ವಿಜಯಪುರ: ವಿದ್ಯಾರ್ಥಿನಿಯೋರ್ವಳನ್ನು ಪ್ರತಿದಿನ ಮನೆಯಿಂದ ಕಾಲೇಜಿಗೆ ಬಿಡುತ್ತಿದ್ದ ಡ್ರೈವರ್, ಇದೀಗ ಆಕೆಯನ್ನು ಪ್ರೀತಿಸಿ ವಿವಾಹವಾಗಿರುವ ವಿಚಿತ್ರ ಘಟನೆ ಜಿಲ್ಲೆಯ ಜಾಲಗೇರಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಯುವತಿ ಮನೆಯಲ್ಲೇ ಕಾರ್ ಡ್ರೈವರ್ ಆಗಿರುವ ಸೋಮಲಿಂಗನಿಗೆ ಬೈಕ್ ಕೊಟ್ಟು, ಪ್ರತಿದಿನ ಅಕ್ಷತಾಳನ್ನು ಕಾಲೇಜಿಗೆ ಬಿಡುವಂತೆ ಆಕೆಯ ಕುಟುಂಬಸ್ಥರು ಹೇಳುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ವಿಚಿತ್ರವೆಂದಎಡ, ಆತನಿಗೆ ಈಗಾಗಲೇ ಮದುವೆಯಾಗಿ ಎರಡು ಮಕ್ಕಳಿವೆ. ಆದ್ರೂ ಅಕ್ಷತಾ ಆತನೊಂದಿಗೆ ತಾಳಿ ಕಟ್ಟಿಸಿಕೊಂಡಿದ್ದಾಳೆ.
ಸದ್ಯ ಇಬ್ಬರು ರಿಜಿಸ್ಟ್ರಾರ್ ಮದುವೆಯಾಗಿದ್ದು, ಬೆದರಿಕೆ ಇರುವ ಕಾರಣ ರಕ್ಷಣೆ ಕೋರಿ ಎಸ್ಪಿ ಮೊರೆ ಹೋಗಿದ್ದಾರೆ. ವೃತ್ತಿಯಲ್ಲಿ ಸೋಮಲಿಂಗ ಚಾಲಕನಾಗಿದ್ರೆ, ಅಕ್ಷತಾ ಬಿಕಾಂ ಓದುತ್ತಿದ್ದಳು. ಸೋಮಲಿಂಗ ಎರಡು ಮಕ್ಕಳ ತಂದೆ ಎಂಬ ವಿಷಯ ಅಕ್ಷತಾಗೆ ತಿಳಿದಿದ್ದರೂ, ಆಕೆ ಮದುವೆಯಾಗಿದ್ದಾಳೆ.
ಸೋಮಲಿಂಗ ತನಗೆ ಮದುವೆಯಾಗಿದೆ ಎಂದು ಹೇಳಿದರೂ ಅಕ್ಷತಾ ಮಾತ್ರ ನಿನ್ನೇ ಪ್ರೀತಿಸುವೆ.. ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಹಠ ಹಿಡಿದಿದ್ದಳಂತೆ. ಹೀಗಾಗಿ ಕಳೆದ ವರ್ಷದ ನವೆಂಬರ್ 9ರಂದು ರಿಜಿಸ್ಟ್ರಾರ್ ವಿವಾಹ ಆಗಿದ್ದಾರೆ. ಪ್ರೀತಿ ಹೇಗೆ ಯಾರ ಮೇಲೆ ಹುಟ್ಟುತ್ತೆ ಅಂತ ಗೊತ್ತಿಲ್ಲ. ಸೋಮಲಿಂಗನನ್ನು ಪ್ರೀತಿಸಿ ಮದುವೆಯಾಗಿದ್ದೇನೆ. ಎರಡು ಮದುವೆಯಾದರೆ ತಪ್ಪೇನು, ಸೋಮಲಿಂಗನ ಮೊದಲ ಪತ್ನಿ ಜೊತೆ ನಾನು ಹೊಂದಾಣಿಕೆಯಿಂದ ಇದ್ದು ಸಂಸಾರ ನಡೆಸುತ್ತೇನೆ ಎನ್ನುತ್ತಾರೆ ಅಕ್ಷತಾ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಹೊಡೆದಾಟ: ಇಬ್ಬರು ಕಿಮ್ಸ್ಗೆ ದಾಖಲು
ಸೋಮಲಿಂಗ ಹೇಳುವುದೇ ಬೇರೆ, ನನಗೆ ಇಬ್ಬರೂ ಹೆಂಡತಿಯರು ಇರಲಿ. ನನ್ನ ಮೊದಲ ಹೆಂಡ್ತಿಯ ಮನವೊಲಿಸುತ್ತೇನೆ. ನಾನು ಬಿಟ್ಟರು ಅವಳು ಬಿಡುವ ಪರಿಸ್ಥಿತಿಯಲ್ಲಿ ಇಲ್ಲ ಎನ್ನುತ್ತಿದ್ದಾನೆ. ಸದ್ಯ ಈ ಮದುವೆಗೆ ಸಹಜವಾಗಿಯೇ ಎರಡೂ ಕಡೆಯ ಕುಟುಂಬದವರ ವಿರೋಧ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.
ಅಕ್ಷತಾ ಈ ಹಿಂದೆ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿ, ತನಗೆ ಸೋಮಲಿಂಗನೇ ಬೇಕು ಅಂತಾ ಪೋಷಕರಿಗೆ ಹೇಳಿದ್ದಳಂತೆ. ಪೋಷಕರು ನಾಪತ್ತೆ ಕೇಸ್ ದಾಖಲಿಸಿದ್ದ ಕಾರಣ ಜೀವ ಬೆದರಿಕೆಯಿದೆ ಇದೆ. ರಕ್ಷಣೆ ಕೊಡಿ ಅಂತಾ ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬಂದಿದ್ದ ಜೋಡಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.