ETV Bharat / state

ವಿಜಯಪುರ: 6 ಪ.ಪಂಚಾಯಿತಿಗಳ ಪೈಕಿ 3 ಕಾಂಗ್ರೆಸ್ ತೆಕ್ಕೆಗೆ, ಉಳಿದವು?

ಜಿಲ್ಲೆಯ ಆರು ಪಟ್ಟಣ ಪಂಚಾಯಿತಿಗಳ ಪೈಕಿ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಗೆಲುವು ಸಾಧಿಸಿದೆ. ಬಿಜೆಪಿ 1 ಹಾಗೂ 2 ಪಟ್ಟಣ ಪಂಚಾಯಿತಿ ಫಲಿತಾಂಶ ಅತಂತ್ರವಾಗಿದೆ.

author img

By

Published : Dec 30, 2021, 1:26 PM IST

congress leading in vijayapura local body election
ವಿಜಯಪುರದಲ್ಲಿ ಕಾಂಗ್ರೆಸ್​ಗೆ ಗೆಲುವು

ವಿಜಯಪುರ: ಜಿಲ್ಲೆಯ ಆರು ಪಟ್ಟಣ ಪಂಚಾಯಿತಿಗಳ 97 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಗೆಲುವು ಸಾಧಿಸಿದೆ. ಬಿಜೆಪಿ 1 ಹಾಗೂ 2 ಪಟ್ಟಣ ಪಂಚಾಯಿತಿ ಫಲಿತಾಂಶ ಅತಂತ್ರವಾಗಿದೆ. ಅತಂತ್ರ ಪ.ಪಂ.ಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಕಾಂಗ್ರೆಸ್ ಹಾಗೂ ಬಿಜೆಪಿ ತೆರೆಮರೆಯ ಕಾರ್ಯತಂತ್ರ ರೂಪಿಸುತ್ತಿವೆ.

ನಿಡಗುಂದಿ ಪಟ್ಟಣ ಪಂಚಾಯಿತಿ:

ಜಿಲ್ಲೆಯ ನಿಡಗುಂದಿ ಪ.ಪಂ.ನ 16 ಸ್ಥಾನಗಳ ಪೈಕಿ ಕಾಂಗ್ರೆಸ್- 9, ಬಿಜೆಪಿ- 6, ಪಕ್ಷೇತರ- 1 ಕ್ಷೇತ್ರದಲ್ಲಿ ಜಯ ಗಳಿಸಿದ್ದು, ಈ ಪಂಚಾಯಿತಿಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಸಾಧಿಸಿದೆ. ಮನಗೂಳಿ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್-4 ಸ್ಥಾನಗಳನ್ನು ಪಡೆದಿದ್ದರೆ ಹಾಗೂ ಬಿಜೆಪಿ 12 ಕ್ಷೇತ್ರದಲ್ಲಿ ಸ್ಪಷ್ಟ ಬಹುಮತ ಸಾಧಿಸಿ ಅಧಿಕಾರದ ಗದ್ದುಗೆ ಹಿಡಿದಿದೆ.

ನಾಲತವಾಡ ಪಟ್ಟಣ ಪಂಚಾಯಿತಿ:

ಬಿಜೆಪಿ ಶಾಸಕ ಎ.ಎಸ್. ಪಾಟೀಲ ಪ್ರತಿನಿಧಿಸುವ ಮುದ್ದೇಬಿಹಾಳ ವಿಧಾನಸಭೆ ವ್ಯಾಪ್ತಿಯ ನಾಲತವಾಡ ಪ.ಪಂ.ನಲ್ಲಿ ಬಿಜೆಪಿ ಮುಗ್ಗರಿಸಿದೆ. 14 ಕ್ಷೇತ್ರಗಳ ಪೈಕಿ ಕಾಂಗ್ರೆಸ್ -9, ಬಿಜೆಪಿ-0, ಜೆಡಿಎಸ್- 1 ಹಾಗೂ ಪಕ್ಷೇತರರು 4ರಲ್ಲಿ ಜಯ ಗಳಿಸಿದ್ದು, ಕಾಂಗ್ರೆಸ್ ಈ ಕ್ಷೇತ್ರವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ಕೊಲ್ಹಾರ ಪಟ್ಟಣ ಪಂಚಾಯಿತಿ:

ಕೊಲ್ಹಾರ ಪ.ಪಂ.ನ 17ಕ್ಷೇತ್ರಗಳ ಪೈಕಿ ಕಾಂಗ್ರೆಸ್- 11, ಬಿಜೆಪಿ-3, ಎಐಎಂಐಎಂ-2 ಹಾಗೂ ಪಕ್ಷೇತರ -1 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಇಲ್ಲಿಯೂ ಸಹ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಅಧಿಕಾರ ಪಡೆದುಕೊಂಡಿದೆ.

ದೇವರಹಿಪ್ಪರಗಿ ಪಟ್ಟಣ ಪಂಚಾಯಿತಿ:

ದೇವರಹಿಪ್ಪರಗಿ ಪ.ಪಂ.ನ 17ಕ್ಷೇತ್ರಗಳ ಪೈಕಿ ಕಾಂಗ್ರೆಸ್- 7, ಬಿಜೆಪಿ- 4 ಜೆಡಿಎಸ್- 4 ಹಾಗೂ ಪಕ್ಷೇತರರು ಇಬ್ಬರು ಜಯ ಗಳಿಸಿದ್ದಾರೆ. ಬಿಜೆಪಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಕ್ಷೇತ್ರವಾಗಿದ್ದು ಸ್ಪಷ್ಟ ಬಹುಮತಕ್ಕೆ ಬಿಜೆಪಿ ಜೆಡಿಎಸ್ ಹಾಗೂ ಪಕ್ಷೇತರರನ್ನು ಅವಲಂಬಿಸಿದೆ.

ಆಲಮೇಲ ಪಟ್ಟಣ ಪಂಚಾಯಿತಿ:

ಇನ್ನು, ಹೆಚ್ಚು ಕುತೂಹಲ ಕೆರಳಿಸಿದ್ದ ಬಿಜೆಪಿ ಶಾಸಕ ರಮೇಶ ಭೂಸನೂರ ಕ್ಷೇತ್ರ ವ್ಯಾಪ್ತಿಯ ಆಲಮೇಲ ಪ.ಪಂ.ನ 19 ಕ್ಷೇತ್ರಗಳ ಪೈಕಿ ಕಾಂಗ್ರೆಸ್ -7, ಬಿಜೆಪಿ- 9 ಹಾಗೂ ಪಕ್ಷೇತರರು- 3 ಜಯ ಸಾಧಿಸಿದ್ದಾರೆ. ಇಲ್ಲಿ ಪಕ್ಷೇತರರು ಯಾವ ಪಕ್ಷಕ್ಕೆ ಬೆಂಬಲ ನೀಡುತ್ತಾರೋ, ಅವರು ಅಧಿಕಾರ ಹಿಡಿಯಲಿದ್ದಾರೆ.

ಇದನ್ನೂ ಓದಿ: ಗದಗ-ಬೆಟಗೇರಿಯಲ್ಲಿ ಕಮಲಕ್ಕೆ ಐತಿಹಾಸಿಕ ಜಯ: ಹೆಚ್.ಕೆ.ಪಾಟೀಲ್​ಗೆ ತವರು ಕ್ಷೇತ್ರದಲ್ಲೇ ಹಿನ್ನಡೆ

ಒಟ್ಟು 6 ಪಟ್ಟಣ ಪಂಚಾಯಿತಿಯ 99 ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳು ಚುನಾವಣಾ ಪೂರ್ವ ಅವಿರೋಧ ಆಯ್ಕೆಯಾಗಿದ್ದು, 97 ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದೆ. ಮೇಲ್ನೋಟಕ್ಕೆ ಕಾಂಗ್ರೆಸ್ ಜಿಲ್ಲೆಯಲ್ಲಿ ತನ್ನ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.