ETV Bharat / state

ಕಲ್ಲಂಗಡಿ ಹಣ್ಣು ಕೇಳೋರಿಲ್ರೀ, ಹಿಂಗಾದ್ರೇ ಹಿಂಗ್‌ರೀ ಬಾಳೇವ್‌..

ಮಾರುಕಟ್ಟೆಯಲ್ಲಿ ಕಲ್ಲಂಗಡಿ ಮಾರಲು ಹೋದರೆ ಪೊಲೀಸರು ಲಾಠಿ ಬೀಸುತ್ತಾರೆ ಎನ್ನುವ ಭಯದಿಂದ ಮುಂದೇನು ಮಾಡಬೇಕು ಎನ್ನುವ ಚಿಂತೆಯಲ್ಲಿ ರೈತನಿದ್ದಾನೆ.

Countrywide Lockdown: A farmer who cannot sell watermelon
ದೇಶದಾದ್ಯಂತ ಲಾಕ್​ಡೌನ್: ಕಲ್ಲಂಗಡಿ ಮಾರಲಾಗದೇ ಕಂಗಲಾದ ರೈತ
author img

By

Published : Mar 29, 2020, 7:21 PM IST

ವಿಜಯಪುರ: ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಬಸವರಾಜ ಕೋಲಕಾರ ಎಂಬ ರೈತ ಭೋಗ್ಯಕ್ಕೆಂದು ಪಡೆದ 4 ಎಕರೆ ಭೂಮಿಯಲ್ಲಿ ಬೆಳೆದಿದ್ದ ಕಲ್ಲಂಗಡಿ ಮಾರಾಟ ಮಾಡಲಾಗದೆ ಮನೆಯಲ್ಲಿ ಚಿಂತೆಗೀಡಾಗಿದ್ದಾನೆ.

ಕೊಳೆಯುತ್ತಿವೆ ಕಲ್ಲಂಗಡಿ ಹಣ್ಣುಗಳು..

ಸುತ್ತಮುತ್ತ ಗ್ರಾಮಗಳಲ್ಲಿ ತೆಗೆದುಕೊಂಡು ಹೋಗಿ ಕಲ್ಲಂಗಡಿ ಮಾರಾಟ ಮಾಡಬೇಕೆಂದರೂ ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ. ಅಂದಾಜು ₹5 ಲಕ್ಷ ಖರ್ಚು ಮಾಡಿ ರೈತ ಕಲ್ಲಂಗಡಿ ಬೆಳೆದಿದ್ದಾನೆ. ಕನಿಷ್ಠ ₹ 8 ಲಕ್ಷದವರೆಗೆ ಲಾಭ ಬರಬಹುದು ಎಂದು ಅಂದಾಜಿಸಿದ್ದ. ಅಸಲಿಗೆ ಈ ಹೊಲ ಸೇನೆಯಲ್ಲಿರುವ ಯೋಧ ಪ್ರಕಾಶ ಹೂಗಾರ್ ಎಂಬುವರಿಗೆ ಸೇರಿದ್ದಾಗಿದೆ. ಅದನ್ನು ಭೋಗ್ಯಕ್ಕೆ ಹಾಕಿಕೊಂಡು ಕಲ್ಲಂಗಡಿ ಬೆಳೆದಿದ್ದಾನೆ.

ಮಾರುಕಟ್ಟೆಯಲ್ಲಿ ಕಲ್ಲಂಗಡಿ ಮಾರಲು ಹೋದರೆ ಪೊಲೀಸರು ಲಾಠಿ ಬೀಸುತ್ತಾರೆ ಎನ್ನುವ ಭಯದಿಂದ ಮುಂದೇನು ಮಾಡಬೇಕು ಎನ್ನುವ ಚಿಂತೆಯಲ್ಲಿ ರೈತನಿದ್ದಾನೆ.

ವಿಜಯಪುರ: ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಬಸವರಾಜ ಕೋಲಕಾರ ಎಂಬ ರೈತ ಭೋಗ್ಯಕ್ಕೆಂದು ಪಡೆದ 4 ಎಕರೆ ಭೂಮಿಯಲ್ಲಿ ಬೆಳೆದಿದ್ದ ಕಲ್ಲಂಗಡಿ ಮಾರಾಟ ಮಾಡಲಾಗದೆ ಮನೆಯಲ್ಲಿ ಚಿಂತೆಗೀಡಾಗಿದ್ದಾನೆ.

ಕೊಳೆಯುತ್ತಿವೆ ಕಲ್ಲಂಗಡಿ ಹಣ್ಣುಗಳು..

ಸುತ್ತಮುತ್ತ ಗ್ರಾಮಗಳಲ್ಲಿ ತೆಗೆದುಕೊಂಡು ಹೋಗಿ ಕಲ್ಲಂಗಡಿ ಮಾರಾಟ ಮಾಡಬೇಕೆಂದರೂ ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ. ಅಂದಾಜು ₹5 ಲಕ್ಷ ಖರ್ಚು ಮಾಡಿ ರೈತ ಕಲ್ಲಂಗಡಿ ಬೆಳೆದಿದ್ದಾನೆ. ಕನಿಷ್ಠ ₹ 8 ಲಕ್ಷದವರೆಗೆ ಲಾಭ ಬರಬಹುದು ಎಂದು ಅಂದಾಜಿಸಿದ್ದ. ಅಸಲಿಗೆ ಈ ಹೊಲ ಸೇನೆಯಲ್ಲಿರುವ ಯೋಧ ಪ್ರಕಾಶ ಹೂಗಾರ್ ಎಂಬುವರಿಗೆ ಸೇರಿದ್ದಾಗಿದೆ. ಅದನ್ನು ಭೋಗ್ಯಕ್ಕೆ ಹಾಕಿಕೊಂಡು ಕಲ್ಲಂಗಡಿ ಬೆಳೆದಿದ್ದಾನೆ.

ಮಾರುಕಟ್ಟೆಯಲ್ಲಿ ಕಲ್ಲಂಗಡಿ ಮಾರಲು ಹೋದರೆ ಪೊಲೀಸರು ಲಾಠಿ ಬೀಸುತ್ತಾರೆ ಎನ್ನುವ ಭಯದಿಂದ ಮುಂದೇನು ಮಾಡಬೇಕು ಎನ್ನುವ ಚಿಂತೆಯಲ್ಲಿ ರೈತನಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.