ಮುದ್ದೇಬಿಹಾಳ: ಜನರ ಜೀವದ ರಕ್ಷಣೆಯ ಜೊತೆಗೆ ಪರಿಸರದ ರಕ್ಷಣೆಯೂ ನಮ್ಮ ಹೊಣೆಯಾಗಿದೆ ಎಂದು ಬಸವನ ಬಾಗೇವಾಡಿ ಡಿವೈಎಸ್ಪಿ ಇ.ಶಾಂತವೀರ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮಕ್ಕಳೊಂದಿಗೆ ಸಸಿ ನೆಟ್ಟು ಮಾತನಾಡಿ ಅವರು, ಬಸವನ ಬಾಗೇವಾಡಿ ಉಪ ವಿಭಾಗದಲ್ಲಿ ಬರುವ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕನಿಷ್ಠ 100 ಸಸಿಗಳನ್ನು ನೆಡಲು ಸೂಚನೆ ನೀಡಿದ್ದೇವೆ. ಅವುಗಳ ರಕ್ಷಣೆಗೂ ಕಾಳಜಿ ವಹಿಸುವಂತೆ ತಿಳಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪಿಎಸ್ಐ ಮಲ್ಲಪ್ಪ ಮಡ್ಡಿ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಸಂತೋಷ ಅಜೂರ್, ಸಹಾಯಕ ಅರಣ್ಯಾಧಿಕಾರಿಗಳಾದ ಎ.ಜೆ.ಚೌವ್ಹಾಣ ಮತ್ತಿತರರು ಇದ್ದರು.