ETV Bharat / state

ಕೊರೊನಾ ರಜೆಯಲ್ಲಿ ಕೃಷಿಯತ್ತ ದೃಷ್ಟಿ ನೆಟ್ಟ ಮಕ್ಕಳು: ಪೋಷಕರು ಫುಲ್​ ಖುಷ್​

ವಿಜಯಪುರ ಜಿಲ್ಲೆಯ ಮಕ್ಕಳು ತಮ್ಮ ಪೋಷಕರೊಂದಿಗೆ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಭೂತಾಯಿಯ ಸೇವೆಯ ಮಹತ್ವವನ್ನು ಅರಿತುಕೊಂಡಿದ್ದಾರೆ.

ಕೃಷಿಯಲ್ಲಿ ತೊಡಗಿಕೊಂಡ ಮಕ್ಕಳು
ಕೃಷಿಯಲ್ಲಿ ತೊಡಗಿಕೊಂಡ ಮಕ್ಕಳು
author img

By

Published : Aug 9, 2020, 1:15 PM IST

ವಿಜಯಪುರ: ಕೊರೊನಾ ಮಾನವನಿಗೆ ತರಹೇವಾರಿ ಸಮಸ್ಯೆಗಳನ್ನು ತಂದೊಡ್ಡಿದೆ. ಇದರಿಂದ ಆರೋಗ್ಯ ಮತ್ತು ಆರ್ಥಿಕ ಸಮಸ್ಯೆಗಳು ಎದುರಾಗಿದ್ದರೂ, ಹಲವಾರು ಬಗೆಯಲ್ಲಿ ಪಾಠವನ್ನೂ ಕಲಿಸಿದೆ. ಸದಾ ಶಿಕ್ಷಣದಲ್ಲಿ ತೊಡಗಿಸಿಕೊಂಡಿದ್ದ ಮಕ್ಕಳು ಭೂತಾಯಿ ಸೇವೆಗೆ ಮುಂದಾಗಿದ್ದಾರೆ.

ತಮ್ಮ ಬಿಡುವಿನ ಸಮಯವನ್ನು ಕೇವಲ ಆಟ, ಟಿವಿ ನೋಡಿ ಸಮಯ ವ್ಯರ್ಥ ಮಾಡದೆ, ತಮ್ಮ ಪೋಷಕರ ಜತೆ ಹೊಲದಲ್ಲಿ ಕೆಲಸ ಮಾಡುತ್ತಾ ಭೂತಾಯಿಯ ಸೇವೆಯ ಮಹತ್ವವನ್ನು ಅರಿತುಕೊಂಡಿದ್ದಾರೆ.

ಕೊರೊನಾ ಭೀತಿಯಿಂದ ಕಳೆದ ನಾಲ್ಕು ತಿಂಗಳಿಂದ ಶಾಲೆಗಳು ಬಂದ್ ಆಗಿ ಆನ್​ಲೈನ್ ತರಬೇತಿ ಮಕ್ಕಳ ಪಾಲಿಗೆ ವಿದ್ಯಾ ದೇಗುಲವಾಗಿದೆ. ಇದರ ಹೊರತಾಗಿಯೂ ಮಕ್ಕಳು ಹೊಸ ಹೊಸ ಆಸಕ್ತಿ ಬೆಳೆಸಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಮಕ್ಕಳು ತಮ್ಮ ಪೋಷಕರಿಗೆ ಹೊಲದಲ್ಲಿ ಸಹಾಯ ಮಾಡುವ ಮೂಲಕ ಸಮಯವನ್ನು ಸಾರ್ಥಕವಾಗಿ ಕಳೆಯುತ್ತಿದ್ದಾರೆ. ಈಗ ಮುಂಗಾರು ಆರಂಭವಾಗಿದ್ದರಿಂದ ಬಸವನಾಡು ವಿಜಯಪುರದಲ್ಲಿ ವಿದ್ಯಾರ್ಥಿಗಳು ಪಾಲಕರೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕೃಷಿಯಲ್ಲಿ ತೊಡಗಿಸಿಕೊಂಡು ಪೋಷಕರಿಗೆ ನೆರವಾದ ಮಕ್ಕಳು

ಮುಂಗಾರು ಮಳೆಯಾದ ಪರಿಣಾಮ ಭೂಮಿ ಹದವಾಗಿದ್ದು, ನೇಗಿಲು ಹೊಡೆಯುವುದು, ಮಣ್ಣನ್ನು ಹರಗುವುದು, ಕಳೆ ಕೀಳುವುದು ಮತ್ತು ಬಿತ್ತನೆಯಂಥ ಚಟುವಟಿಕೆಗಳಲ್ಲಿ ಮಕ್ಕಳು ಖುಷಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ಈ ಮುಂಚೆ ಬೇಸಿಗೆ ರಜೆಯಲ್ಲಿ ಪೋಷಕರು ಕೃಷಿ ಕಡೆಗೆ ಮಕ್ಕಳನ್ನು ಸೆಳೆಯಲೆತ್ನಿಸಿದರೂ ಪ್ರಯೋಜನವಾಗುತ್ತಿರಲಿಲ್ಲ. ಆದರೆ ಈಗ ಮನೆಯಲ್ಲಿ ಕುಳಿತು ಬೇಜಾರಾಗಿರುವ ಚಿಣ್ಣರು ಬೇಸಾಯದತ್ತ ದೃಷ್ಟಿ ನೆಟ್ಟಿದ್ದಾರೆ.

ಈ ಕುರಿತು ಮಾತನಾಡಿದ ವಿದ್ಯಾರ್ಥಿ ಮಿಥುನ್​ ಸುಸಲಾದಿ, ಜಮೀನಿನಲ್ಲಿ ಬಿತ್ತನೆ, ಗೊಬ್ಬರ ಹಾಕುವುದನ್ನು ಮತ್ತು ಬೆಳೆಗಳಿಗೆ ನೀರುಣಿಸುವುದನ್ನು ಕಲಿಯುತ್ತಿದ್ದೇವೆ ಎಂದು ಹೇಳುತ್ತಾನೆ.

ಮಕ್ಕಳಿಗೆ ಬಾಲ್ಯದಲ್ಲಿ ಕಲಿಕೆಯ ಆಸಕ್ತಿ ಹೆಚ್ಚಾಗಿರುತ್ತದೆ. ಈಗ ಹಳ್ಳಿಗಳಲ್ಲಿ ಈ ಮಕ್ಕಳು ಕೃಷಿಯತ್ತ ಮುಖ ಮಾಡಿದ್ದು, ಮತ್ತು ನಗರಗಳಲ್ಲಿ ವಾಸಿಸುತ್ತಿದ್ದ ಮಕ್ಕಳು ಕೊರೊನಾ ರಜೆಯ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಕ್ಕೆ ಮರಳಿದ್ದಾರೆ. ಅವರೂ ಕೂಡ ಬೇಸಾಯವನ್ನು ಕಲಿಯುತ್ತಿರುವುದು ಉತ್ತಮ ಬೆಳವಣಿಗೆ ಎನ್ನುತ್ತಾರೆ ಶಿಕ್ಷಕರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.