ETV Bharat / technology

ಕಾರು ಬೇಕೇ ಕಾರು! ಆರು ಏರ್​ ಬ್ಯಾಗ್ಸ್​, ಸೇಫ್ಟಿಗೆ ಹೆಚ್ಚಿನ ಒತ್ತು, ಕೈಗೆಟುಕುವ ದರದಲ್ಲಿ ಇಲ್ಲಿವೆ ಹಲವು ಎಸ್​ಯುವಿಗಳು! - AFFORDABLE SUVS WITH SIX AIRBAGS

Affordable SUV Cars: ನಾವು ಕಾರು ಖರೀದಿಸುವಾಗ ಹೆಚ್ಚು ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಗಮನ ಕೊಡುವುದು ಮುಖ್ಯ. ಕೈಗೆಟುಕುವ ದರದಲ್ಲಿ ಸೇಫ್ಟಿ ಫೀಚರ್​ಗಳ ಜೊತೆ ಅನೇಕ ಸೌಲಭ್ಯಗಳಿರುವ ಕಾರುಗಳ ಬಗ್ಗೆ ಸಣ್ಣ ಮಾಹಿತಿ ಇಲ್ಲಿದೆ..

AFFORDABLE SUVS CARS  SUVS WITH SIX AIRBAGS IN INDIA  AFFORDABLE CARS SAFETY FEATURES  AFFORDABLE CAR PRICE
ಕಾರು ಬೇಕೆ ಕಾರು! ಆರು ಏರ್​ ಬ್ಯಾಗ್ಸ್​ (Photo Credit: Mahindra, Nissan, Hyundai, Skoda)
author img

By ETV Bharat Tech Team

Published : 2 hours ago

Affordable SUVs With Six Airbags: ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಕಾರುಗಳು ಲಭ್ಯವಿದೆ. ಆದರೆ, ನೀವು ಕಾರು ಖರೀದಿಸಲು ಹೋದಾಗ ನಿಮ್ಮ ಮೊದಲ ಗಮನ ಕಾರಿನ ಸುರಕ್ಷತೆಯಾಗಿರಬೇಕು. ಈಗ ಕಂಪನಿಗಳು ಈ ವಿಷಯದಲ್ಲಿ ವಿಶೇಷ ಕಾಳಜಿ ವಹಿಸಲು ಪ್ರಾರಂಭಿಸಿವೆ. ಹೆಚ್ಚಿನ ಕಂಪನಿಗಳು ತಮ್ಮ ಕಾರುಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಪ್ರಮಾಣಿತವಾಗಿ ಒದಗಿಸುತ್ತಿವೆ.

ಕಳೆದ ಕೆಲವು ವರ್ಷಗಳಲ್ಲಿ ಭಾರತ ಸರ್ಕಾರದ ಪ್ರಯತ್ನ ಮತ್ತು ಜನರ ಜಾಗೃತಿಯಿಂದಾಗಿ ದೇಶದಲ್ಲಿ ಮಾರಾಟವಾಗುವ ಕಾರುಗಳು ಮೊದಲಿಗಿಂತ ಹೆಚ್ಚು ಸುರಕ್ಷಿತವಾಗುತ್ತಿವೆ. ಜನರ ದೃಷ್ಟಿಕೋನದಿಂದ ಕಾರಿನಲ್ಲಿ ಹೆಚ್ಚು ಏರ್‌ಬ್ಯಾಗ್‌ಗಳನ್ನು ಅಳವಡಿಸಲಾಗುತ್ತಿದೆ. ನೀವು ಸಹ ಕೈಗೆಟುಕುವ ಬೆಲೆಯಲ್ಲಿ ಸುರಕ್ಷಿತ ಎಸ್‌ಯುವಿ ಖರೀದಿಸಲು ಬಯಸಿದರೆ, ಇಲ್ಲಿ ನಾವು ನಿಮಗೆ 6 ಏರ್‌ಬ್ಯಾಗ್‌ಗಳುಳ್ಳ ಕೆಲ ಎಸ್‌ಯುವಿಗಳ ಬಗ್ಗೆ ಹೇಳುತ್ತಿದ್ದೇವೆ.

Kia Sonet: ಈ ಪಟ್ಟಿಯಲ್ಲಿರುವ ಮೊದಲ SUV Kia Sonet ಆಗಿದೆ. ಅದರ ಎಲ್ಲಾ ರೂಪಾಂತರಗಳಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಒದಗಿಸಲಾಗಿದೆ. ಇದರ ಬೆಲೆಯನ್ನು 7.99 ಲಕ್ಷದಿಂದ 15.75 ಲಕ್ಷದವರೆಗೆ ಇರಿಸಲಾಗಿದೆ. Kia Sonet ನ ಪ್ರಮಾಣಿತ ಸುರಕ್ಷತಾ ವೈಶಿಷ್ಟ್ಯಗಳ ಕುರಿತು ಮಾತನಾಡುವುದಾದರೆ, ಇದು ESC, VSM, ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್, TPMS ಮತ್ತು ಇತರ ವೈಶಿಷ್ಟ್ಯಗಳನ್ನು ಹೊಂದಿದೆ.

Skoda Kylaq: ಕಂಪನಿಯು ಸ್ಕೋಡಾ ಕೈಲಾಕ್ ಅನ್ನು ರೂ 7.89 ಲಕ್ಷದ ಆರಂಭಿಕ ಬೆಲೆಗೆ ಬಿಡುಗಡೆ ಮಾಡಿರುವುದು ಗೊತ್ತಿರುವ ಸಂಗತಿ. ಇದರ ಟಾಪ್-ಸ್ಪೆಕ್ ರೂಪಾಂತರವು ರೂ 14.40 ಲಕ್ಷವಾಗಿದೆ. ಕಂಪನಿಯು ತನ್ನ ಎಲ್ಲಾ ರೂಪಾಂತರಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಪ್ರಮಾಣಿತವಾಗಿ ನೀಡುತ್ತದೆ. ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ ಇದು ESC, ಟ್ರ್ಯಾಕ್ಷನ್​ ಕಂಟ್ರೋಲ್​, ಮೂರು - ಪಾಯಿಂಟ್ ಸೀಟ್ ಬೆಲ್ಟ್‌ಗಳು, ಎಲ್ಲ ಸೀಟ್‌ಗಳಿಗೆ ಹೊಂದಾಣಿಕೆ ಮಾಡಬಹುದಾದ ಹೆಡ್ ರೆಸ್ಟ್ರೆಂಟ್‌ಗಳು ಮತ್ತು ಎಲ್ಲಾ ಟ್ರಿಮ್‌ಗಳಲ್ಲಿ ಹಿಂಭಾಗದ ಸೀಟ್‌ಗಳಿಗೆ ISOFIX ಚೈಲ್ಡ್ ಸೀಟ್ ಮೌಂಟ್‌ಗಳನ್ನು ಸಹ ಹೊಂದಿದೆ.

Mahindra XUV 3XO: ಮಹೀಂದ್ರಾ XUV300 ಅನ್ನು ಅಪ್​ಡೇಟ್​ ಮಾಡಿದ ನಂತರ, ಕಂಪನಿಯು XUV 3XO ಹೆಸರಿನೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದರಲ್ಲಿ ಕಂಪನಿಯು ಆರು ಏರ್‌ಬ್ಯಾಗ್‌ಗಳನ್ನು ಒದಗಿಸುತ್ತಿದೆ. ಇದರ ಆರಂಭಿಕ ಬೆಲೆ ರೂ 7.49 ಲಕ್ಷ ಮತ್ತು ಟಾಪ್-ಸ್ಪೆಕ್ ರೂಪಾಂತರದ ಬೆಲೆಯನ್ನು ರೂ 14.99 ಲಕ್ಷದಲ್ಲಿ ಇರಿಸಲಾಗಿದೆ. ಕಂಪನಿಯು ಮೂರು ಎಂಜಿನ್‌ಗಳನ್ನು ನೀಡುತ್ತದೆ: 1.2-ಲೀಟರ್ ಟರ್ಬೊ-ಪೆಟ್ರೋಲ್ (111bhp), 1.2-ಲೀಟರ್ ಡೈರೆಕ್ಟರ್-ಇಂಜೆಕ್ಷನ್ ಟರ್ಬೊ-ಪೆಟ್ರೋಲ್ (131bhp) ಮತ್ತು 1.5-ಲೀಟರ್ ಡೀಸೆಲ್ (117bhp).

Hyundai Exter: ಕೊರಿಯನ್ ಕಾರು ತಯಾರಕರಿಂದ ಹ್ಯುಂಡೈ ಎಕ್ಸ್‌ಟರ್‌ನ ಆರಂಭಿಕ ಬೆಲೆ ರೂ 6.13 ಲಕ್ಷ ಮತ್ತು ಇದು ಆರು ಏರ್‌ಬ್ಯಾಗ್‌ಗಳನ್ನು ನೀಡುವ ಭಾರತದ ಅಗ್ಗದ SUV ಗಳಲ್ಲಿ ಒಂದಾಗಿದೆ. ಇದು 1.2-ಲೀಟರ್, 4-ಸಿಲಿಂಡರ್ ಪೆಟ್ರೋಲ್ ಎಂಜಿನ್ (83bhp, 114Nm) ಹೊಂದಿದೆ. 5-ಸ್ಪೀಡ್ MT ಅಥವಾ 5-ಸ್ಪೀಡ್ AMT ಗೇರ್‌ಬಾಕ್ಸ್ ಅನ್ನು ಇದಕ್ಕೆ ಸೇರಿಸಲಾಗಿದೆ. ಇದರ ಹೊರತಾಗಿ, ಕಾರ್ಖಾನೆಯಲ್ಲಿ ಅಳವಡಿಸಲಾದ CNG ಕಿಟ್ ಕೂಡ ಎಕ್ಸ್‌ಟರ್‌ನೊಂದಿಗೆ ಲಭ್ಯವಿದೆ.

Nissan Magnite: ನಿಸ್ಸಾನ್ ಮ್ಯಾಗ್ನೈಟ್‌ನ ಹೆಸರು ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇದು ಅತ್ಯಂತ ಮಿತವ್ಯಯದ SUV ಆಗಿದೆ. ಇದರಲ್ಲಿ 6-ಏರ್‌ಬ್ಯಾಗ್‌ಗಳು ಪ್ರಮಾಣಿತವಾಗಿ ಲಭ್ಯವಿದೆ. ಇದರ ಆರಂಭಿಕ ಬೆಲೆ 5.99 ಲಕ್ಷ ರೂ. ಆಗಿದೆ. ಇತರ ಸುರಕ್ಷತಾ ವೈಶಿಷ್ಟ್ಯಗಳಂತೆ, ಈ ಕಾರು ಮೂರು-ಪಾಯಿಂಟ್ ಸೀಟ್ ಬೆಲ್ಟ್‌ಗಳು, ISOFIX ಆಂಕರ್‌ಗಳು, ಟ್ರ್ಯಾಕ್ಷನ್​ ಕಂಟ್ರೋಲ್​, TPMS ಮತ್ತು ಎಲ್ಲ ಪ್ರಯಾಣಿಕರಿಗೆ ಹಿಲ್-ಸ್ಟಾರ್ಟ್ ಅಸಿಸ್ಟ್‌ನಂತಹ ಗುಣಮಟ್ಟದ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಎರಡು 1.0-ಲೀಟರ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ಗಳನ್ನು ಹೊಂದಿದೆ, ನ್ಯಾಚುರಲಿ ಆಸ್ಪಿರೇಟೆಡ್​ ಮತ್ತು ಟರ್ಬೋಚಾರ್ಜ್ಡ್ ಎಂಜಿನ್‌ಗಳನ್ನು ಹೊಂದಿದೆ.

New Gen Maruti Dzire: ಹೊಸ ತಲೆಮಾರಿನ ಮಾರುತಿ ಡಿಜೈರ್​ನ ಎಕ್ಸ್ ಶೋ ರೂಂ ಬೆಲೆ 6 ಲಕ್ಷ 79 ಸಾವಿರ, ಈ ಕಾರಿನಲ್ಲಿ ರಿಯರ್ ಪಾರ್ಕಿಂಗ್ ಸೆನ್ಸಾರ್, 360 ಡಿಗ್ರಿ ಕ್ಯಾಮೆರಾ, ಇಎಸ್‌ಸಿ ಮತ್ತು 6 ಏರ್‌ಬ್ಯಾಗ್‌ಗಳನ್ನು ಸುರಕ್ಷತಾ ಫೀಚರ್‌ಗಳಾಗಿ ನೀಡಲಾಗಿದೆ. ಕಾರು 1.2 ಲೀಟರ್ 3-ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ, ಇದು ಗರಿಷ್ಠ 80bhp ಶಕ್ತಿಯನ್ನು ಮತ್ತು 112Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

Maruti Suzuki Swift New gen:ಹೊಸ ತಲೆಮಾರಿನ ಮಾರುತಿ ಸ್ವಿಫ್ಟ್​ನ ಎಕ್ಸ್ ಶೋ ರೂಂ ಬೆಲೆ 6.49 ಲಕ್ಷ ರೂ. ಸ್ವಿಫ್ಟ್‌ನ 6 ರೂಪಾಂತರಗಳಲ್ಲಿ ನೀವು (LXi, VXi, VXi (o), ZXi, ZXi+ ಮತ್ತು ZXI+) ಡ್ಯುಯಲ್ ಟೋನ್ ಅನ್ನು ಪಡೆಯುತ್ತೀರಿ. ಸ್ವಿಫ್ಟ್‌ನ ಪೆಟ್ರೋಲ್ ಎಂಜಿನ್ 80 bhp ಮತ್ತು 112 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಿಲ್ ಹೋಲ್ಡ್ ಕಂಟ್ರೋಲ್, ಇಎಸ್‌ಪಿ, ನ್ಯೂ ಸಸ್ಪೆನ್ಷನ್​ ಮತ್ತು ಪ್ರತಿ ರೂಪಾಂತರಕ್ಕೆ 6 ಏರ್‌ಬ್ಯಾಗ್‌ಗಳನ್ನು ಒಳಗೊಂಡಿರುವ ಅನೇಕ ಸುರಕ್ಷತಾ ವೈಶಿಷ್ಟ್ಯಗಳನ್ನು ನೀವು ಈ ಕಾರಿನಲ್ಲಿ ಪಡೆಯುತ್ತೀರಿ..

Hyundai Grand i10 Nios: ಹ್ಯುಂಡೈ ಗ್ರಾಂಡ್ ಐ10 ನಿಯೋಸ್​ನ ಆರಂಭಿಕ ಎಕ್ಸ್ ಶೋ ರೂಂ ಬೆಲೆ 5 ಲಕ್ಷ 92 ಸಾವಿರ ರೂ. ಇದು ಭಾರತೀಯ ಮಾರುಕಟ್ಟೆಯಲ್ಲಿ 6 ಏರ್‌ಬ್ಯಾಗ್‌ಗಳೊಂದಿಗೆ ಲಭ್ಯವಿದೆ. ಇದು ಅತ್ಯಂತ ಕೈಗೆಟುಕುವ ಕಾರು. ಕಾರಿನಲ್ಲಿ ನೀವು 1.2 ಲೀಟರ್ ಕಪ್ಪಾ ಪೆಟ್ರೋಲ್ ಮೋಟಾರ್, ಇದು 83 PS ಪವರ್ ಮತ್ತು 113.8 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಹುಂಡೈ ಕಾರು ಟೈಪ್ ಸಿ ಮುಂಭಾಗದ ಯುಎಸ್‌ಬಿ ಚಾರ್ಜರ್ ಮತ್ತು ಟೈರ್ ಪ್ರೆಶರ್​ ಮಾನಿಟರಿಂಗ್ ಸಿಸ್ಟಮ್​ ಅನ್ನು ಹೊಂದಿದೆ.

ಓದಿ: ಗ್ಲೋಬಲ್ ಎನ್‌ಸಿಎಪಿಯ ಕ್ರ್ಯಾಶ್ ಪರೀಕ್ಷೆಯಲ್ಲಿ 5 - ಸ್ಟಾರ್, ಆಸ್ಟ್ರೇಲಿಯಾದಲ್ಲಿ 1-ಸ್ಟಾರ್​ ಪಡೆದ ಮಾರುತಿ ಸ್ವಿಫ್ಟ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.