ETV Bharat / state

ಕೊರೊನಾ ನಿರ್ವಹಣೆಯಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಪ್ರಮುಖ: ಎಸ್‌.ಟಿ ಸೋಮಶೇಖರ್

ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ನೀಡುವ ವೇತನ ಕಡಿಮೆ ಇದ್ದರೂ ಕೊರೊನಾ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿದ್ದಾರೆ ಎಂದು ಸಚಿವ ಎಸ್‌.ಟಿ ಸೋಮಶೇಖರ್ ಅಭಿನಂದಿಸಿದರು.

ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಣೆ
ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಣೆ
author img

By

Published : Jun 26, 2020, 11:30 PM IST

ವಿಜಯಪುರ: ಕೊರೊನಾ ಆತಂಕದ ನಡುವೆ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ವಿಜಯಪುರ ಜಿಲ್ಲಾ ಡಿಸಿಸಿ ಬ್ಯಾಂಕ್‌ನಿಂದ ಪ್ರೋತ್ಸಾಹ ಧನ ಹಾಗೂ ಆಹಾರ ಕಿಟ್ ವಿತರಿಸಲಾಯಿತು.

ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮಕ್ಕೆ ಆಗಮಿಸಿದ ಸಹಕಾರ ಸಚಿವ ಎಸ್‌.ಟಿ ಸೋಮಶೇಖರ್ ದೀಪ ಬೆಳಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಸಹಾಕಾರ ಬ್ಯಾಂಕ್​ನಿಂದ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ನೀಡುವ ವೇತನ ಕಡಿಮೆ ಇದ್ದರೂ ಕೊರೊನಾ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿದ್ದಾರೆ ಎಂದು ಅಭಿನಂದಿಸಿದರು.

ಸಹಕಾರ ಕೇತ್ರದಿಂದ 53 ಕೋಟಿ ಹಣ ಕೋವಿಡ್ ಪರಿಹಾರ ನಿಧಿಗೆ ನೀಡಲಾಗಿದೆ. ಸುಮಾರು 42,685 ಆಶಾ ಕಾರ್ಯಕರ್ತೆಯರು ರಾಜ್ಯದಲ್ಲಿದ್ದು ಅವರಿಗೆ ಏಳು ಕೋಟಿ ಹನ್ನೆರಡು ಲಕ್ಷ ಹಣಕಾಸಿನ ಸೌಲಭ್ಯ ಒದಗಿಸಲು ಎಲ್ಲ ಜಂಟಿ ನಿಬಂಧಕರಿಗೆ ಮಾಹಿತಿ ನೀಡಲಾಗುವುದು. ವಿಜಯಪುರ ಡಿಡಿಸಿ ಬ್ಯಾಂಕ್​ ಒಳ್ಳೆಯ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ರೈತರಿಗೆ ಸಾಲಸೂಲ‌ ಒಗಿಸುತ್ತಿದ್ದು ಅಭಿವೃದ್ಧಿಪಥದಲ್ಲಿ ಸಾಗುತ್ತಿದೆ. ಅಲ್ಲದೆ ಪರಿಹಾರ ನಿಧಿಗೆ ಒಂದು ಕೋಟಿ ಹಣ ವಿಜಯಪುರ ಡಿಡಿಸಿ ಬ್ಯಾಂಕ್‌ನಿಂದ ನೀಡಲಾಗಿದೆ ಎಂದರು.

ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಣೆ

ಬಳಿಕ ಮಾತನಾಡಿದ ವಿಜಯಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ, ಸಹಕಾರಿ ಸಚಿವರು ಎಲ್ಲ ಜಿಲ್ಲೆಗಳಿಗೂ ತೆರಳಿ ಸಮಸ್ಯೆಗಳ ಅರಿತುಕೊಂಡು ಉತ್ತಮವಾಗಿ ಕಾರ್ಯನಿರ್ವಾಹಿಸುತ್ತಿದ್ದಾರೆ. ರಾಜ್ಯದ 30 ಜಿಲ್ಲೆಗಳ ಪೈಕಿ 19 ಜಿಲ್ಲೆಯಲ್ಲಿ ಈಗಾಗಲೇ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ನೀಡುತ್ತಿದ್ದಾರೆ‌. ರೈತರ ಕಷ್ಟಗಳ ಅರಿಯುವ ಗುಣ ಎಸ್‌.ಟಿ ಸೋಮಶೇಖರ್ ಅವರಲ್ಲಿದೆ. ಸಹಕಾರ ರಂಗದಲ್ಲಿ ಅನುಭವ ಹೊಂದಿದ ವ್ಯಕ್ತಿ ಇಂದು ಸಹಕಾರ ಸಚಿವರಾಗಿರೋದು ಸಂತಸ ತಂದಿದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.