ETV Bharat / state

ಮಾಜಿ ಸಿಎಂ ಹೆಚ್‌ಡಿಕೆ ಭೇಟಿಯಾದ ಮತ್ತೊಬ್ಬ ಸೋಗಲಿ ದಂಡೆ ನಾಯಕ - CB Askey meets former CM HD Kumaraswamy

ಅಸ್ಕಿ ಫೌಂಡೇಶನ್ ಮೂಲಕ ಜನಮಾನಸದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಕೊಣ್ಣೂರಿನ ಸಿ.ಬಿ.ಅಸ್ಕಿ ಅವರು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿರುವುದು ತೀವ್ರ ಕುತೂಹಲ ಮೂಡಿಸಿದೆ. ಮುಂಬರುವ ದಿನಗಳಲ್ಲಿ ಅಸ್ಕಿ ರಾಜಕೀಯಕ್ಕೆ ಬರುತ್ತಾರೆಯೇ ಎಂಬ ಚರ್ಚೆಗಳು ಶುರುವಾಗಿವೆ..

cb-askey-meets-former-cm-hd-kumaraswamy
ಮಾಜಿ ಸಿಎಂ ಎಚ್ಡಿಕೆ ಭೇಟಿಯಾದ ಮತ್ತೊಬ್ಬ ಸೋಗಲಿದಂಡೆ ನಾಯಕ
author img

By

Published : Apr 16, 2022, 4:13 PM IST

ಮುದ್ದೇಬಿಹಾಳ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡಿದ್ದ ಸೋಗಲಿ ದಂಡೆಯ ನಾಯಕ, ಅಸ್ಕಿ ಫೌಂಡೇಶನ್ ಮೂಲಕ ಜನಮಾನಸದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಕೊಣ್ಣೂರಿನ ಸಿ ಬಿ ಅಸ್ಕಿ ಅವರು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿರುವುದು ತೀವ್ರ ಕುತೂಹಲ ಮೂಡಿಸಿದೆ.

ಆಲಮಟ್ಟಿಯ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಆಗಮಿಸಿದ್ದ ವೇಳೆ ಮಾಜಿ ಸಿಎಂ ಎಚ್‌ಡಿಕೆ ಅವರನ್ನು ಭೇಟಿಯಾದ ಅಸ್ಕಿ ಅವರು, ಕುಮಾರಸ್ವಾಮಿ ಅವರೊಂದಿಗೆ ಕೆಲಕಾಲ ಚರ್ಚೆ ನಡೆಸಿರುವುದಾಗಿ ತಿಳಿದು ಬಂದಿದೆ. ಈ ಹಿಂದೆ ಕೊಣ್ಣೂರು ಭಾಗದಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳನ್ನು ತಂದು ಕೊಡುವಲ್ಲಿ ಸಿ.ಬಿ.ಅಸ್ಕಿ ಮತ್ತವರ ಅಭಿಮಾನಿಗಳು ಸಾಕಷ್ಟು ಪ್ರಯತ್ನಿಸಿ ಯಶಸ್ವಿ ಕೂಡ ಆಗಿದ್ದರು.

ಹಿಂದೆ ಕುಮಾರಸ್ವಾಮಿ ಅವರನ್ನು ಕೊಣ್ಣೂರಿಗೆ ಆಹ್ವಾನಿಸಿ ಬೆಳ್ಳಿ ಗದೆಯನ್ನು ನೀಡಿ ಸನ್ಮಾನಿಸಿದ್ದರು. ಆದರೆ, ಇದೀಗ ಮತ್ತೆ ಕುಮಾರಸ್ವಾಮಿ ಅವರನ್ನು ಭೇಟಿಯಾಗಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಮುಂಬರುವ ದಿನಗಳಲ್ಲಿ ಅಸ್ಕಿ ರಾಜಕೀಯಕ್ಕೆ ಬರುತ್ತಾರೆಯೇ? ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಆಗಿ ಟಿಕೆಟ್ ಗಿಟ್ಟಿಸುವರೇ ಎಂಬ ಚರ್ಚೆಗಳು ಶುರುವಾಗಿವೆ. ಅದರಲ್ಲೂ ಸಿ.ಬಿ.ಅಸ್ಕಿ ಅವರ ನಡೆ ಇನ್ನೂ ನಿಗೂಢವಾಗಿದ್ದು, ಮುಂದಿನ ದಿನಗಳಲ್ಲಿ ಯಾವ ತೀರ್ಮಾನ ಹೊರ ಬೀಳಲಿದೆ ಕಾಯ್ದು ನೋಡಬೇಕಿದೆ.

ಓದಿ : ಈಶ್ವರಪ್ಪರನ್ನು ಬಂಧಿಸಿ ಕಾಂಗ್ರೆಸ್ ನಾಯಕರು ಏನು ಮಾಡುತ್ತಾರೆ? ಹೆಚ್​​ಡಿಕೆ ಪ್ರಶ್ನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.