ETV Bharat / state

ಬೇನಾಮಿ ಹೆಸರಿನಲ್ಲಿ ಆಶ್ರಯ ಮನೆ ಖರೀದಿ: ಇಬ್ಬರ ಮೇಲೆ ಕ್ರಿಮಿನಲ್ ಕೇಸ್

ಬೇನಾಮಿ ಹೆಸರಿನಲ್ಲಿ ಆಶ್ರಯ ಮನೆ ಪಡೆದ ಆರೋಪ ಹಿನ್ನೆಲೆಯಲ್ಲಿ ಇಬ್ಬರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ತಿಳಿಸಿದ್ದಾರೆ.

Vijayapura
ವಿಜಯಪುರ ಮಹಾನಗರ ಪಾಲಿಕೆ
author img

By

Published : Oct 8, 2020, 7:27 PM IST

ವಿಜಯಪುರ: ನಗರದಲ್ಲಿ ಬಡವರಿಗೆ ಸೂರು ಒದಗಿಸುವ ಆಶ್ರಯ ಯೋಜನೆಯ ಮನೆಗಳನ್ನು ಉಳ್ಳವರು ಖರೀದಿಸಿದ್ದು, ಈ ಕುರಿತು 'ಈ ಟಿವಿ ಭಾರತ" ಅಕ್ಟೋಬರ್ 1 ರಂದು ಬೇನಾಮಿ ಹೆಸರಿನಲ್ಲಿ ಮನೆ ಪಡೆದ ವಂಚಕರು ಶೀರ್ಷಿಕೆ ಅಡಿ ವರದಿ ಪ್ರಸಾರ ಮಾಡಿತ್ತು.

ಇದರ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಮಹಾನಗರ ಪಾಲಿಕೆ ಆಯುಕ್ತರು, ಸದ್ಯ ಅಂಥ ಮನೆಗಳಲ್ಲಿ ವಾಸವಿದ್ದವರಿಗೆ ಹಕ್ಕು ಪತ್ರ ನೀಡಲು ಮುಂದಾಗಿದ್ದಾರೆ. ಬೇನಾಮಿ ಹೆಸರಿನಲ್ಲಿ ಆಶ್ರಯ ಮನೆ ಪಡೆದ ಆರೋಪ ಹಿನ್ನೆಲೆಯಲ್ಲಿ ಈಗಾಗಲೇ ಈ ಟಿವಿ ಭಾರತ ವರದಿ ಆಧರಿಸಿ ಇಬ್ಬರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ತಿಳಿಸಿದ್ದಾರೆ.

ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ

ನಗರದ ಹೊರವಲಯದ ಬುರಣಾಪುರದ ಬಸವನಗರ ಆಶ್ರಯ ಮನೆಗಳನ್ನು 15 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿತ್ತು. ಆದರೆ ಮನೆ ಖರೀದಿ ಮಾಡಿದ್ದ ಮಾಲೀಕರು ಮಾತ್ರ ವಾಸಿಸಲು ಬಂದಿರಲಿಲ್ಲ. ಅಂಥ ಮನೆಗಳನ್ನು ಉಳ್ಳವರು ಬೇನಾಮಿ ಹೆಸರಿನಲ್ಲಿ ಖರೀದಿಸಿದ್ದರು. ಈಗ ಮನೆ ಇಲ್ಲದ ಬಡವರು ಇಂಥ ಮನೆಗಳಲ್ಲಿ ವಾಸವಿದ್ದಾರೆ. ಆದರೆ ಅವರಿಗೆ ಹಕ್ಕು ಪತ್ರ ಮಾತ್ರ ದೊರೆಯದ ಕಾರಣ ಮನೆ ರಿಪೇರಿ ಮಾಡಿಸಲು ಹಿಂದೇಟು ಹಾಕಿ, ಹಕ್ಕುಪತ್ರ ನೀಡುವಂತೆ ಮನವಿ ಸಲ್ಲಿಸಿದ್ದರು.

ಈ ಕುರಿತು ಈ ಟಿವಿ ಭಾರತ ವರದಿ ಸಿದ್ದಪಡಿಸಿ ಪ್ರಸಾರ ಮಾಡಿದ ಮೇಲೆ ಮಹಾನಗರ ಪಾಲಿಕೆ ಆಯುಕ್ತರು ಈ ಹಿಂದೆ ನಡೆಸಿದ್ದ ಜಂಟಿ ಸಮೀಕ್ಷೆ ವರದಿಯನ್ನು ಜಾರಿ ತರಲು ಮುಂದಾಗಿ, ಬೇನಾಮಿ ಹೆಸರಿನಲ್ಲಿ ಖರೀದಿಸಿದ ಮನೆಯನ್ನು ಸ್ವಾಧೀನ ಪಡಿಸಿಕೊಳ್ಳಲು ಈ ಹಿಂದೆ‌ ನೀಡಿದ್ದ ಹಕ್ಕುಪತ್ರ ರದ್ದುಗೊಳಿಸಿ, ಸದ್ಯ ವಾಸವಿರುವವರಿಗೆ ಹಕ್ಕುಪತ್ರ ನೀಡಲು ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ವರದಿ ಸಲ್ಲಿಸಿದ್ದು, ಅದರ ಒಪ್ಪಿಗೆ ಬಂದ ನಂತರ ಸದ್ಯ ವಾಸಿಸುವ ಕುಟುಂಬಕ್ಕೆ ಡಿಜಿಟಲ್ ರಿಜಿಷ್ಟರ್ ಉಳ್ಳ ಹಕ್ಕು ಪತ್ರ ನೀಡಲು ಮುಂದಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.