ವಾಷಿಂಗ್ಟನ್, ಅಮೆರಿಕ: ಐತಿಹಾಸಿಕ ನೊಟ್ರೆ ಡೇಮ್ ಕ್ಯಾಥೆಡ್ರಲ್‌ನ ಪುನರಾರಂಭದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾರಾಂತ್ಯದಲ್ಲಿ ಪ್ಯಾರಿಸ್‌ಗೆ ಭೇಟಿ ನೀಡಲಿದ್ದಾರೆ. ಫ್ರೆಂಚ್ ಗೋಥಿಕ್ ವಾಸ್ತುಶಿಲ್ಪದ ಅತ್ಯುತ್ತಮ ಉದಾಹರಣೆಗಳಲ್ಲಿ ನೊಟ್ರೆ ಡೇಮ್ ಕ್ಯಾಥೆಡ್ರಲ್ ಒಂದು ಎಂದು ಪರಿಗಣಿಸಲಾಗಿದೆ. 13 ನೇ ಶತಮಾನದ ಕ್ಯಾಥೆಡ್ರಲ್ ಏಪ್ರಿಲ್ 15, 2019 ರ ಅಗ್ನಿ ದುರಂತದಲ್ಲಿ ನಾಶವಾಗಿತ್ತು.
ಈ ಐತಿಹಾಸಿಕ ಕಟ್ಟಡದ ಪುನರ್ ನಿರ್ಮಾಣಕ್ಕೆ ಸುಮಾರು ಐದು ವರ್ಷಗಳನ್ನು ತೆಗೆದುಕೊಂಡಿತು. ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ನಾನು ಶನಿವಾರ ಪ್ಯಾರಿಸ್‌ಗೆ ಪ್ರಯಾಣಿಸಲಿದ್ದೇನೆ ಎಂದು ಘೋಷಿಸಲು ಸಂತಸವಾಗುತ್ತಿದೆ. ಭವ್ಯವಾದ ಮತ್ತು ಐತಿಹಾಸಿಕ ನೊಟ್ರೆ ಡೇಮ್ ಕ್ಯಾಥೆಡ್ರಲ್‌ನ ಪುನರಾರಂಭ ಭಾಗವಹಿಸುವುದು ಒಂದು ಗೌರವವಾಗಿದೆ. ಐದು ವರ್ಷಗಳ ಹಿಂದೆ ವಿನಾಶಕಾರಿ ಅಗ್ನಿ ಅವಘಡದ ಬಳಿಕ ಸಂಪೂರ್ಣವಾಗಿ ಪುನಃಸ್ಥಾಪಿಸಲಾಗಿದೆ. ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ನೊಟ್ರೆ ಡೇಮ್ ವೈಭವ ಮರುಸ್ಥಾಪಿಸುವ ಅದ್ಭುತ ಕೆಲಸ ಮಾಡಿದ್ದಾರೆ. ಇದು ಎಲ್ಲರಿಗೂ ಬಹಳ ವಿಶೇಷವಾದ ದಿನವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.
ಕ್ಯಾಥೆಡ್ರಲ್‌ನ ಪುನರಾರಂಭದ ಭವ್ಯ ಸಮಾರಂಭ: ಡಿಸೆಂಬರ್ 7 ಮತ್ತು 8 ರಂದು ಸಮಾರಂಭಗಳು ಪ್ರಾರಂಭವಾಗಲಿದ್ದು, ಡಿಸೆಂಬರ್ 17 ಮತ್ತು 18 ರಂದು ಜೀನ್-ಸೆಬಾಸ್ಟಿಯನ್ ಬಾಚ್‌ನ ಮ್ಯಾಗ್ನಿಫಿಕಾಟ್‌ನ ಎರಡು ಸಂಗೀತ ಕಚೇರಿಗಳನ್ನು ಆಯೋಜಿಸಲಾಗಿದೆ. ಇದೊಂದು ಬಹಳ ದೊಡ್ಡ ಕ್ಷಣ, ಇಡೀ ಜಗತ್ತು ಕುತೂಹಲದಿಂದ ಈ ಕ್ಷಣಕ್ಕಾಗಿ ಕಾಯುತ್ತಿದೆ ಎಂದು ಕ್ಯಾಥೆಡ್ರಲ್‌ನ ಪ್ರಧಾನ ಕಾರ್ಯದರ್ಶಿ ಒಲಿವಿಯರ್ ಜೋಸ್ ಹೇಳಿದ್ದಾರೆ ಎಂದು ನ್ಯಾಷನಲ್ ಜಿಯಾಗ್ರಫಿಕ್ ಉಲ್ಲೇಖಿಸಿ ವರದಿ ಮಾಡಲಾಗಿದೆ. ನಾನು ಕೇವಲ ಒಂದು ಪದವನ್ನು ಬಳಸಬೇಕಾದರೆ, ಅದು 'ತಾಳ್ಮೆ'. ಪ್ರತಿಯೊಬ್ಬರೂ ತಾಳ್ಮೆಯನ್ನು ತೋರಿಸಬೇಕಾಗಿದೆ ಎಂದು ”ಜೋಸ್ ಹೇಳಿದ್ದಾರೆ.
ಪ್ಯಾರಿಸ್‌ನ ಆರ್ಚ್‌ಬಿಷಪ್ ಅಧ್ಯಕ್ಷತೆಯಲ್ಲಿ ಕ್ಯಾಥೆಡ್ರಲ್ ಪುನರಾರಂಭದ ಕಾರ್ಯಕ್ರಮಗಳು ನಡೆಯಲಿವೆ. ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಮತ್ತು ಅಮೆರಿಕದ ಮುಂದಿನ ಅಧ್ಯಕ್ಷ ಟ್ರಂಪ್, ಅಧಿಕಾರಿಗಳು, ದಾನಿಗಳು, ಪ್ಯಾರಿಸ್‌ನ ಎಲ್ಲಾ ಪ್ರತಿನಿಧಿಗಳು, ಕ್ಯಾಥೆಡ್ರಲ್‌ನ ಸದಸ್ಯರು ಮತ್ತು ಪ್ಯಾರಿಸ್ ಪಾದ್ರಿಗಳ ಉಪಸ್ಥಿತಿಯಲ್ಲಿ ಭವ್ಯ ಸಮಾರಂಭ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಆರ್ಚ್‌ಬಿಷಪ್ ತಮ್ಮ ಸಿಬ್ಬಂದಿಯೊಂದಿಗೆ ನೋಟ್ರೆ-ಡೇಮ್ನ ಮುಚ್ಚಿದ ಬಾಗಿಲನ್ನು ತೆರೆಯಲಿದ್ದಾರೆ. ಎತ್ತರದ ಬಲಿಪೀಠದ ಪ್ರತಿಷ್ಠಾಪನೆಯೊಂದಿಗೆ ಉದ್ಘಾಟನೆ ಡಿಸೆಂಬರ್ 8 ರಂದು ಬೆಳಗ್ಗೆ 10.30 ಕ್ಕೆ ಪ್ಯಾರಿಸ್ ಆರ್ಚ್ ಬಿಷಪ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಆರ್ಚ್‌ಬಿಷಪ್ ಲಾರೆಂಟ್ ಉಲ್ರಿಚ್ ಅವರ ಆಹ್ವಾನದ ಮೇರೆಗೆ, ಫ್ರಾನ್ಸ್ ಮತ್ತು ಪ್ರಪಂಚದಾದ್ಯಂತದ ಸುಮಾರು 170 ಬಿಷಪ್‌ಗಳು ಈ ಮರುಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಇದನ್ನು ಓದಿ:ಗಗನಯಾನ ಮಿಷನ್: ಇಸ್ರೋ - ನಾಸಾ ಜಂಟಿ ಪ್ರಯತ್ನದಲ್ಲಿ ಮೊದಲ ಹಂತದ ಗಗನಯಾತ್ರಿಗಳ ತರಬೇತಿ ಯಶಸ್ವಿ
ಪಾಕಿಸ್ತಾನದ ಎರಡು ಬುಡಕಟ್ಟು ಸಮುದಾಯಗಳ ನಡುವೆ ಸಂಘರ್ಷ: ಮೃತರ ಸಂಖ್ಯೆ 124ಕ್ಕೆ ಏರಿಕೆ