ETV Bharat / state

ಗಣೇಶ ಉತ್ಸವ ಆಚರಣೆಗೆ ಅನುಮತಿ ಕೋರಿ ವಿಜಯಪುರ ಡಿಸಿಗೆ ಮನವಿ

ಗಣೇಶ ಉತ್ಸವ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಬೇಕು ಎಂದು ಶ್ರೀಗಜಾನನ ಉತ್ಸವ ಮಹಾ ಮಂಡಳಿ ಸಂಘಟನೆ ಕಾರ್ಯಕರ್ತರು, ವಿಜಯಪುರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

author img

By

Published : Aug 7, 2020, 5:09 PM IST

ವಿಜಯಪುರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಶ್ರೀಗಜಾನನ ಉತ್ಸವ ಮಹಾ ಮಂಡಳಿ ಸಂಘಟನೆ

ವಿಜಯಪುರ: ಪ್ರತಿ ವರ್ಷದಂತೆ ಈ ವರ್ಷವೂ ಗಣೇಶ ಉತ್ಸವ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಬೇಕು ಎಂದು ಗಜಾನನ ಉತ್ಸವ ಮಹಾ ಮಂಡಳಿ ಸಂಘಟನೆ ಕಾರ್ಯಕರ್ತರು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಸಾಂಪ್ರದಾಯಿಕವಾಗಿ ಜಿಲ್ಲೆಯಲ್ಲಿ ಗಣೇಶ ಹಬ್ಬವನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಮನೆಗಳಲ್ಲಿ ಅದ್ದೂರಿ ಆಚರಣೆ ಮಾಡಿಕೊಂಡು ಬರಲಾಗಿದೆ. ಆದರೆ ಈ ಬಾರಿ ಕೋವಿಡ್ ಭೀತಿಯಲ್ಲಿ ಜಿಲ್ಲಾಡಳಿತ ಹಬ್ಬ ಆಚರಣೆಗೆ ನಿರ್ಬಂಧ ಹೇರಬಾರದು ಎಂದರು.

ಇನ್ನೂ ಸರ್ಕಾರದ ಕೊರೊನಾ ನಿಯಂತ್ರಣ ನಿಯಮಗಳನ್ನು ಪಾಲನೆ ಮಾಡಿಕೊಂಡು ಗಣೇಶ ಉತ್ಸವ ಆಚರಣೆಗೆ ಜನರು ತಯಾರಿಸಿ ನಡೆಸುತ್ತಿದ್ದಾರೆ. ಜಿಲ್ಲಾಡಳಿತ ನೀಡುವ ನಿರ್ದೇಶನಗಳಿಗೆ ಬದ್ಧವಾಗಿ ಸಾರ್ವಜನಿಕ ಗಣೇಶ ಉತ್ಸವ ಕಮಿಟಿಗಳು ಕಾರ್ಯ ನಿರ್ವಹಿಸುತ್ತವೆ. ಆದ್ರೆ ಹಬ್ಬಕ್ಕೆ ನಿಷೇಧ ಹೇರಬಾರದು ಎಂದು ಗಣೇಶ ಉತ್ಸವ ಮಂಡಳಿ ಕಾರ್ಯಕರ್ತರು, ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಇನ್ನೂ ಇದೇ ವೇಳೆ, ಗಣೇಶ ನಿಮಜ್ಜನ ಸಮಯದಲ್ಲಿ ಕೊರೊನಾ‌ ಭೀತಿ ಎದುರಾಗಬಹುದು. ಸಾರ್ವಜನಿಕ ಹೊಂಡ, ಬಾವಿ, ಕೆರೆಗಳಲ್ಲಿ ನಿಮಜ್ಜನ ಮಾಡದೆ ಮನೆಗಳಲ್ಲಿ ಗಣೇಶ ನಿಮಜ್ಜನಕ್ಕೆ ಕೃತಕ ಹೊಂಡ ನಿರ್ಮಿಸುವಂತೆ ಕೋರಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.