ವಿಜಯಪುರ: ಕೊರೊನಾ ವೈರಸ್ ಭೀತಿಗೆ ಹೆದರಿ ಕೆಲವರು ಪ್ಯಾರಿಸ್, ದುಬೈ, ಜರ್ಮನಿ ಮತ್ತು ಇಟಲಿಯಿಂದ ತವರು ಜಿಲ್ಲೆಗೆ ಹಿಂದಿರುಗಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಮಲ್ಲನಗೌಡ ಬಿರಾದಾರ ಹೇಳಿದ್ದಾರೆ.
ಜಿಲ್ಲೆಗೆ ಮರಳಿದ ಯುವಕರಲ್ಲಿ ಕೊರೊನಾ ವೈರಸ್ನ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಯುವಕರ ಮೇಲೆ ನಿಗಾ ಇಡಲಾಗಿದೆ. ಕಳೆದ ವಾರ ಪ್ಯಾರಿಸ್ನಿಂದ ಜಿಲ್ಲೆಗೆ ಮರಳಿದ ವ್ಯಕ್ತಿಯಲ್ಲಿ ನೆಗಡಿ ಕಾಣಿಸಿಕೊಂಡಿತ್ತು. ಹೀಗಾಗಿ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ನೆಗಟಿವ್ ವರದಿ ಬಂದಿದ್ದು, ಇವರ ಮನೆಯಲ್ಲಿರುವ ಐವರ ಮೇಲೆ ನಿಗಾ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಜನವರಿ 31 ರಂದು ಚೀನಾದಿಂದ ಎಂಬಿಬಿಎಸ್ ವಿದ್ಯಾರ್ಥಿ ಜಿಲ್ಲೆಗೆ ವಾಪಸಾಗಿದ್ದಾನೆ. ಅದರಂತೆ ಮೂರು ದಿನಗಳ ಹಿಂದೆ ದುಬೈಗೆ ಪ್ರವಾಸ ಕೈಗೊಂಡ ವ್ಯಕ್ತಿಯೂ ಹಿಂದಿರುಗಿದ್ದಾರೆ. ಇಬ್ಬರು ಜರ್ಮನಿ, ಇಟಲಿಯಿಂದ ಜಿಲ್ಲೆಗೆ ಮರಳಿದ್ದಾರೆ. ಐವರಲ್ಲಿ ಮೂವರು ಸಾಫ್ಟವೇರ್ ಇಂಜಿನಿಯರ್ಸ್ ಆಗಿ ವಿದೇಶಿಗಳಲ್ಲಿ ಕೆಲಸ ಮಾಡುತ್ತಿದ್ದರು. ಕೊರೊನಾ ಭೀತಿಗೆ ಹೆದರಿ ತವರಿಗೆ ವಾಪಸ್ ಆಗಿದ್ದು, ಇವರ ಮೇಲೆ ನಿಗಾ ಇಡಲಾಗಿದೆ ಮಾಧ್ಯಮಗಳಿಗೆ ಬಿರಾದಾರ ಮಾಹಿತಿ ನೀಡಿದ್ದಾರೆ.