ETV Bharat / state

ಯಾವುದೇ ಹುದ್ದೆಗಾಗಿ ಲಾಬಿ ಮಾಡಲ್ಲ, ಸೈಲೆಂಟ್​ ಆದ್ರು ಯತ್ನಾಳ - ಹುದ್ದೆಗಾಗಿ ಲಾಬಿ

ಸಚಿವ ಸಂಪುಟದಲ್ಲಿ ಅವಕಾಶ ಸಿಗದಿದ್ದರಿಂದ ಮುನಿಸಿಕೊಂಡು ಕೇಂದ್ರ ಮತ್ತು ರಾಜ್ಯ ನಾಯಕರ ವಿರುದ್ಧ ತಿರುಗಿಬಿದ್ದಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಈಗ ತಣ್ಣಗಾಗಿದ್ದಾರೆ. ಈ ನಡೆ ಎಲ್ಲರಲ್ಲೂ ಅಚ್ಚರಿ ಮೂಡುವಂತೆ ಮಾಡಿದೆ.

Does not pressured to hycommand for post
author img

By

Published : Aug 26, 2019, 6:16 PM IST

ವಿಜಯಪುರ: ಸಚಿವ ಸಂಪುಟದಲ್ಲಿ ಅವಕಾಶ ಸಿಗದಿದ್ದರಿಂದ ಮುನಿಸಿಕೊಂಡು ಕೇಂದ್ರ ಮತ್ತು ರಾಜ್ಯ ನಾಯಕರ ವಿರುದ್ಧ ತಿರುಗಿಬಿದ್ದಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಈಗ ತಣ್ಣಗಾಗಿದ್ದಾರೆ. ಅಲ್ಲದೆ, ತಮ್ಮ ವರಸೆಯನ್ನೂ ಬದಲಿಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನ್ನ ನಾಯಕರ ವಿರುದ್ಧ ತುಟಿ ಬಿಚ್ಚಲಿಲ್ಲ. ಸಚಿವ ಸಂಪುಟ ವಿಸ್ತರಣೆ ಕುರಿತು ಏನೂ ಮಾತಾಡುವುದಿಲ್ಲ. ಹೈಕಮಾಂಡ್ ಮತ್ತು‌ ಸಿಎಂ ಅವರು ಸಮರ್ಥರಿದ್ದಾರೆ ಎನ್ನುವ ಮೂಲಕ ಮೌನಕ್ಕೆ ಶರಣಾಗಿದ್ದಾರೆ.

ಶಾಸಕ ಬಸನಗೌಡ ಪಾಟೀಲ ಯತ್ನಾಳ

ಹೈಕಮಾಂಡ್ ಬಹಳ ಸ್ಟ್ರಾಂಗ್ ಇದೆ. ಡಿಸಿಎಂ ಹುದ್ದೆ ಬಗ್ಗೆ ಉಮೇಶ ಕತ್ತಿ, ರೇಣುಕಾಚಾರ್ಯ ಅಸಮಾಧಾನವನ್ನು ಮುಖ್ಯಮಂತ್ರಿ ಬಗೆಹರಿಸುತ್ತಾರೆ. ನಾನು ಯಾವುದೇ ಹುದ್ದೆಗೆ ಲಾಬಿ ಮಾಡುವುದಿಲ್ಲ. ಇತ್ತೀಚಿಗೆ ಸಚಿವ ಕೆ.ಎಸ್​.ಈಶ್ವರಪ್ಪ ಅವರು ಯತ್ನಾಳ ವಿರುದ್ಧ ಕಿಡಿಕಾರಿದ್ದರು. ಅದಕ್ಕೆ ಉತ್ತರಿಸಿದ ಅವರು, ಈಶ್ವರಪ್ಪ ಸಲಹೆ ನೀಡಿದ್ದಾರೆ ಅದರಂತೆ ನಡೆದುಕೊಳ್ಳುತ್ತೇನೆ ಎಂದರು.

ರಾಜ್ಯದಲ್ಲಿ ವಿಸ್ತರಣೆಯಾದ ಸಚಿವ ಸಂಪುಟದಲ್ಲಿ ತಮಗೆ ಅವಕಾಶ ನೀಡಲಿಲ್ಲ ಎಂದು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಯತ್ನಾಳ ಅವರು ಕೇಂದ್ರ ಮತ್ತು ರಾಜ್ಯ ನಾಯಕರ ವಿರುದ್ಧ ಗುಡುಗಿದ್ದರು.

Intro:ವಿಜಯಪುರ Body:ವಿಜಯಪುರ: ರಾಜ್ಯ ಹಾಗೂ ರಾಷ್ಟ್ರ ನಾಯಕರನ್ನು ಟೀಕಿಸುತ್ತಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಣ್ಣಗಾಗಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತನ್ನ ನಾಯಕರ ವಿರುದ್ಧ ತುಟಿಬಿಚ್ಚಲಿಲ್ಲ, ಇತ್ತೀಚಿಗೆ ಸಚಿವ ಈಶ್ವರಪ್ಪ ಯತ್ನಾಳ ವಿರುದ್ಧ ಕಿಡಿಕಾರಿದ್ದನ್ನು ಪರೋಕ್ಷವಾಗಿ ಒಪ್ಪಿಕೊಂಡ ಯತ್ನಾಳ ಈಶ್ವರಪ್ಪ ಸಲಹೆ ನೀಡಿದ್ದು ಅದರಂತೆ ನಡೆದುಕೊಳ್ಳುತ್ತೇನೆ ಎಂದರು.
ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಶಾಸಕ ಯತ್ನಾಳ ತಮ್ಮ ವರಸೆ ಈಗ ಬದಲಿಸಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಬಗ್ಗೆ‌ ನಾನು ಏನು ಮಾತನಾಡುವದಿಲ್ಲ ಎನ್ನುವ ಮೂಲಕ ಮೌನಕ್ಕೆ ಶರಣಾಗುವ ಲಕ್ಷಣ ತೋರಿಸಿದ್ದಾರೆ.
ನಮ್ಮ ಹೈಕಮಾಂಡ್ ಮತ್ತು‌ ಸಿಎಂ ಅವರು ಸಮರ್ಥರಿದ್ದಾರೆ.
ನಮ್ಮ ಹೈಕಮಾಂಡ್ ಬಹಳ ಸ್ಟ್ರಾಂಗ್ ಇದ್ದಾರೆ ಎನ್ನುವ ಮೂಲಕ ಪಕ್ಷದ ಪರ ನಿಂತಿದ್ದಾರೆ.
ಡಿಸಿಎಂ ಹುದ್ದೆ ಬಗ್ಗೆ ಉಮೇಶ ಕತ್ತಿ, ರೇಣುಕಾಚಾರ್ಯ ಅಸಮಾಧಾನವನ್ನು ಮುಖ್ಯಮಂತ್ರಿ ಬಗೆಹರಿಸುತ್ತಾರೆ ಎಂದು ಅವರು ಹೇಳಿದರು.
ನಾನು ಯಾವುದೇ ಹುದ್ದೆ ಬಗ್ಗೆ ಲಾಭಿ ಮಾಡುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.Conclusion:ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.