ವಿಜಯಪುರ: ಮಹಾನಗರ ಪಾಲಿಕೆ ಹೆಸರಿನಲ್ಲಿ ನಕಲಿ ಪಾಸ್ ಮಾರುತ್ತಿದ್ದ ವ್ಯಕ್ತಿಯೊಬ್ಬನನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ.
ರಾಜಾಜಿನಗರದ ನಿವಾಸಿ ಸುನೀಲ ಗಾಯಕವಾಡ ಬಂಧಿತ ಆರೋಪಿ. ಲಾಕ್ಡೌನ್ ವೇಳೆ ನಗರದಲ್ಲಿ ಓಡಾಡಲು ಮಹಾನಗರ ಪಾಲಿಕೆ ಹೆಸರಿನ ಮೊಹರು(ಸೀಲ್) ಬಳಸಿ, ನಕಲಿ ಸಹಿ ಮಾಡಿ ನಕಲಿ ಪಾಸ್ ಕೊಡುತ್ತಿದ್ದ ಎನ್ನಲಾಗಿದೆ.
ಈ ಸಂಬಂಧ ಪಾಲಿಕೆ ಕಂದಾಯ ಅಧಿಕಾರಿ ಮಹೇಶ, ಸುನೀಲ ಗಾಯಕವಾಡ ವಿರುದ್ಧ ಜಲನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಅನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ನಕಲಿ ಪಾಸ್ ಖರೀದಿ ಮಾಡಿರುವವರ ಹುಡುಕಾಟ ನಡೆಸುತ್ತಿದ್ದಾರೆ.