ವಿಜಯಪುರ: ಬೈಕ್ ಅಪಘಾತ ತಪ್ಪಿಸಲು ಹೋಗಿ ರಸ್ತೆಯ ಪಕ್ಕಕ್ಕೆ ಬಸ್ ಜಾರಿ 43 ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಜ್ಞಾನ ಜ್ಯೋತಿ ಶಾಲೆ ಎದುರು ನಡೆದಿದೆ.
ದೇವರಹಿಪ್ಪರಗಿ ಪಟ್ಟಣದಿಂದ ತಾಳಿಕೋಟಿಗೆ ಹೋಗುತ್ತಿರುವ ವೇಳೆ ಈ ಅವಘಡ ನಡೆದಿದೆ. ಬೈಕ್ ಅಪಘಾತ ತಪ್ಪಿಸಲು ಹೋಗಿ ರಸ್ತೆಯ ಪಕ್ಕದ ಜಮೀನಿಗೆ ಬಸ್ ನುಗ್ಗಿದೆ.
ಓದಿ: ಜಾತಿ ಪ್ರಮಾಣಪತ್ರಕ್ಕೆ ತಹಶೀಲ್ದಾರ್ ತಡೆ ನೀಡಿದ್ದರೂ ಪುರಸ್ಕರಿಸಲು ಚುನಾವಣಾಧಿಕಾರಿ ನಕಾರ!
ಬಸ್ ಚಾಲಕ ಶಂಕರಗೌಡ ಇಸ್ಲಾಪುರ ಸಮಯ ಪ್ರಜ್ಞೆಯಿಂದ ಬಸ್ಸಿನಲ್ಲಿದ್ದ 43 ಪ್ರಯಾಣಿಕರು ಪಾರಾಗಿದ್ದಾರೆ. ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.