ETV Bharat / state

ಸಿಜೇರಿಯನ್ ಒಳಗಾದ ಬಾಣಂತಿಯರ ಹೊಲಿಗೆ ಬಿಚ್ಚುತ್ತಿರುವ ಪ್ರಕರಣ.. 2ನೇ ದಿನವೂ ಮುಂದುವರಿದ ವಿಚಾರಣೆ

ಜಿಲ್ಲಾಧಿಕಾರಿ ನೇಮಿಸಿದ್ದ ತಂಡ ಇಂದು ಕೂಡ ವಿಜಯಪುರ ಜಿಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವಿಚಾರಣೆ ಮುಂದುವರೆಸಿದೆ. ನಾಳೆ ಜಿಲ್ಲಾಧಿಕಾರಿಗಳಿಗೆ ವಿಚಾರಣೆಯ ವರದಿಯನ್ನು ತಂಡ ನೀಡಲಿದ್ದು, ಜಿಲ್ಲಾಡಳಿತ ಈ ಕುರಿತು ಮುಂದಿನ ಕ್ರಮ ಕೈಗೊಳ್ಳಲಿದೆ.

c section
ಎರಡನೇ ದಿನವೂ ಮುಂದುವರೆದ ವಿಚಾರಣೆ
author img

By

Published : May 17, 2022, 7:46 PM IST

ವಿಜಯಪುರ: ಜಿಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಿಜೇರಿಯನ್ ಡೆಲಿವರಿ ಆದ‌ ಬಾಣಂತಿಯರಿಗೆ ಶಸ್ತ್ರಚಿಕಿತ್ಸೆಯ ನಂತರ ಮಾಡಿದ ಹೊಲಿಗೆಗಳು ಬಿಚ್ಚಿರೋ ಘಟನೆಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ತಂಡ ರಚನೆ ಮಾಡಿ ಆದೇಶ ಹೊರಡಿಸಿದ್ದರು.

ಎಸಿ, ಡಿಎಚ್​ಒ ಹಾಗೂ ಆರ್​ಸಿಎಚ್ಒ ಅಧಿಕಾರಿಗಳನ್ನ ಒಳಗೊಂಡ ತಂಡ ನಿನ್ನೆ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರನ್ನು ವಿಚಾರಣೆ ಮಾಡಿತ್ತು, ಈ ತನಿಖೆ ಇಂದಿಗೂ ಮುಂದುವರೆದಿದೆ. ಎಸಿ ಬಲರಾಮ ಲಮಾಣಿ ನೇತೃತ್ವದ ತಂಡದಿಂದ ಇಂದು ಕೂಡ ವೈದ್ಯರು, ನರ್ಸ್​ ಹಾಗೂ ಬಾಣಂತಿಯರ ವಿಚಾರಣೆ ಮಾಡಲಾಯಿತು. ನಾಳೆ ಈ ತಂಡ ಸಂಪೂರ್ಣ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಿದೆ.

ವರದಿಯ ನಂತರ ಜಿಲ್ಲಾಡಳಿತ ಸಮಸ್ಯೆಗೆ ಕಾರಣಗಳನ್ನು ತಿಳಿದು ಕೊಳ್ಳಲಿದೆ. ಸದ್ಯದ ಮಟ್ಟಿಗೆ ಆಸ್ಪತ್ರೆಯ 100 ಹಾಸಿಗೆಗಳು ಬರ್ತಿಯಾಗಿದೆ. ಹೆಚ್ಚು ಒತ್ತಡ ಇದ್ದ ಕಾರಣ ಈ ರೀತಿ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ತಜ್ಞರ ವರದಿಯ ನಂತರ ಪ್ರಕರಣದ ವಿಚಾರ ತಿಳಿದು ಬರಲಿದೆ.

ಇದನ್ನೂ ಓದಿ: ಸಿಸೇರಿಯನ್​ಗೆ ಒಳಗಾದ ಬಾಣಂತಿಯರ ನರಳಾಟ.. ಚುರುಕುಗೊಂಡ ತನಿಖೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.