ETV Bharat / state

ವಿಜಯಪುರ ರಸ್ತೆ ಕಾಮಗಾರಿಗೆ ಡಿಸಿಎಂ ಕಾರಜೋಳ ಚಾಲನೆ - dcm govinda karajola

ರಸ್ತೆಗಳನ್ನು ಅತ್ಯುತ್ತಮ ಗುಣಮಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿ ಮಾದರಿಯಲ್ಲಿ ಹಾಗೂ ಸುಮಾರು 50 ವರ್ಷಗಳ ಕಾಲ ಬಾಳುವಂತಹ ರೀತಿಯಲ್ಲಿ ಜತೆಗೆ ಐತಿಹಾಸಿಕ ನಗರದ ಅಂದ ಹೆಚ್ಚಿಸುವ ರೀತಿಯಲ್ಲಿ ನಿರ್ಮಿಸಲಾಗುವುದು ಎಂದು ಗೋವಿಂದ ಕಾರಜೋಳ ಹೇಳಿದರು.

dcm govinda karajola gave drive to road work of vijayapura
ವಿಜಯಪುರ ರಸ್ತೆ ಕಾಮಗಾರಿಗೆ ಡಿಸಿಎಂ ಕಾರಜೋಳ ಚಾಲನೆ
author img

By

Published : Mar 21, 2021, 9:06 PM IST

ವಿಜಯಪುರ: ನಗರದ ರಸ್ತೆ ಕಾಮಗಾರಿಯನ್ನು ಅತ್ಯಂತ ಗುಣಮಟ್ಟದಲ್ಲಿ ನಿರ್ಮಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

ನಗರದ ಬಾಬು ಜಗಜೀವನ ರಾಮ್ ವೃತ್ತದಿಂದ ಸುಭಾಸ್ ಚಂದ್ರ ಬೋಸ್ ವೃತ್ತದವೆರಗೆ 17.50 ಕೋಟಿ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ಹಾಗೂ ಇಟಗಿ ಪೆಟ್ರೋಲ್ ಪಂಪ್‍ನಿಂದ ಮಹಿಳಾ ವಿಶ್ವವಿದ್ಯಾಲಯದವರೆಗೆ 35 ಕೋಟಿ ರೂ. ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಈ ರಸ್ತೆಯನ್ನು ಅತ್ಯುತ್ತಮ ಗುಣಮಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿ ಮಾದರಿಯಲ್ಲಿ ಹಾಗೂ ಸುಮಾರು 50 ವರ್ಷಗಳ ಕಾಲ ಬಾಳುವಂತಹ ರೀತಿಯಲ್ಲಿ ಜತೆಗೆ ಐತಿಹಾಸಿಕ ನಗರದ ಅಂದ ಹೆಚ್ಚಿಸುವ ರೀತಿಯಲ್ಲಿ ನಿರ್ಮಿಸಲಾಗುವುದು ಎಂದು ಹೇಳಿದರು.

ವಿಜಯಪುರ ರಸ್ತೆ ಕಾಮಗಾರಿಗೆ ಡಿಸಿಎಂ ಕಾರಜೋಳ ಚಾಲನೆ

ಐತಿಹಾಸಿಕ ನಗರವಾದ ವಿಜಯಪುರಕ್ಕೆ ಈ ರಸ್ತೆ ಅತ್ಯಂತ ಸುಂದರವಾಗಿ ಕಾಣುವ ಸುಮಾರು 18 ಮೀಟರ್ ಅಗಲವಾದ 4 ಲೇನ್ ರಸ್ತೆ ಇದಾಗಿದ್ದು, ಮುಂದಿನ ಆರು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ರಸ್ತೆ ನಿರ್ಮಾಣ ಸಂದರ್ಭದಲ್ಲಿ ಹಾಗೂ ಅಭಿವೃದ್ಧಿ ವಿಷಯದಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕೆಂದರು.

ಪ್ರಸಕ್ತ ಸರ್ಕಾರ ಬಂದ ತಕ್ಷಣ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ 173 ವಸತಿ ಶಾಲೆಗಳ ಕಾಮಗಾರಿ ಆರಂಭಿಸಿ ಈವರೆಗೆ 70 ವಸತಿ ಶಾಲೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಅದರಂತೆ ನೂರಾರು ವಸತಿ ನಿಲಯಗಳನ್ನು ನಿರ್ಮಿಸಲಾಗುತ್ತಿದೆ. ಕಟ್ಟಡಗಳ ವೆಚ್ಚಕ್ಕಾಗಿಯೇ ಸುಮಾರು 2,400 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.

ಪರಿಶಿಷ್ಟ ಜಾತಿ ಹಾಗೂ ಪಂಗಡ ಜನಾಂಗದ ಅನುಕೂಲಕ್ಕಾಗಿ ರಾಜ್ಯದಲ್ಲಿ ಪ್ರಥಮ ಬಾರಿಗೆ ವಿಜಯಪುರದ ಸರ್ಕಾರಿ ಜಾಗದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ. ರಾಜ್ಯದ ಎಲ್ಲಾ ಜಿಲ್ಲಾ ತಾಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ಇಂತಹ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿಕೊಡಲಾಗುತ್ತಿದೆ ಎಂದು ಹೇಳಿದರು. ಈ ನಗರವನ್ನು ಸುಂದರ ನಗರವನ್ನಾಗಿ ಮಾಡಲು ಸರ್ಕಾರ ಬದ್ಧವಾಗಿದೆ. ಮುಂದಿನ ಒಂದು ವರ್ಷದ ಅವಧಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಲಿದ್ದು, ಇದರಿಂದಲೂ ಹೆಚ್ಚಿನ ಸಹಕಾರಿಯಾಗಲಿದೆ ಎಂದರು.

ಇದನ್ನೂ ಓದಿ: ಶ್ರೀ ಸಿದ್ಧಾರೂಢ ಅಜ್ಜಾರ ಮಠ, ಕವಿವಿ, 6 ಜ್ಞಾನಪೀಠ..'ಯುವರತ್ನ' ಕಂಡಂತೆ ಜವಾರಿ ಊರಿನ ಖದರ್, ಗಮ್ಮತ್ತು..

ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮಾತನಾಡಿ, 35 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು, ಇದಕ್ಕಾಗಿ ಮುಖ್ಯಮಂತ್ರಿಗಳನ್ನು ಅಭಿನಂದಿಸಿದರು. ಅದರಂತೆ ಮಹಾನಗರಪಾಲಿಕೆ ವ್ಯಾಪ್ತಿಯ 175 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ, 265 ಕೋಟಿ ರೂಪಾಯಿ ವೆಚ್ಚದಲ್ಲಿ ಅಂಡರ್​​ ಗ್ರೌಂಡ್ ಕೇಬಲ್ ಅಳವಡಿಕೆ, ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್, ವಾಕಿಂಗ್ ಟ್ರ್ಯಾಕ್, 35 ಬಡಾವಣೆಗಳಲ್ಲಿ ಓಪನ್ ಜಿಮ್ ಮಾಡಲಾಗಿದೆ ಎಂದು ಹೇಳಿದರು.

ನಗರದಲ್ಲಿ ದಾಖಲೆ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಅಂದಾಜು ಒಂದು ಸಾವಿರ ಕೋಟಿ ರೂಪಾಯಿಯ ಕಾಮಗಾರಿಗಳು ನಡೆಯುತ್ತಿವೆ. ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ವಿಜಯಪುರವನ್ನು ಮಾದರಿ ನಗರವನ್ನಾಗಿ ಮಾಡಲಾಗುವುದು. ನಗರದ ಗಾಂಧಿ ವೃತ್ತದಲ್ಲಿ ಫ್ಲೈ ಓವರ್ ಹಾಗೂ ವಾಣಿಜ್ಯ ಮಳಿಗೆಗಾಗಿ 28 ಕೋಟಿ ರೂ. ವೆಚ್ಚದ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದ ಅವರು, ನಗರಕ್ಕೆ ರಸ್ತೆಗಳಿಗಾಗಿ ಮುಂದಿನ ದಿನಗಳಲ್ಲಿ 30 ಕೋಟಿ ರೂಪಾಯಿ ಒದಗಿಸುವಂತೆ ಉಪಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.