ETV Bharat / state

ಗಾಂಧೀಜಿ ಒಬ್ಬರಿಂದ ಸ್ವಾತಂತ್ರ್ಯ ಸಿಕ್ಕಿಲ್ಲ, ಸಿದ್ದರಾಮಯ್ಯ ಸಾವರ್ಕರ್​ಗೆ ಅವಮಾನ ಮಾಡಬಾರದು: ಯತ್ನಾಳ್​ - ಸಿದ್ದರಾಮಯ್ಯ ವಿರುದ್ಧ ಬಸನಗೌಡ ಪಾಟೀಲ್​ ಯತ್ನಾಳ್​ ಆಕ್ರೋಶ

ಶಿವಾಜಿ ಮಹಾರಾಜರು ಸೇರಿದಂತೆ ಇತರ ಮಹಾನ್ ವ್ಯಕ್ತಿಗಳ ಇತಿಹಾಸ ಮುಚ್ಚಿಟ್ಟು ಕೇವಲ ನೆಹರೂ ಮನೆತನದವರನ್ನು ವೈಭವೀಕರಣ ಮಾಡಲಾಗಿದೆ ಎಂದು ಮಾಜಿ ಸಚಿವ ಬಸನಗೌಡ ಪಾಟೀಲ್​ ಯತ್ನಾಳ್​ ಕಿಡಿ ಕಾರಿದ್ದಾರೆ.

ಸಿದ್ದರಾಮಯ್ಯ ಸಾವರ್ಕರ್​ಗೆ ಅವಮಾನ ಮಾಡಬಾರದು:ಯತ್ನಾಳ್​
author img

By

Published : Oct 18, 2019, 11:15 PM IST

ವಿಜಯಪುರ: ಗಾಂಧೀಜಿ ಒಬ್ಬರಿಂದಲೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ ಸುಭಾಶ್ಚಂದ್ರ ಬೋಸ್ ಅವರಾದಿಯಾಗಿ ಅನೇಕರು ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ್ದಾರೆ ಎಂದು ಮಾಜಿ ಸಚಿವ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿದ್ದಾರೆ.

ಸಿದ್ದರಾಮಯ್ಯ ಸಾವರ್ಕರ್​ಗೆ ಅವಮಾನ ಮಾಡಬಾರದು:ಯತ್ನಾಳ್​

ಮಹಾತ್ಮಾ ಗಾಂಧೀಜಿ ಬಗ್ಗೆ ಗೌರವವಿದೆ. ನೇತಾಜಿ ಸುಭಾಶ್ಚಂದ್ರ ಭೋಸ್ ದೇಶದ ಪ್ರಧಾನಿಯಾಗಬೇಕಿತ್ತು. ಆದರೆ, ಗಾಂಧೀಜಿ ಮೊಂಡುತನ ಹಾಗೂ ನೆಹರೂ ಮೇಲಿನ ಪ್ರೀತಿಯಿಂದ ಸುಭಾಶ್ಚಂದ್ರ ಭೋಸ್ ಕಾಂಗ್ರೆಸ್​ಗೆ ರಾಜೀನಾಮೆ ನೀಡಿದರು ಎಂದಿದ್ದಾರೆ. ಕಮ್ಯುನಿಸ್ಟರು ಇತಿಹಾಸ ತಿರುಚಿದ್ದು, ಅಕ್ಬರ್ ನಂತರದ ಇತಿಹಾಸ ಹೇಳಲಾಗಿದ್ದು, ಕಾಂಗ್ರೆಸ್​ನ ಕೆಟ್ಟ ಸಂಸ್ಕೃತಿ ದೇಶವನ್ನು ಹಾಳು ಮಾಡಿದೆ ಎಂದರು.

ಸಾವರ್ಕರ್ ಕುರಿತ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಅವರು, ಸಾವರ್ಕರ್ ರಾಷ್ಟ್ರ ಕಂಡ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರ. ಸಾವರ್ಕರ್​ಗೆ ಭಾರತ ರತ್ನ ಪ್ರದಾನ ಮಾಡಬೇಕು ಎಂದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದರು. ಗಾಂಧೀಜಿ ಕೊಲೆಯಲ್ಲಿ ಸಾವರ್ಕರ್ ಪಾತ್ರವಿತ್ತು ಅಂತೀರಲ್ಲಾ ನೀವು ಅದನ್ನು ನೋಡಿದ್ದೀರಾ ಎಂದು ಸಿದ್ದರಾಮಯ್ಯ ಅವರಿಗೆ ಪ್ರಶ್ನಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಅವರಿಗೆ ಅವಮಾನ ಮಾಡಬಾರದು ಎಂದು ಸಿದ್ದರಾಮಯ್ಯ ವಿರುದ್ಧ ಯತ್ನಾಳ್​ ಕಿಡಿಕಾರಿದರು.

Intro:ವಿಜಯಪುರ Body:ವಿಜಯಪುರ:
ಸಾವರ್ಕರ್ ಕುರಿತ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ,
ಸಾವರ್ಕರ್ ರಾಷ್ಟ್ರ ಕಂಡ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರ
ಅವರ ಸ್ವಾತಂತ್ರ್ಯ ಹೋರಾಟ ಶ್ರೇಷ್ಟವಾಗಿತ್ತು
ಸಾವರ್ಕರ್ ಅವರಿಗೆ ಭಾರತ ರತ್ನ ಪ್ರದಾನ ಮಾಡಬೇಕು ಎಂದ ಅವರು
ಸಿದ್ದರಾಮಯ್ಯ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದರು.
ಸಾವರ್ಕರ್ ಕಾಲಾಪಾನಿ ಶಿಕ್ಷೆಗೆ ಒಳಗಾಗಿದ್ದರು
ಅಲ್ಲಿಂದ ತಪ್ಪಿಸಿಕೊಂಡು ಬಂದು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅಣಿಯಾದರು
ಗಾಂಧೀಜಿ ಅವರೊಬ್ಬರಿಂದಲೇ ಸ್ವಾತಂತ್ರ್ಯ ಸಿಕ್ಕಿಲ್ಲಾ
ಸುಭಾಷಚಂದ್ರ ಬೋಸ್ ಅವರಾದಿಯಾಗಿ ಅನೇಕರು ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ್ದಾರೆ
ಮಹಾತ್ಮಾ ಗಾಂಧೀಜಿ ಬಗ್ಗೆ ಗೌರವವಿದೆ
ಗಾಂಧೀಜಿ ಅವರ ಕೊಲೆಯಲ್ಲಿ ಸಾವರ್ಕರ್ ಪಾತ್ರವಿಲ್ಲಾ
ಇದನ್ನು ಅಂದಿನ‌ ನ್ಯಾಯಾಲಯ ತೀರ್ಪು ನೀಡಿದೆ
ಸಾವರ್ಕರ್ ಪಾತ್ರವಿತ್ತು ಎಂದು ಸಿದ್ದರಾಮಯ್ಯ ನೋಡಿದ್ದಾರಾ ಎಂದು ಪ್ರಶ್ನಿಸಿದ ಅವರು,
ಸಿದ್ದರಾಮಯ್ಯ ಇವೆಲ್ಲವನ್ನು ತಿಳಿದುಕೊಂಡು ಮಾತನಾಡಬೇಕೆಂದು ಎಂದರು.
ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಅವರಿಗೆ ಅವಮಾನ ಮಾಡಬಾರದು
ಅಶ್ಪಷ್ಯತೆ ವಿರುದ್ದವೂ ಹೋರಾಟ ಮಾಡಿದ್ದರು
ಸಿದ್ದರಾಮಯ್ಯ ಹೇಳಿಕೆಯಿಂದ ಸಾವರ್ಕರ್ ಅವರಿಗೆ ಅವಮಾನ ಆಗಿದೆ
ಇದು ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನ ಎಂದು ಕಿಡಿಕಾರಿದರು.
ನೇತಾಜಿ ಸುಭಾಷಚಂದ್ರ ಭೋಸ್ ದೇಶದ ಪ್ರಧಾನಿಯಾಗಬೇಕಿತ್ತು
ಆದರೆ ಗಾಂಧೀಜಿ ಅವರ ಮೊಂಡುತನ ಹಾಗೂ ಗಾಂಧೀಜಿಯವರಿಗೆ ನೆಹರೂ ಮೇಲಿನ ಪ್ರೀತಿ ಕಾರಣ ಸುಭಾಷಚಂದ್ರ ಭೋಸ್ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದರು
ಅಜಾದ್ ಹಿಂದ್ ಪೌಜ್ ಕಟ್ಟಿದರು
ಇಂಥ ಇತಿಹಾಸ ಮುಚ್ಚಿಡಲಾಗಿದೆ
ಅದರಂತೆ ಶಿವಾಜಿ ಮಹಾರಾಜರು ಸೇರಿದಂತೆ ಇತರೆ ಮಹಾನ್ ವ್ಯಕ್ತಿಗಳ ಇತಿಹಾಸ ಮುಚ್ಚಿಟ್ಟಿದ್ದಾರೆ
ಕೇವಲ ನೆಹರೂ ಮನೆತನದವರನ್ನು ವೈಭವೀಕರಣ ಮಾಡಲಾಗಿದೆ
ಕಮ್ಯುನಿಸ್ಟರು ಇತಿಹಾಸ ತಿರುಚಿದ್ದಾರೆ
ಅಕ್ಬರ್ ನಂತರವರ ಇತಿಹಾಸ ಹೇಳಲಾಗಿದೆ
ಕಾಂಗ್ರೆಸ್ ನ ಕೆಟ್ಟ ಸಂಸ್ಕೃತಿ ದೇಶವನ್ನು ಹಾಳು ಮಾಡಿದೆ ಎಂದರು.Conclusion:ವಿಜಯಪುರ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.