ವಿಜಯಪುರ/ಮುದ್ದೇಬಿಹಾಳ: ಹಳ್ಳ ದಾಟಿಕೊಂಡೇ ಶವ ಪೆಟ್ಟಿಗೆಯನ್ನು ಸಾಗಿಸುವ ದುಸ್ಥಿತಿ ಇರುವ ಬಗ್ಗೆ ಈಟಿವಿ ಭಾರತ್‌ನಲ್ಲಿ ಇಂದು ಬೆಳಗ್ಗೆ ವರದಿ ಪ್ರಸಾರವಾಗಿತ್ತು. ಇದಕ್ಕೆ ಸ್ಪಂದಿಸಿದ ತಹಶೀಲ್ದಾರ್ ಜಿ.ಎಸ್.ಮಳಗಿ ಹಾಗೂ ಕಂದಾಯ ನಿರೀಕ್ಷಕ ಪವನ್ ತಳವಾರ ಅವರು ಬಳವಾಟ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶವಪೆಟ್ಟಿಗೆ ಹೊತ್ತು ಹಳ್ಳ ದಾಟಲು ತೊಂದರೆ ಅನುಭವಿಸಿದ ಬಗ್ಗೆ ಈಟಿವಿ ಭಾರತ್‌ನಲ್ಲಿ ಬೆಳಗ್ಗೆ ಸುದ್ದಿ ಬಿತ್ತರವಾಗುತ್ತಿದ್ದಂತೆ ತಹಶೀಲ್ದಾರ್ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು.
ಹಳ್ಳಕ್ಕೆ ಸೇತುವೆ ನಿರ್ಮಿಸಬೇಕಾದದ್ದು ಜಿಪಂ, ಪಿಡಬ್ಲೂಡಿ ಇಲಾಖೆಯವರ ಅಧೀನದಲ್ಲಿ ಈ ಕೆಲಸ ಬರುತ್ತದೆ. ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆದು ಸೂಕ್ತ ಕ್ರಮ ಜರುಗಿಸಲು ತಾವು ತಿಳಿಸುವುದಾಗಿ ತಹಶೀಲ್ದಾರರು ಗ್ರಾಮದ ಮುಸ್ಲಿಂ ಸಮಾಜದವರಿಗೆ ಹೇಳಿದರು.
ಇದನ್ನು ಓದಿ: ವರ್ಷ ಪೂರ್ತಿ ತುಂಬಿ ಹರಿಯುವ ಹಳ್ಳ: ಶವ ಸಂಸ್ಕಾರಕ್ಕೆ ಅಡ್ಡಿ!
ಗ್ರಾಪಂನಲ್ಲಿ ಠರಾವು ಮಾಡಿ ಇಲ್ಲಿ ಸೇತುವೆಯ ಅಗತ್ಯತೆ ಹಾಗೂ ಇಲ್ಲವೇ ಪರ್ಯಾಯ ಸ್ಥಳದಲ್ಲಿ ಸ್ಮಶಾನ ಭೂಮಿ ಗುರುತಿಸಿಕೊಡುವಂತೆ ನಿರ್ಧಾರ ಮಾಡಿ ಎಂದು ದೂರವಾಣಿಯಲ್ಲಿ ಮಡಿಕೇಶ್ವರ ಗ್ರಾಪಂ ಪಿಡಿಓಗೆ ತಹಶೀಲ್ದಾರರು ಸೂಚಿಸಿದ್ದಾರೆ.