ವಿಜಯಪುರ: ಸರ್ಕಾರದ ಆದೇಶದಂತೆ ಕೊರೊನಾ ನಿಯಂತ್ರಣಕ್ಕೆ ಕರ್ಫ್ಯೂ ಜಾರಿಯಾದ ಕಾರಣ ಹುಬ್ಬಳ್ಳಿಯಿಂದ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಕಾರ್ಮಿಕರು ಮುಂದಿನ ಬಸ್ ಇಲ್ಲದೇ ಬೇರೆ ಕಡೆ ಹೋಗಲೂ ದಾರಿ ಕಾಣದೆ ಬಸ್ ನಿಲ್ದಾಣದಲ್ಲೇ ಇರುವಂತಾಗಿದೆ.
ಪುಟಾಣಿ ಮಕ್ಕಳೊಂದಿಗೆ ನಗರದ ಕೇಂದ್ರೀಯ ಬಸ್ ನಿಲ್ದಾಣದ ಫುಟ್ಪಾತ್ ಮೇಲೆ ಕಾರ್ಮಿಕ ದಂಪತಿ, ಸ್ನೇಹಿತರು ದಿನ ಕಳೆಯುವಂತಾಗಿದೆ. ಸೋಲಾಪುರ ಜಿಲ್ಲೆಯ ಸಾಂಗೋಲಾ ಗ್ರಾಮಕ್ಕೆ ಈ ಕಾರ್ಮಿಕರು ತೆರಳಲು ಮುಂದಾಗಿದ್ದರು. ತಮ್ಮ ಊರಿಗೆ ವಾಪಸ್ ಹೋಗಲು ಕೆಲಸ ಸ್ಥಳದಿಂದ ವಿಜಯಪುರಕ್ಕೆ ಬಂದಿಳಿದಿದ್ದರು.
ಇಲ್ಲಿಂದ ಸಾಂಗೋಲಾಕ್ಕೆ ಹೋಗಲು ಬಸ್ ಇಲ್ಲದೇ ಇದ್ದಿದ್ದರಿಂದ ಇಲ್ಲೇ ಉಳಿಯಬೇಕಾದ ಅನಿವಾರ್ಯತೆ ಉಂಟಾಗಿದೆ. ಇವರು ಹುಬ್ಬಳ್ಳಿಯಲ್ಲಿ ಗೌಂಡಿ ಕೆಲಸ ಮಾಡಿಕೊಂಡಿದ್ದರು. ಈಗ ತಮ್ಮೂರಿಗೆ ಹೋಗಲು ಬಸ್ ಕೂಡ ಇಲ್ಲ, ಖಾಸಗಿ ವಾಹನವೂ ಇಲ್ಲದೇ ಗೊಂದಲಕ್ಕೀಡಾಗಿದ್ದಾರೆ.