ವಿಜಯಪುರ : ಕೃಷಿ ಚಟುವಟಿಕೆ ನಡೆಸಲು ಹೊಲಗಳಿಗೆ ತೆರಳಲು ದಾರಿ ಮಾಡಿಕೊಡುವಂತೆ ಅಖಂಡ ಕರ್ನಾಟಕ ರೈತ ಸಂಘಟನೆಯಿಂದ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯಲ್ಲಿ ಅವಧಿ ಪೂರ್ವವೇ ಮುಂಗಾರು ಆರಂಭವಾಗಿದೆ. ರೈತರು ಭಿತ್ತನೆಗಾಗಿ ಸಿದ್ಧತೆಯಲ್ಲಿದ್ದಾರೆ. ಬಸವನಬಾಗೇವಾಡಿ ತಾಲೂಕಿನ ದೇಗಿನಹಾಳ ಗ್ರಾಮದ ಕ.ಸಾ.ನಂ 428ರ ಜಮೀನಿನ ಮೂಲಕ ಹೋಗಿ ತಮ್ಮ ಜಮೀನುಗಳಿಗೆ ಹೋಗುತ್ತಿದ್ದರು. ಕ.ಸಾ.ನಂ 428 ರ ಜಮೀನಿನ ಮಾಲೀಕ ಹಾಯ್ದು ಹೋಗಲು ತಕರಾರು ಮಾಡುತ್ತಿದ್ದಾನೆ.
ನಕ್ಷೆಯಲ್ಲಿ ದಾರಿ ಇದ್ದರೆ ಮಾತ್ರ ಹೋಗಿ ಇಲ್ಲವಾದ್ರೆ, ನ್ಯಾಯಾಲಯಕ್ಕೆ ಹೋಗಿ ಪಡೆದುಕೊಂಡು ಬಂದು ಹೊಲದಲ್ಲಿ ಹಾಯ್ದು ಹೋಗಿ ಎಂದು ಇತರೆ ರೈತರಿಗೆ ತಕರಾರು ಮಾಡುತ್ತಿದ್ದಾನೆ ಎಂದು ರೈತರು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿದರು.
ಇನ್ನೊಂದು ವಾರದಲ್ಲಿ ಭಿತ್ತನೆ ಕಾರ್ಯ ಆರಂಭವಾಗುತ್ತಿದೆ. ಚಕ್ಕಡಿ ಮೂಲಕ ರೈತರು ಹೊಲಗಳಿಗೆ ಹೋಗಿ ಭಿತ್ತನೆ ಕಾರ್ಯ ಮಾಡಬೇಕಾಗುತ್ತದೆ. ಹೀಗಾಗಿ ರೈತರಿಗೆ ತೊಂದರೆಯಾಗುತ್ತಿದೆ. ಜಮೀನುಗಳಿಗೆ ತೆರಳಲು ದಾರಿ ಮಾಡಿಕೊಡುವಂತೆ ರೈತರು ಮನವಿ ಸಲ್ಲಿಸಿದರು.