ETV Bharat / state

ರೈತರೊಂದಿಗೆ ಡಿಸಿ ಸಭೆ: ಕಬ್ಬಿಗೆ ದರ ಹೆಚ್ಚಿಸಲು ರೈತರ ಪಟ್ಟು, ಇತ್ಯರ್ಥವಾಗದ ಸಮಸ್ಯೆ - ಕಬ್ಬು ಬೆಳೆಗಾರರ ಬೇಡಿಕೆ

ವಿಜಯಪುರ ಜಿಲ್ಲಾಧಿಕಾರಿ ಸೋಮವಾರ ರೈತರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಯಾವುದೇ ರೀತಿಯ ಇತ್ಯರ್ಥಕ್ಕೆ ಬಾರದ ಕಾರಣ ಸಭೆಯಿಂದ ಹೊರನಡೆದ ರೈತರು, ಡಿಸಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ರೈತರೊಂದಿಗೆ ಡಿಸಿ ಸಭೆ
ರೈತರೊಂದಿಗೆ ಡಿಸಿ ಸಭೆ
author img

By

Published : Nov 7, 2022, 6:16 PM IST

ವಿಜಯಪುರ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ ವಿಜಯಮಹಾಂತೇಶ ದಾನಮ್ಮನವರ್​ ಅವರು ರೈತರ ಜತೆ ಸಭೆ ನಡೆಸಿದರು. ಸಭೆಯಲ್ಲಿ ರೈತರು ಪ್ರತಿ ಟನ್​ ಕಬ್ಬಿನ ಬೆಲೆಯನ್ನು ಕನಿಷ್ಠ 3,800 ರೂಪಾಯಿ ನಿಗದಿ ಮಾಡಬೇಕೆಂದು ಒತ್ತಾಯಿಸಿದರು. ಸಭೆಯಲ್ಲಿ ಯಾವುದೇ ರೀತಿಯ ಇತ್ಯರ್ಥಕ್ಕೆ ಬಾರದ ಕಾರಣ ಸಭೆಯಿಂದ ಹೊರನಡೆದ ರೈತರು, ಡಿಸಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನವ್ಮನವರ್ 9 ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ಜತೆ ಸುಮಾರು ನಾಲ್ಕು ಗಂಟೆಗಳ ಕಾಲ ಸಭೆ ನಡೆಸಿದರು. ರೈತರ ಬೇಡಿಕೆಗಳನ್ನು ಸರ್ಕಾರಕ್ಕೆ ತಿಳಿಸುವೆ ಹಾಗೂ ಸಭೆಯಲ್ಲಿದ್ದ ಕಬ್ಬು ಕಾರ್ಖಾನೆ ಮಾಲೀಕರಿಗೆ ಸೂಚಿಸುವುದಾಗಿ ಹೇಳಿದರು. ರೈತರು ಕಬ್ಬಿನ ಬಾಕಿ ಬಿಲ್​ಅನ್ನು ಸಹ ತಕ್ಷಣ ಪಾವತಿಸಲು ಕಾರ್ಖಾನೆ ಮಾಲೀಕರಿಗೆ ಸೂಚಿಸಬೇಕು ಎಂದು ಪಟ್ಟು ಹಿಡಿದರು.

ಎಫ್​ಆರ್​ಪಿ ದರಕ್ಕಿಂತ ಹೆಚ್ಚಿನ ಬೆಲೆ ಪಾವತಿಸಬೇಕು ಎಂದು ಒತ್ತಾಯಿಸಿದರು. ಆದರೆ ಇದಕ್ಕೆ ಒಪ್ಪದ ಕಾರ್ಖಾನೆ ಮಾಲೀಕರು ತಮ್ಮ ವಾರ್ಷಿಕ ಆಯವ್ಯಯ, ಆದಾಯ ಖರ್ಚು ನೋಡಿಕೊಂಡು ಹೆಚ್ಚಿನ ಬೆಲೆ ನೀಡುವುದಾಗಿ ಬೆಳೆಗಾರರ ಮನವೊಲಿಸಲು ಪ್ರಯತ್ನಿಸಿದರು. ಇದಕ್ಕೂ ಒಪ್ಪದ ಕಬ್ಬು ಬೆಳೆಗಾರರು ಪಕ್ಕದ ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಬೆಳೆಗಾರರ ಬೇಡಿಕೆಗೆ ಅನುಗುಣವಾಗಿ ಕಬ್ಬಿನ ದರ ನಿಗದಿ ಮಾಡಲಾಗಿದೆ. ಅವರಿಗೆ ಸಾಧ್ಯವಾಗಬೇಕಾದರೆ ವಿಜಯಪುರ ಜಿಲ್ಲೆಯ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಏಕೆ ಆಗುವುದಿಲ್ಲ ಎಂದು ಪ್ರಶ್ನಿಸಿದರು.

ಸಭೆಯಲ್ಲಿ ಭಾರಿ ಆಕ್ರೋಶ: ಪ್ರತಿ ವರ್ಷ ಇದೇ ಸಬೂಬು ಹೇಳಿಕೊಂಡು ಬೆಳೆಗಾರರಿಗೆ ಮೋಸ ಮಾಡಲಾಗುತ್ತಿದೆ. ಕಬ್ಬು ಬೆಳೆಯುವ ಖರ್ಚು ವೆಚ್ಚಗಳನ್ನು ಒಮ್ಮೆ ಪರಿಶೀಲನೆ ಮಾಡಿ, ಆಗ ಬೆಳೆಗಾರರ ಕಷ್ಟ ಗೊತ್ತಾಗುತ್ತದೆ. ಕೇವಲ‌ ಲಾಭದ ದೃಷ್ಟಿ ಇಟ್ಟುಕೊಂಡು ಪ್ರಭಾವಿ ಸಕ್ಕರೆ ಕಾರ್ಖಾನೆ ಮಾಲೀಕರು ಬೆಳೆಗಾರರಿಗೆ ಮೋಸ ಮಾಡುತ್ತಿದ್ದಾರೆ ಎಂದು ಸಭೆಯಲ್ಲಿ ಭಾರಿ ಆಕ್ರೋಶ ವ್ಯಕ್ತವಾಯಿತು.

ಟನ್ ಕಬ್ಬಿಗೆ ದರ ಹೆಚ್ಚಿಸಲು ರೈತರ ಪಟ್ಟು

ಸಭೆಯಲ್ಲಿ ಡಿಸಿಯವರ ಕೆಲವು ನಿರ್ಣಯಗಳನ್ನು ಸ್ವಾಗತಿಸಲಾಯಿತು. ಮುಖ್ಯವಾಗಿ ಪ್ರತಿ ಟನ್ ಕಬ್ಬಿಗೆ 3,800 ರೂ. ದರ ನಿಗದಿ ವಿಚಾರವಾಗಿ ಕಾರ್ಖಾನೆ ಮಾಲೀಕರು ಹಾಗೂ ಬೆಳಗಾರರ ಮಧ್ಯೆ ಒಮ್ಮತ ಮೂಡಲಿಲ್ಲ. ಹೀಗಾಗಿ ಸಭೆಯಿಂದ ಹೊರ ನಡೆದ ಬೆಳೆಗಾರರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಪ್ರತಿ ವರ್ಷ ಜಿಲ್ಲಾಡಳಿತ ಕರೆಯುವ ಸಭೆಗೆ ಬಂದಾಗಲೂ ಬೆಳೆಗಾರರಿಗೆ ಅನ್ಯಾಯವಾಗುತ್ತಲೇ ಇದೆ ಎಂದು ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ: ಕಬ್ಬು ಬೆಲೆ ಹೆಚ್ಚಳಕ್ಕೆ ಆಗ್ರಹ: ಸಕ್ಕರೆ ಕಾರ್ಖಾನೆ ಮೇಲೆ ಕಲ್ಲು, ಕಬ್ಬು ತೂರಾಟ

ಇನ್ನು, 15 ದಿನದೊಳಗೆ ಕಬ್ಬು ಬೆಳೆಗಾರರ ಬೇಡಿಕೆ ಈಡೇರದಿದ್ದರೆ, ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಕ್ಕರೆ ಕಾರ್ಖಾನೆ ಮಾಲೀಕರ ಪ್ರಕಾರ, ಆ ಜಿಲ್ಲೆಗಳ ಹವಾಮಾನಕ್ಕೆ ತಕ್ಕಂತೆ ಕಬ್ಬಿನ ಇಳುವರಿ ಬರುವ ಕಾರಣ ದರದಲ್ಲಿ ವ್ಯತ್ಯಾಸ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕಮಿಟಿ ರಚನೆ: ಜಿಲ್ಲಾಧಿಕಾರಿ ಮಾತನಾಡಿ, ಆಯಾ ಜಿಲ್ಲೆಗಳಲ್ಲಿ ಕಬ್ಬು ಬೆಳೆಯುವ ಪದ್ಧತಿಯಲ್ಲಿ ಬದಲಾವಣೆ ಇರಬಹುದು. ಕೆಲ ಜಿಲ್ಲೆಗಳಲ್ಲಿ ಕಬ್ಬು ಬೆಳೆಯಲ್ಲಿ ಸುಧಾರಿತ ಕ್ರಮ ಜರುಗಿಸಿರಬಹುದು. ಈ ಬಗ್ಗೆ ನಮ್ಮ ಅಧಿಕಾರಿಗಳ ಕಮಿಟಿ ರಚಿಸಲಾಗುವುದು ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.