ETV Bharat / state

ಗೌರವ ವಂದನೆ ವಿಚಾರ: ಎಸ್ಪಿ ತರಾಟೆಗೆ ತೆಗೆದುಕೊಂಡ ಸಿಎಂ - ಎಸ್ಪಿಗೆ ತರಾಟೆ ತಗೆದುಕೊಂಡ ಸಿಎಂ ಬಸವರಾಜ ಬೊಮ್ಮಾಯಿ

ಪೊಲೀಸ್ ವಂದನೆ ಪದ್ಧತಿ ಬೇಡ ಎಂದು ಸಿಎಂ ಈ ಮೊದಲೇ ಸೂಚನೆ ನೀಡಿದ್ದರು. ಆದರೂ ಆಲಮಟ್ಟಿ ಹ್ಯಾಲಿಪ್ಯಾಡ್​​​ನಲ್ಲಿ ಪೊಲೀಸ್​ ಇಲಾಖೆ ಶಿಷ್ಟಾಚಾರದಂತೆ ಪೊಲೀಸ್ ಗೌರವ ವಂದನೆ ನೀಡಿತ್ತು. ಇದರಿಂದ ಕೋಪಗೊಂಡ ಸಿಎಂ ಎಸ್ಪಿ ಆನಂದ್​ ಕುಮಾರ್​ ಅವರನ್ನು ತರಾಟೆ ತೆಗೆದುಕೊಂಡರು.

CM outrage against SP Anand kumar in Vijayapura
ಸಿಎಂಗೆ ಗೌರವ ವಂದನೆ ನೀಡಿದ್ದಕ್ಕೆ ಎಸ್ಪಿಗೆ ತರಾಟೆ
author img

By

Published : Aug 21, 2021, 7:07 PM IST

Updated : Aug 21, 2021, 7:27 PM IST

ವಿಜಯಪುರ: ತಮಗೆ ಶಿಷ್ಟಾಚಾರದಂತೆ ಪೊಲೀಸ್ ಗೌರವ ವಂದನೆ ನೀಡಿದ ಎಸ್ಪಿ ಆನಂದ್​ ಕುಮಾರ್​​ ಅವರನ್ನು ಆಲಮಟ್ಟಿ ಹ್ಯಾಲಿಪ್ಯಾಡ್​​​ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಎಸ್ಪಿ ತರಾಟೆಗೆ ತೆಗೆದುಕೊಂಡ ಸಿಎಂ

ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಬೆಳಗಾವಿಯಿಂದ ಹೆಲಿಕ್ಯಾಪ್ಟರ್ ಮೂಲಕ ಸಿಎಂ ಆಗಮಿಸಿದ್ದರು. ಈ ವೇಳೆ, ಪೊಲೀಸ್ ಶಿಷ್ಟಾಚಾರದಂತೆ ಎಸ್ಪಿ ಆನಂದ್​​ ಕುಮಾರ್​​ ಗೌರವ ವಂದನೆ ಸಲ್ಲಿಸಲು ಮುಂದಾಗಿದ್ದರು. ಇದರಿಂದ ಕೋಪಗೊಂಡ ಸಿಎಂ, ಪೊಲೀಸ್ ತಂಡದಿಂದ ಗೌರವ ವಂದನೆ ಆಯೋಜನೆ ಮಾಡಿದ್ದಕ್ಕೆ ಎಸ್ಪಿಗೆ ತರಾಟೆ ತೆಗೆದುಕೊಂಡರು.

ಪೊಲೀಸ್ ವಂದನೆ ಪದ್ಧತಿ ಬೇಡ ಎಂದು ಈಗಾಗಲೇ ಹೇಳಿದ್ದೆ. ಸೂಚನೆ ಬಳಿಕವೂ ಇಂದು ಪೊಲೀಸ್ ಗೌರವ ವಂದನೆ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಸಿಎಂ ಕೋಪಗೊಂಡು ಉತ್ತರ ವಲಯ ಐಜಿಪಿ ಸತೀಶ್​ ಕುಮಾರ್​ ಹಾಗೂ ವಿಜಯಪುರ ಎಸ್ಪಿ ಆನಂದ್​ ಕುಮಾರ್​ ಮೇಲೆ ಅಸಮಾಧಾನ ಹೊರ ಹಾಕಿದರು.

ಓದಿ: ಸದನದ ಯಾವ ಆಸನದಲ್ಲಿ ಆಸೀನರಾಗುತ್ತಾರೆ ಬಿಎಸ್​ವೈ,ಶೆಟ್ಟರ್?

Last Updated : Aug 21, 2021, 7:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.