ವಿಜಯಪುರ: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಅದು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿರುವ ಘಟನೆ ಜಿಲ್ಲೆಯ ತಿಡಗುಂದಿ ಎಂಬಲ್ಲಿ ನಡೆದಿದೆ.
ಆಲಮೇಲ ಪಟ್ಟಣ ಪಂಚಾಯತ ಸದಸ್ಯ ಸಾದಿಕ್ ಸುಂಬಡ ವಿಜಯಪುರದಿಂದ ಸೊಲ್ಲಾಪುರಕ್ಕೆ ಹೋಗುತ್ತಿರುವಾಗ ತಿಡಗುಂದಿ ಬಳಿ ಕಾರಿನಲ್ಲಿ ಸಂಚರಿಸುತ್ತಿದ್ದ ಸಂದರ್ಭ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಕಾರು ನಿಲ್ಲಿಸಿದ ಸಾದಿಕ್ ಕೆಳಗಿಳಿದಿದ್ದಾರೆ. ನೋಡನೋಡುತ್ತಿದ್ದಂತೆ ಬೆಂಕಿಯು ಇಡೀ ಕಾರನ್ನೇ ಆವರಿಸಿಕೊಂಡಿದೆ. ಘಟನೆಯಲ್ಲಿ ಕಾರಿನ ಜೊತೆ 85 ಸಾವಿರ ನಗದು ಹಾಗೂ ಬೆಲೆಬಾಳುವ ವಸ್ತುಗಳು ಸುಟ್ಟು ಭಸ್ಮವಾಗಿವೆ.
ಓದಿ: ಡಿಕೆಶಿ ಮಗಳ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಾಹುಲ್ - ಪ್ರಿಯಾಂಕಾ
ಕಾರು ಬೆಂಕಿಗೆ ಆಹುತಿಯಾಗುತ್ತಿರುವುದನ್ನು ಸಾದಿಕ್ ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾನೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.