ETV Bharat / state

ಸಾಧಕನಿಗೆ ಸಾವು ಅಂತ್ಯವಲ್ಲ: ಸಿದ್ದೇಶ್ವರ ಶ್ರೀಗಳಿಗೆ ಸಿಎಂ ಬೊಮ್ಮಾಯಿ ಅಂತಿಮ ನಮನ - ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ - ಎಲ್ಲಿಯವರೆಗೆ ಭೂಮಿ, ನಿಸರ್ಗ, ನೀರು, ಗಾಳಿ ಇರುತ್ತದೆಯೋ ಅಲ್ಲಿಯವರೆಗೂ ಅವರು ಇರುತ್ತಾರೆ- ಸಿಎಂ ಬಣ್ಣನೆ

ಸಿದ್ದೇಶ್ವರ ಶ್ರೀಗಳಿಗೆ ಸಿಎಂ ಬೊಮ್ಮಾಯಿ ಅಂತಿಮ ನಮನ

author img

By

Published : Jan 3, 2023, 5:10 PM IST

Updated : Jan 3, 2023, 5:29 PM IST

ಸಿದ್ದೇಶ್ವರ ಶ್ರೀಗಳಿಗೆ ಸಿಎಂ ಬೊಮ್ಮಾಯಿ ಅಂತಿಮ ನಮನ

ವಿಜಯಪುರ: ಸಿದ್ದೇಶ್ವರ ಶ್ರೀಗಳಿದ್ದ ಸಮಯದಲ್ಲಿ ನಾವೆಲ್ಲ ಇದ್ದೇವೆ ಅನ್ನೋದೆ ನಮ್ಮ ಭಾಗ್ಯ. ಮುಂದಿನ ಪೀಳಿಗೆಗೆ ಇಂತಹ ಪುಣ್ಯಾತ್ಮರೊಬ್ಬರು ಈ ಭೂಮಿ ಮೇಲೆ ಇದ್ದರು ಅಂತ ಹೇಳುವಂತಹ ವ್ಯಕ್ತಿ ಅವರಾಗಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸಿದ್ದೇಶ್ವರ ಶ್ರೀ ನಿಸರ್ಗದ ಸ್ವತ್ತಾಗುತ್ತಾರೆ.. ಶ್ರೀಗಳ ಅಂತಿಮ ದರ್ಶನ ಪಡೆದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವರೊಬ್ಬ ನಿರ್ಮೋಹಿಗಳು. ಸ್ಮಾರಕ ಸೇರಿದಂತೆ ಅದು-ಇದು ನಿರ್ಮಾಣ ಮಾಡದಂತೆ ಎಷ್ಟೋ ಸಲ ಹೇಳಿದ್ದುಂಟು. ಸಾವಿನ ಬಳಿಕ ತಮ್ಮ ದೇಹವನ್ನು ಅಗ್ನಿಗೆ ಅರ್ಪಿಸಿ ಅಂತ ಹೇಳಿದ್ದರಲ್ಲಿ ಅರ್ಥವಿದೆ. ಅವರು ಹೇಳಿದಂತೆ ನಡೆದುಕೊಳ್ಳಲಾಗುತ್ತದೆ. ಅಗ್ನಿಗೆ ಅರ್ಪಿಸಿದ ಬಳಿಕ ಅವರು ಇಡೀ ನಿಸರ್ಗದ ಸ್ವತ್ತಾಗುತ್ತಾರೆ. ಎಲ್ಲಿಯವರೆಗೆ ಭೂಮಿ, ನಿಸರ್ಗ, ನೀರು, ಗಾಳಿ ಇರುತ್ತದೆಯೋ ಅಲ್ಲಿಯವರೆಗೂ ಅವರು ಇರುತ್ತಾರೆ ಎಂದು ಶ್ರೀಗಳ ನಡೆ ಮತ್ತು ನುಡಿಯನ್ನು ಮುಖ್ಯಮಂತ್ರಿ ಬಣ್ಣಿಸಿದರು.

ಸಾಧಕರಿಗೆ ಸಾವು ಅಂತ್ಯವಲ್ಲ.. ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ಬಳಿಕವೂ ಬದುಕುವುದು ಸಾರ್ಥಕ. ಇಲ್ಲಿ ಸೇರಿರುವ ಜನಸಾಗರ ನೋಡಿದರೆ ಸಿದ್ದೇಶ್ವರ ಶ್ರೀಗಳ ಬದುಕು ಸಾರ್ಥಕ ಅನ್ನಿಸುತ್ತದೆ. ಕೋಟ್ಯಂತರ ಭಕ್ತರ ಈ ಪ್ರೀತಿ ನೋಡಿದರೆ ಅವರು ನಮ್ಮನ್ನಗಲಿ ಎಲ್ಲಿಯೂ ಹೋಗಿಲ್ಲ ಅನ್ನಿಸುತ್ತದೆ. ವೈಯಕ್ತಿಕವಾಗಿ ಸ್ವಾಮಿ ವಿವೇಕಾನಂದರ ನಂತರ ನನ್ನನ್ನು ಹೆಚ್ಚು ಕಾಡಿದವರು ಈ ಸಿದ್ದೇಶ್ವರ ಶ್ರೀಗಳು. ಅವರ ವಿಚಾರಗಳು ಹಾಗಿವೆ. ಹಾಗಾಗಿ ಅವರು ಹೇಳಿದಂತಹ ಮಾರ್ಗವನ್ನು ಅನುಸರಿಸಬೇಕು. ಇದೇ ನಾವು-ನೀವು ಅವರಿಗೆ ಕೊಡಬೇಕಾದ ಗೌರವ ಎಂದರು.

ಶ್ರೀಗಳು ಸಾವನ್ನು ಎದುರಿಸಿದರು. ಈಗಲೂ ಅವರ ಮುಖದಲ್ಲಿ ಕಳೆ ಕಾಣುತ್ತದೆ. ಸಾವನ್ನು ಗೆದ್ದವರು ಅನ್ನೋದಕ್ಕೆ ಈ ಚಿಕ್ಕ ಉದಾಹರಣೆ ಸಾಕು. ಶ್ರೀಗಳನ್ನು ನೋಡಲೆಂದು ಭಕ್ತರು ದೊಡ್ಡ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಹಾಗಾಗಿ ಅಂತಿಮ ದರ್ಶನದ ಸಮಯವನ್ನು ಹೆಚ್ಚಿಸಲಾಗುತ್ತದೆ. ವಿಲ್​ನಲ್ಲಿ ಏನಿದೆಯೇ ಅದೇ ರೀತಿ ಅವರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುವುದು. ಆದರೆ, ಅಂತ್ಯಕ್ರಿಯೆ ವೇಳೆ ಹೆಚ್ಚು ಜನರು ಸೇರುವಂತಿಲ್ಲ. ಇದಕ್ಕೆ ಎಲ್ಲರ ಸಹಕಾರ ನೀಡಬೇಕು ಎಂದು ಸಿಎಂ ಬೊಮ್ಮಾಯಿ ಮನವಿ ಮಾಡಿದರು.

ಇದನ್ನೂ ಓದಿ: 'ದೇಹವನ್ನು ಅಗ್ನಿಗೆ ಅರ್ಪಿಸಿ, ಸ್ಮಾರಕ ಕಟ್ಟಬೇಡಿ': ಸಿದ್ದೇಶ್ವರ ಶ್ರೀಗಳು ಬರೆದಿದ್ದ ಅಭಿವಂದನ ಪತ್ರ

Last Updated : Jan 3, 2023, 5:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.