ETV Bharat / state

ಕೋವಿಡ್ ವಾರಿಯರ್ಸ್​ಗೆ ಆರೋಗ್ಯ ಸಲಕರಣೆ ವಿತರಿಸಿ ವಿವಾಹ ವಾರ್ಷಿಕೋತ್ಸವ ಆಚರಿಸಿದ ಉದ್ಯಮಿ

author img

By

Published : May 18, 2021, 8:50 AM IST

ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ ಆರೋಗ್ಯ ಸಲಕರಣೆ ವಿತರಿಸುವ ಮೂಲಕ ಮುದ್ದೇಬಿಹಾಳದ ದಂಪತಿ ವಿವಾಹ ವಾರ್ಷಿಕೋತ್ಸವವನ್ನು ವಿಭಿನ್ನವಾಗಿ ಆಚರಿಸಿದರು.

Couple distributed health equipment to Covid warriors
ವಿಶೇಷವಾಗಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ದಂಪತಿ

ಮುದ್ದೇಬಿಹಾಳ: ಪಟ್ಟಣದ ಶ್ರೀ ಸಾಯಿ ಸೂಪರ್ ಮಾರ್ಕೆಟ್​ನ ಮುಖ್ಯಸ್ಥ, ಸರೂರಿನ ಆದಿಶಕ್ತಿ ಶೈಕ್ಷಣಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಬಸನಗೌಡ ಪಾಟೀಲ್ ಹಾಗೂ ನಂದಿನಿ ಪಾಟೀಲ್ ದಂಪತಿ ತಮ್ಮ 4ನೇ ವಿವಾಹ ವಾರ್ಷಿಕೋತ್ಸವವನ್ನು ವಿನೂತನವಾಗಿ ಆಚರಿಸಿಕೊಂಡಿದ್ದಾರೆ.

ಈ ಪ್ರಯುಕ್ತ, ಕೋವಿಡ್ ಮುಂಚೂಣಿ ಕಾರ್ಯಕರ್ತರಾದ ಪೊಲೀಸರು, ಪುರಸಭೆ ಪೌರ ಕಾರ್ಮಿಕರು, ಹೆಸ್ಕಾಂ ಹಾಗೂ ಅಂಚೆ ಇಲಾಖೆಯ ನೌಕರರಿಗೆ ಆರೋಗ್ಯ ಸ್ಥಿತಿಗತಿ ತಿಳಿದುಕೊಳ್ಳಲು ಹಾಗೂ ಸಮತೋಲನ ಕಾಪಾಡಲು ಸ್ಟೀಮರ್, ಆಕ್ಸಿಮೀಟರ್, ಮಾಸ್ಕ್ ಹಾಗೂ ಸ್ಯಾನಿಟೈಸರ್‌ ಕೊಡುಗೆಯಾಗಿ ನೀಡಿದ್ದಾರೆ.

ಇದನ್ನೂ ಓದಿ : 'ವಿಜಯಪುರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು 100 ಬೆಡ್​​​ಗಳ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಡಿಸಿ'

ಈ ಸಂದರ್ಭದಲ್ಲಿ ಮಾತನಾಡಿದ ಬಸನಗೌಡ ಪಾಟೀಲ್, ಕೋವಿಡ್ ಯೋಧರು ಜೀವ ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿದ್ದಾರೆ. ಅವರ ಕೆಲಸದ ಸ್ಥಳದಲ್ಲಿ ಆರೋಗ್ಯದ ಕಾಳಜಿ ವಹಿಸಲು ನೆರವಾಗುವ ಸಲುವಾಗಿ ಈ ವಸ್ತುಗಳನ್ನು ನೀಡಿದ್ದೇನೆ ಎಂದರು.

ಬಸನಗೌಡ ಪಾಟೀಲ್ ಸ್ವತಃ ತಾವೇ ಪೊಲೀಸ್ ಠಾಣೆ, ಪುರಸಭೆ, ಹೆಸ್ಕಾಂ ಹಾಗೂ ಅಂಚೆ ಕಚೇರಿಗಳಿಗೆ ತೆರಳಿ ಆರೋಗ್ಯ ಸಲಕರಣೆಗಳನ್ನು ವಿತರಿಸಿದ್ದಾರೆ. ಪೊಲೀಸ್ ಠಾಣೆಯ ಸಿಪಿಐ ಆನಂದ ವಾಘಮೋಡೆ, ಪುರಸಭೆ ಕಂದಾಯ ಅಧಿಕಾರಿ ಎಂ.ಬಿ.ಮಾಡಗಿ, ಮಹಾಂತೇಶ ಕಟ್ಟೀಮನಿ, ಹೆಸ್ಕಾಂ ಕಛೇರಿಯ ಎಂ.ಎಸ್. ತೆಗ್ಗಿನಮಠ, ಬಿ.ಎಸ್.ಯಲಗೋಡ ವಸ್ತುಗಳನ್ನು ಪಡೆದುಕೊಂಡರು. ಬಸನಗೌಡ ಪಾಟೀಲ್ ಕಾರ್ಯಕ್ಕೆ ಸಮಾಜ ಸೇವಕ ಡಾ.ವಿಜಯಕುಮಾರ್ ನಾಯಕ, ಉದಯ ರಾಯಚೂರ, ಪುನೀತ್ ಹಿಪ್ಪರಗಿ, ಸಚಿನ್ ನಿಂಗೊಳ್ಳಿಮಠ,ಗಂಗಾಧರ ಗೌಡ ಪಾಟೀಲ್, ಮಾದೇಶ ಬಿರಾದಾರ ಮೊದಲಾದವರು ಸಹಕಾರ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.