ETV Bharat / state

ವಿಜಯಪುರ: ಒಣದ್ರಾಕ್ಷಿ ಬೆಲೆ ಕುಸಿತ, ರೈತರು ಕಂಗಾಲು

ವಿಜಯಪುರ ಜಿಲ್ಲೆಯಲ್ಲಿ ಈ ವರ್ಷ ಒಣ ದ್ರಾಕ್ಷಿ ಬೆಲೆ ಏಕಾಏಕಿ ಕುಸಿತ ಕಂಡಿದ್ದು, ರೈತರು ಕಂಗಾಲಾಗಿದ್ದಾರೆ.

fall-in-price-of-raisin-in-vijaypur
ವಿಜಯಪುರ : ಒಣದ್ರಾಕ್ಷಿ ಬೆಲೆ ಕುಸಿತ..ರೈತರು ಕಂಗಾಲು
author img

By

Published : Jun 20, 2023, 10:53 PM IST

ವಿಜಯಪುರ : ಒಣದ್ರಾಕ್ಷಿ ಬೆಲೆ ಕುಸಿತ..ರೈತರು ಕಂಗಾಲು

ವಿಜಯಪುರ : ದ್ರಾಕ್ಷಿ ಕಣಜವೆಂದೇ ಹೆಸರುವಾಸಿಯಾಗಿರುವ ವಿಜಯಪುರ ಜಿಲ್ಲೆಯಲ್ಲಿ ಈ ವರ್ಷ ಒಣದ್ರಾಕ್ಷಿ ಬೆಲೆ ಕುಸಿದಿದೆ. ಈ ಹಿಂದೆ ಒಣದ್ರಾಕ್ಷಿ ಪ್ರತಿ ಕೆಜಿಗೆ 150ರಿಂದ 250 ರೂಪಾಯಿವರೆಗೆ ಮಾರಾಟವಾಗುತ್ತಿತ್ತು. ಈ ಬಾರಿ ಕೆಜಿಗೆ 60ರಿಂದ 110 ರೂಪಾಯಿಗೆ ಮಾರಾಟವಾಗುತ್ತಿದೆ. ಅಲ್ಲದೆ ಶೀತಲ ಗೃಹದಲ್ಲಿ ಸಂಗ್ರಹಿಸಿಟ್ಟ ಒಣದ್ರಾಕ್ಷಿ ವಾಪಸ್ ಪಡೆಯಲು ಹಣ ನೀಡಲು ರೈತರಿಗೆ ಆಗುತ್ತಿಲ್ಲ. ಇದರಿಂದಾಗಿ ದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದಾರೆ.

ರಾಜ್ಯದಲ್ಲಿ ಒಟ್ಟು 36,371 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ವಿಜಯಪುರ ಜಿಲ್ಲೆಯಲ್ಲಿಯೇ 25,575 ಹೆಕ್ಟರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಶೇ. 70.32ರಷ್ಟು ದ್ರಾಕ್ಷಿಯನ್ನು ವಿಜಯಪುರದಲ್ಲಿಯೇ ಬೆಳೆಯಲಾಗುತ್ತದೆ. ಪ್ರತಿ ವರ್ಷ ಒಣದ್ರಾಕ್ಷಿ ರೈತರಿಗೆ ಲಾಭ ತಂದು ಕೊಡುತ್ತಿತ್ತು. ಆದರೆ ಈ ವರ್ಷ ಬೆಲೆ ಕುಸಿತ ಕಂಡಿರುವ ಕಾರಣ ದ್ರಾಕ್ಷಿ ಬೆಳೆಗಾರ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಪ್ರತಿ ವರ್ಷ ವಿಜಯಪುರ ಜಿಲ್ಲೆಯೊಂದರಲ್ಲೇ 6 ಲಕ್ಷ ಟನ್ ದ್ರಾಕ್ಷಿ ಬೆಳೆಯಲಾಗುತ್ತಿದೆ. ಇದರಲ್ಲಿ 1.25 ಲಕ್ಷ ಟನ್ ಒಣದ್ರಾಕ್ಷಿಯಾಗಿ ಪರಿವರ್ತನೆ ಮಾಡಲಾಗುತ್ತಿದೆ. ಈ ಬಾರಿ ಉತ್ತಮ ವಾತಾವರಣ ಇದ್ದ ಕಾರಣ ಒಣದ್ರಾಕ್ಷಿ 1.35 ಲಕ್ಷ ಟನ್ ಇಳುವರಿ ಬಂದಿದೆ.

ಒಟ್ಟು ರಾಜ್ಯದಲ್ಲಿ 6 ಲಕ್ಷ ಟನ್ ದ್ರಾಕ್ಷಿ ಬೆಳೆ ಬೆಳೆಯಲಾಗುತ್ತಿದೆ. ಈ ಮೂಲಕ ಪ್ರತಿ ವರ್ಷ 4 ಸಾವಿರ ಕೋಟಿ ರೂ. ಆದಾಯ ಬರುತ್ತದೆ. 1 ಲಕ್ಷ ಕುಟುಂಬ ಇದೇ ದ್ರಾಕ್ಷಿ ಬೆಳೆಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದೆ. ಇದರ ಜೊತೆಗೆ ಸಾವಿರಾರು ಜನ ಕೂಲಿ ಕಾರ್ಮಿಕರು ಬದುಕು ಸಾಗಿಸುತ್ತಿದ್ದಾರೆ.

ದ್ರಾಕ್ಷಿ ಬೆಳೆಗಾರರ ಪೂರ್ವಭಾವಿ ಸಭೆ : ಈ ಸಂಬಂಧ ದ್ರಾಕ್ಷಿ ಬೆಳೆಗಾರರ ಸಂಘವು ಜಿಲ್ಲಾ ಪಂಚಾಯತ್​ ಸಮೀಪದ ಕೃಷಿ ತಂತ್ರಜ್ಞಾನ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಿತು. ಸಭೆಯಲ್ಲಿ ದ್ರಾಕ್ಷಿ ಬೆಳೆಗಾರರು ತಮ್ಮ ಸಂಕಷ್ಟ ತೋಡಿಕೊಂಡರು. ರಾಜ್ಯ ಸರ್ಕಾರ ದ್ರಾಕ್ಷಿ ಬೆಳೆಗಾರರಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಶಾಲೆಯಲ್ಲಿ ನೀಡುವ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಒಣದ್ರಾಕ್ಷಿ ಸೇರಿಸಬೇಕು. ವಾರಕ್ಕೆ ಒಂದು ದಿನವಾದರೂ ಮಕ್ಕಳಿಗೆ ಕನಿಷ್ಟ 50 ಗ್ರಾಂ ಒಣ ದ್ರಾಕ್ಷಿ ಸವಿಯಲು ಅವಕಾಶ ನೀಡಬೇಕು ಎಂದು ಒತ್ತಾಯಿಸಲಾಯಿತು.

ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ದ್ರಾಕ್ಷಿ ಬೆಳೆಗಾರರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸಿಎಂ ಭೇಟಿ ಮಾಡಲು ನಿಯೋಗ ರಚಿಸಿ ಮನವಿ ಸಲ್ಲಿಸಲು ನಿರ್ಧರಿಸಲಾಯಿತು. ದ್ರಾಕ್ಷಿ ಬೆಳೆಗಾರರರು ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು. ಒಣ ದ್ರಾಕ್ಷಿಗೆ ಬೆಂಬಲ ಬೆಲೆ ಘೋಷಿಸಿ ದ್ರಾಕ್ಷಿ ಬೆಳೆಗಾರರ ಬೆಂಬಲಕ್ಕೆ ನಿಲ್ಲಬೇಕು ಎಂದು ಬೆಳೆಗಾರರು ಒತ್ತಾಯಿಸಿದರು.

ಇದನ್ನೂ ಓದಿ : ಬೆರಳ ತುದಿಯಲ್ಲೇ ಸಿಗಲಿದೆ ಮಾಹಿತಿ: ಬೆಳೆ ಸಮೀಕ್ಷೆಯ ಗೊಂದಲ ನಿವಾರಣೆಗೆ 'ಬೆಳೆ ದರ್ಶಕ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.