ETV Bharat / state

ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ರೆ ಕ್ರಿಮಿನಲ್ ಕೇಸ್‌.. ಡಿಸಿ ವೈ ಎಸ್ ಪಾಟೀಲ ಎಚ್ಚರಿಕೆ

ಎಲ್ಲಾ ತಾಲೂಕುಗಳಲ್ಲಿ ಹೋಮ್‍ ಕ್ವಾರಂಟೈನ್ ನೋಡಲ್ ಅಧಿಕಾರಿಯಾಗಿ ಪ್ರತಿ ತಾಲೂಕಿಗೆ ಒಬ್ಬರಂತೆ 12 ಜನ ಹಿರಿಯ ಅಧಿಕಾರಿಗಳನ್ನು ಸಹ ನೇಮಿಸಲಾಗಿದೆ. ಮಹಾರಾಷ್ಟ್ರದಿಂದ ಬಂದವರಲ್ಲಿ ಒಟ್ಟು 67 ಪಾಸಿಟಿವ್ ಪ್ರಕರಣ ದೃಢಪಟ್ಟಿವೆ. 6 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

DC Y. S. Patil
ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ
author img

By

Published : Jun 2, 2020, 7:18 PM IST

Updated : Jun 2, 2020, 8:37 PM IST

ವಿಜಯಪುರ: ಮಹಾರಾಷ್ಟ್ರದಿಂದ ಆಗಮಿಸಿದವರನ್ನು ಸಾಂಸ್ಥಿಕ ಕ್ವಾರಂಟೈನ್ ನಂತರ ಹೋಮ್ ಕ್ವಾರಂಟೈನ್ ಮಾಡಲಾಗುತ್ತಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದ್ರೆ ಅವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ ಎಚ್ಚರಿಕೆ ನೀಡಿದ್ದಾರೆ.

ಡಿಸಿ ವೈ ಎಸ್ ಪಾಟೀಲ

ಹೋಮ್ ಕ್ವಾರಂಟೈನ್ ಅವಧಿ ಮತ್ತು ನಿಯಮ ಉಲ್ಲಂಘನೆ ಮಾಡಿದಲ್ಲಿ ಅವರನ್ನು ಪುನಃ ಸಾಂಸ್ಥಿಕ ಕ್ವಾರಂಟೈನ್‍ಗೆ ಒಳಪಡಿಸುವುದಾಗಿ ತಿಳಿಸಿದ್ದಾರೆ. ಜಿಲ್ಲೆಯ ವಿವಿಧೆಡೆ ಗ್ರಾಮ ಪಂಚಾಯತ್‌ ಅಧ್ಯಕ್ಷರು, ಪಿಡಿಒಗಳು, ಗ್ರಾಮ ಲೆಕ್ಕಾಧಿಕಾರಿಗಳು, ಬೀಟ್ ಪೊಲೀಸ್, ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನೊಳಗೊಂಡು ರಚಿಸಲಾಗಿರುವ ಗ್ರಾಮ ಕಾರ್ಯಪಡೆ ಸಮಿತಿಗಳು ಕೂಡಾ ಬೇರೆ-ಬೇರೆ ರಾಜ್ಯಗಳಿಂದ ಅಧಿಕೃತವಾಗಿ ಮತ್ತು ಮಾಹಿತಿಯಿಲ್ಲದೆ ಬಂದವರ ಬಗ್ಗೆ ನಿಗದಿತ ಮಾಹಿತಿ ನೀಡುವ ಜೊತೆಗೆ ಸಂಬಂಧಪಟ್ಟವರನ್ನು ಸಾಂಸ್ಥಿಕ ಮತ್ತು ಹೋಮ್​ ಕ್ವಾರಂಟೈನ್ ಮಾಡಲು ಅವರು ಸೂಚನೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೆ 135 ಕ್ವಾರಂಟೈನ್ ಕೇಂದ್ರಗಳಲ್ಲಿ 3,500 ಜನರು ಸಾಂಸ್ಥಿಕ ಕ್ವಾರಂಟೈನ್​ನಲ್ಲಿದ್ದಾರೆ. ಎಲ್ಲಾ ತಾಲೂಕುಗಳಲ್ಲಿ ಹೋಮ್‍ ಕ್ವಾರಂಟೈನ್ ನೋಡಲ್ ಅಧಿಕಾರಿಯಾಗಿ ಪ್ರತಿ ತಾಲೂಕಿಗೆ ಒಬ್ಬರಂತೆ 12 ಜನ ಹಿರಿಯ ಅಧಿಕಾರಿಗಳನ್ನು ಸಹ ನೇಮಿಸಲಾಗಿದೆ. ಮಹಾರಾಷ್ಟ್ರದಿಂದ ಬಂದವರಲ್ಲಿ ಒಟ್ಟು 67 ಪಾಸಿಟಿವ್ ಪ್ರಕರಣ ದೃಢಪಟ್ಟಿವೆ. 6 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇವರಿಗೆ ಸಂಬಂಧಪಟ್ಟಂತೆ ಸರ್ಕಾರದ ಹೊಸ ನಿರ್ದೇಶನದಂತೆ ಪಾಸಿಟಿವ್ ಪ್ರಕರಣ ದೃಢಪಟ್ಟ ಜಿಲ್ಲೆಯ 15 ಗ್ರಾಮಗಳನ್ನು 15 ದಿನ ಕಂಟೇನ್ಮೆಂಟ್ ವಲಯಗಳನ್ನಾಗಿ ಘೋಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಹಾರಾಷ್ಟ್ರದಿಂದ ಮರಳಿದ ಜನರಿಗೆ ಸೀಮಿತವಾಗಿ ಸ್ಥಾಪಿಸಲಾದ ಈ 15 ಕಂಟೇನ್ಮೆಂಟ್ ವಲಯಗಳಿಗೆ ಬರಡೋಲ್ (ಚಡಚಣ), ಮುಳಸಾವಳಗಿ (ದೇವರಹಿಪ್ಪರಗಿ), ಇಂಗಳಗಿ(ದೇವರಹಿಪ್ಪರಗಿ), ಕುಂಟೋಜಿ(ಮುದ್ದೇಬಿಹಾಳ), ಮಾರಡಗಿ ಎಲ್‌ಟಿ (ನಿಡಗುಂದಿ), ಆಲಮೇಲ್(ಸಿಂಧಗಿ), ಗಣಿಹಾರ(ಸಿಂಧಗಿ), ಗುತ್ತರಗಿ(ಸಿಂಧಗಿ), ಕೋರಳ್ಳಿ (ಸಿಂಧಗಿ) ಮಾದನಳ್ಳಿ(ಸಿಂಧಗಿ), ನೀರಲಗಿ(ತಾಳಿಕೋಟಿ), ಲಿಂಗದಳ್ಳಿ(ತಾಳಿಕೋಟಿ), ತಮದಡ್ಡಿ(ತಾಳಿಕೋಟಿ), ಬರಟಗಿ(ತಿಕೋಟಾ), ಕಪ್‍ನಿಂಬರಗಿ(ಇಂಡಿ) ಗ್ರಾಮಗಳನ್ನು ಕಂಟೇನ್ಮೆಂಟ್ ಗ್ರಾಮಗಳನ್ನಾಗಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಮೂವರು ಗುಣಮುಖ: ಇಂದು ಜಿಲ್ಲಾಸ್ಪತ್ರೆಯಿಂದ ಮೂವರು ಕೋವಿಡ್-19 ಪಾಸಿಟಿವ್ ರೋಗಿಗಳು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ರೋಗಿ ಸಂಖ್ಯೆ – 2337 (40 ವರ್ಷದ ಪುರುಷ), ರೋಗಿ ಸಂಖ್ಯೆ – 2342 (29 ವರ್ಷದ ಪುರುಷ) ಹಾಗೂ ರೋಗಿ ಸಂಖ್ಯೆ – 2411 (16 ವರ್ಷದ ಬಾಲಕಿ) ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

Last Updated : Jun 2, 2020, 8:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.