ವಿಜಯಪುರ: ರಾಜ್ಯ ಸಚಿವ ಸಂಪುಟ ವಿಸ್ತರಿಸುವ ಸುದ್ದಿ ತಿಳಿಯುತ್ತಿದ್ದಂತೆ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಸಿಎಂ ಯಡಿಯೂರಪ್ಪಗೆ ಅಭಿಮಾನಿಗಳು ಒತ್ತಡ ಹೆರುತ್ತಿದ್ದಾರೆ.
ಯತ್ನಾಳ್ ಹಿಂದು ಪರ ಕಾಳಜಿವುಳ್ಳವರು, ಎರಡು ಬಾರಿ ಸಚಿವರಾದ ಪರಿಣಿತಿ ಹೊಂದಿದವರು, ಉಪ ಚುನಾವಷೆಯಲ್ಲಿ ಸ್ಟಾರ್ ಪ್ರಚಾರಕರಾಗಿ ಪ್ರಚಾರ ಮಾಡಿ ಉತ್ತರ ಕರ್ನಾಟಕದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಿಸಲು ಶ್ರಮಿಸಿದ್ದಾರೆ, ಅಲ್ಲದೆ ನೆರೆ ಸಂತ್ರಸ್ತರ ಪರವಾಗಿ ಧ್ವನಿ ಎತ್ತಿದ್ದಾರೆ, ಯತ್ನಾಳ್ ಅವರನ್ನ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು, ಯತ್ನಾಳ್ ಅಭಿಮಾನಿಗಳು ಹಾಗೂ ಬೆಂಬಲಿಗರು ಬಿಜೆಪಿ ವರಿಷ್ಠರಿಗೆ ಒತ್ತಡ ಹಾಕುತ್ತಿದ್ದಾರೆ.
ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಯತ್ನಾಳ ಗೌಡ್ರು ಫಾರ್ ಮಿನಿಸ್ಟರ್ ಎಂಬ ಹೆಸರಿನಿಂದ ಯತ್ನಾಳ ಅಭಿಮಾನಿಗಳು ಫೇಸ್ಬುಕ್, ವಾಟ್ಸಪ್, ಟಿಕ್ ಟಾಕ್ ಗಳಲ್ಲಿ ಸಚಿವ ಸ್ಥಾನ ನೀಡುವಂತೆ ಪೋಸ್ಟ್ಗಳನ್ನು ಹರಿ ಬಿಡುತ್ತಿದ್ದಾರೆ.