ETV Bharat / state

ಅಧಿಕಾರಿಗಳು ಬರುತ್ತಿದ್ದಂತೆ ಆಸ್ಪತ್ರೆಗೆ ಬೀಗ ಜಡಿದು ಕಾಲ್ಕಿತ್ತ ನಕಲಿ ವೈದ್ಯ! - kannadanews

ವಿಜಯಪುರ ಜಿಲ್ಲೆಯಲ್ಲಿ ಹೆಚ್ಚಾಗಿರುವ ನಕಲಿ ವೈದ್ಯರ ಹಾವಳಿ ನಿಯಂತ್ರಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ.

ಅಧಿಕಾರಿಗಳು ಬರುತ್ತಿದ್ದಂತೆ ಕಾಲ್ಕಿತ್ತ ನಕಲಿ ವೈದ್ಯ
author img

By

Published : Jun 18, 2019, 9:52 AM IST

ವಿಜಯಪುರ: ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾದ ಆರೋಪ ಕೇಳಿ ಬಂದ ಹಿನ್ನೆಲೆ ಟಿಹೆಚ್ಒ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.

ಮುದ್ದೇಬಿಹಾಳ ನಗರದಲ್ಲಿ ನಕಲಿ ವೈದ್ಯರು ಇದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಇಂದು ಟಿಹೆಚ್ಒ ತಿವಾರಿ ನಗರದ ಇಂದಿರಾ ಸರ್ಕಲ್ ಬಳಿ ಇರುವ ಖಾಸಗಿ ಆಸ್ಪತ್ರೆಯ ಮೇಲೆ ದಾಳಿ ನಡೆಸಿದರು. ಆದ್ರೆ ಮೊದಲೇ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಪಡೆದುಕೊಂಡಿದ್ದ ಆ ನಕಲಿ ವೈದ್ಯ ಆಸ್ಪತ್ರೆಗೆ ಹಾಕಿದ್ದ ನಾಮ ಫಲಕ ಸಮೇತ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಇನ್ನು ಪರಿಶೀಲನೆಗೆ ಆಗಮಿಸಿದ ಟಿಹೆಚ್ಒ ಆಸ್ಪತ್ರೆ ಬಗ್ಗೆ ಮಾಹಿತಿ‌ ಪಡೆದುಕೊಂಡು ಈ ವೈದ್ಯನ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಹೇಳಿದರು.

ಅಧಿಕಾರಿಗಳು ಬರುತ್ತಿದ್ದಂತೆ ಕಾಲ್ಕಿತ್ತ ನಕಲಿ ವೈದ್ಯ

ಇನ್ನು ಮೂಲಗಳ ಪ್ರಕಾರ ಡಾ. ಎ.ಹೆಚ್.ತಾರಗಾರ ನಕಲಿ ದಾಖಲೆಗಳನ್ನು ಇಟ್ಟುಕೊಂಡು ಆಸ್ಪತ್ರೆ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ. ಸ್ಥಳೀಯ ತಾಲೂಕು ವೈಧ್ಯಾಧಿಕಾರಿಗಳು ನಕಲಿ ವೈದ್ಯರ ವೀಕ್ಷಣೆ ಮಾಡಿ ಕ್ರಮ ಕೈಗೊಳ್ಳಲು ಬರುತ್ತಿರುವ ಸುಳಿವು ತಿಳಿದು ತಾರಗಾರ ತನ್ನ ಆಸ್ಪತ್ರೆಗೆ ಹಾಕಿದ್ದ ನಾಮ ಫಲಕ ಕಿತ್ತು ಹಾಕಿ ಆಸ್ಪತ್ರೆಗೆ ಬೀಗ ಜಡಿದು ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

Intro:File name : dublicate doctor
Formate: av
Reporter: Suraj Risaldar
Place: vijaypur
Date: 17-06-2019

ಸ್ಲಗ್: ಅಧಿಕಾರಿಗಳು ಬರುತ್ತಿದ್ದಂತೆ ಕಾಲ ಕಿತ್ತ ನಕಲಿ ವೈದ್ಯ...

Anchor: ವಿಜಯಪುರ ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾದಂತೆ ಕಂಡು ಬಂದ ಕಾರಣ ಜಿಲ್ಲಾ ವೈದ್ಯಾಧಿಕಾರಿ ಹಾಗೂ ಟಿಎಚ್ಓ ಅಧಿಕಾರಿಗಳು ಕಾರ್ಯಚರಣೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. Body:ಮುದ್ದೇಬಿಹಾಳ ನಗರದಲ್ಲಿ ಸುಮಾರು ನಕಲಿ ವೈದ್ಯರು ಇರುವುದು ಹಿನ್ನೆಲೆ ಇಂದು ಟಿಎಚ್ಓ ತಿವಾರಿ ಅವರು ನಗರದ ಇಂದಿರಾ ಸರ್ಕಲ್ ಬಳಿ ಇರುವ ಖಾಸಗಿ ದವಾಖಾನೆಯ ಮೇಲೆ ದಾಳಿ ನಡೆಸಿದರು. ಆದ್ರೆ ಮೊದಲೇ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಪಡೆದುಕೊಂಡಿದ್ದ ಆ ನಕಲಿ ವೈದ್ಯ ದವಾಖಾನೆಗೆ ಹಾಕಿದ್ದ ನಾಮ ಫಲಕ ಸಮೇತ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಇನ್ನು ಪರಿಶೀಲನೆಗೆ ಆಗಮಿಸಿದ ಟಿಎಚ್ಓ ಅವರು ದವಾಖಾನೆಯ ಬಗ್ಗೆ ಮಾಹಿತಿ‌ ಪಡೆದುಕೊಂಡು ಮುಂದೆ ಈ ವೈದ್ಯನ ವಿರುದ್ಧ ಕಠೀಣ ಕ್ರಮ ಜರುಗಿಸುವುದಾಗಿ ಹೇಳಿದರು.

ಇನ್ನು ಮೂಲಗಳ ಪ್ರಕಾರ ಡಾ. ಎ. ಎಚ್ ತಾರಗಾರ ಈ ದವಾಖಾನೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಅಷ್ಟೆ ಅಲ್ಲದೆ ನಕಲಿ ದಾಖಲೆಗಳನ್ನು ಇಟ್ಟುಕೊಂಡು ವೃತಿ ನಡೆಸುತ್ತಿದ್ದನು ಎನ್ನಲಾಗಿದೆ. ಇನ್ನು ತನ್ನ ಭಂಡ ಪುಂಡಾಟಿಕೆ ತೋರಿಸಿ ಯಾರಿಗೂ ಹೆದರದೆ ವೃತಿಯನ್ನು ಮುಂದುವರೆಸಿದ್ದ ಈ ನಕಲಿ ವೈದ್ಯ ಎ. ಎಚ್. ತಾರಗಾರ ಸ್ಥಳೀಯ ತಾಲೂಕಾ ವೈಧ್ಯಾಧಿಕಾರಿಗಳು ನಕಲಿ ವೈದ್ಯರ ವೀಕ್ಷಣೆ ಮಾಡಿ ಕ್ರಮಕೈಗೊಳ್ಳಲ್ಲು ಬರುತ್ತಿರುವ ಸುಳಿವು ಅರಿತು ಭಂಡನಂತಿದ್ದ ಈ ವೈದ್ಯ ಇಲಿಯಾಗಿ ತನ್ನ ಆಸ್ಪತ್ರೆಗೆ ಹಾಕಿದ್ದ ನಾಮಫಲಕ ಕಿತ್ತು ಹಾಕಿ ಆಸ್ಪತ್ರೆಗೆ ಬೀಗ ಜಡಿದು ಸ್ಥಳದಿಂದ ಪರಾರಿಯಾಗಿದ್ದಾನೆConclusion:ಇನ್ನು ತಾಲೂಕಿನಲ್ಲಿ ನಡೆಯುತ್ತಿರುವ ನಕಲಿ ವೈದ್ಯಯರ ಪುಂಡಾಟಿಕೆಗೆ ಜಿಲ್ಲಾ ವೈಧ್ಯಾಧಿಕಾರಿಗಳು ಬಂದು ವೀಕ್ಷಣೆ ಮಾಡಿ ಕ್ರಮ ಜರುಗಿಸುತ್ತಾರೋ ಅಥವಾ ಇಲ್ಲಿದ್ದ ತಾಲೂಕಾ ವೈದ್ಯಾಧಿಕಾರಿಗಳೆ ಇವರಿಗೆ ಬ್ರೇಕ್ ಹಾಕ್ತಾರೋ ಕಾದು ನೋಡಬೇಕಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.