಅಗಲಿಕೆ ಒಂದೆಡೆಯಾದರೆ, ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮತ್ತೊಂದೆಡೆ. ಈ ಕಹಿ- ಸಿಹಿ ನಡುವೆ ಬಾಲಕಿ ಓದು ಮುಂದುವರಿಸಬೇಕಿದೆ.