ವಿಜಯಪುರ: ಮಾಜಿ ಸಚಿವ ರಮೇಶ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದ ಯುವತಿಯ ತಾಯಿ ಆರೋಗ್ಯದಲ್ಲಿ ಏರುಪೇರು ಆಗಿದ್ದು, ಅವರನ್ನು ಚಿಕಿತ್ಸೆಗಾಗಿ ವಿಜಯಪುರಕ್ಕೆ ಕರೆದುಕೊಂಡು ಹೋಗಲಾಗಿದೆ.
ಯುವತಿ ತಾಯಿ ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದಾರೆ. ಕೈ ಕಾಲುಬಾವು ಬಂದಿದ್ದು ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದ ಕಾರಣ ಚಿಕಿತ್ಸೆಗೆಂದು ಅವರ ಕಿರಿಯ ಮಗ ಕಾರ್ನಲ್ಲಿ ಕರೆದೊಯ್ದಿದ್ದಾರೆ. ಅವರ ಭದ್ರತೆಗೆ ಓರ್ವ ಮಹಿಳಾ ಪೊಲೀಸ್ ಕಾನ್ಸ್ಸ್ಟೇಬಲ್ ಮತ್ತು ಇನ್ನೊಬ್ಬರು ಕಾನ್ಸ್ಟೇಬಲ್ ನಿಯೋಜಿಸಲಾಗಿದೆ.