ಮುದ್ದೇಬಿಹಾಳ: ಲಾಕ್ಡೌನ್ನಿಂದ ಕೊತ್ತಂಬರಿ ಸೊಪ್ಪು ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಬರುತ್ತಿದ್ದು, ಇದರ ಬೆಲೆ ಗಗನಕ್ಕೇರಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.
ಯಾವುದೇ ಅಡುಗೆಗೂ ಕೊತ್ತಂಬರಿ ಸೊಪ್ಪು ಬೇಕೇ ಬೇಕು. ಮಾರುಕಟ್ಟೆಯಲ್ಲಿ ಇದಕ್ಕೆ ಸಾಕಷ್ಟು ಬೇಡಿಕೆಯಿದೆ. ಆದರೆ ಇದೀಗ ಇದರ ಬೆಲೆಯಲ್ಲಿ ಏರಿಕೆಯಾಗಿದೆ. ಒಂದು ಸೂಡಿಗೆ (ಕಟ್ಟಿಗೆ) 50 ರೂ.ಗಳಷ್ಟು ಬೆಲೆ ಹೆಚ್ಚಾಗಿದ್ದು, ಬೆಲೆ ಕೇಳಿದ ಗ್ರಾಹಕರಿಗೆ ಶಾಕ್ ಆಗುತ್ತಿದೆ.
ರೈತರು ಹೆಚ್ಚಿನ ಪ್ರಮಾಣದಲ್ಲಿ ಕೊತ್ತಂಬರಿ ಬೆಳೆಯಲು ಮುಂದಾಗದೆ ಇರುವುದು ಬೆಲೆ ಏರಿಕೆ ಆಗಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.