ಮುದ್ದೇಬಿಹಾಳ (ವಿಜಯಪುರ): ಕೋವಿಡ್ ಹರಡದಂತೆ ತಡೆಯುವ ಸಲುವಾಗಿ ರಾಜ್ಯಾದ್ಯಂತ ಇಂದಿನಿಂದ ಲಾಕ್ಡೌನ್ ಜಾರಿಯಾಗಿದ್ದು, ಅಗತ್ಯ ವಾಹನ ಹೊರತುಪಡಿಸಿ ಖಾಸಗಿ ವಾಹನಗಳ ಓಡಾಟ ನಿಷೇಧಿಸಲಾಗಿದೆ. ಆದರೆ, ಇಂತಹ ಪರಿಸ್ಥಿತಿಯಲ್ಲೂ ಗೂಡ್ಸ್ ವಾಹನದ ತುಂಬಾ ಜನರನ್ನು ತುಂಬಿಕೊಂಡು ಹೋಗುತ್ತಿದ್ದ ವಾಹನವನ್ನು ಪೊಲೀಸರು ಅಡ್ಡಗಟ್ಟಿ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವೇಳೆ,ವಾಹನವನ್ನು ಬಿಟ್ಟು ಕಳುಹಿಸುವಂತೆ ಚಾಲಕ ಪೊಲೀಸರ ಕಾಲಿಗೆರಗಿದ ಘಟನೆ ನಡೆದಿದೆ. ನಾವು ಮಗುವಿನ ಕೂದಲ ತೆಗೆಸಲು ಹೊರಟಿದ್ದೆವು. ಬಿಟ್ಟು ಬಿಡಿ ಎಂದು ಗೋಗರೆದರು. ಆದರೆ, ನಿಯಮ ಮೀರಿ ಅಂದಾಜು 50ಕ್ಕೂ ಹೆಚ್ಚು ಜನರನ್ನು ವಾಹನದಲ್ಲಿ ತುಂಬಿಕೊಂಡು ತೆರಳುತ್ತಿದ್ದನ್ನು ಕಂಡು ಸಿಪಿಐ ಆನಂದ್ ವಾಘಮೋಡೆ, ಪಿಎಸ್ಐ ಎಂ.ಬಿ.ಬಿರಾದಾರ ಚಾಲಕನನ್ನು ತರಾಟೆಗೆ ತೆಗೆದುಕೊಂಡರು.
ಬಳಿಕ ಜನರ ಸಮೇತ ವಾಹನವನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಇದನ್ನೂ ಓದಿ: 14 ದಿನ ಸ್ವಯಂ ನಿರ್ಬಂಧ ವಿಧಿಸಿಕೊಂಡು ಮನೆಯಲ್ಲೇ ಇರಿ : ಜನತೆಗೆ ಗೃಹ ಸಚಿವ ಬೊಮ್ಮಾಯಿ ಮನವಿ