ETV Bharat / state

ವಿಜಯಪುರ ಗೋಳಗುಮ್ಮಟ ಮ್ಯೂಸಿಯಂಗೆ ಹುಸಿ ಬಾಂಬ್‌ ಸಂದೇಶ - ವಿಶ್ವಪ್ರಸಿದ್ಧ ಗೋಳಗುಮ್ಮಟ

ಶೈಕ್ಷಣಿಕ ಪ್ರವಾಸಿ ಸ್ಥಳ ವಿಜಯಪುರದ ಗೋಳಗುಮ್ಮಟ ಮ್ಯೂಸಿಯಂಗೆ ಹುಸಿ ಬಾಂಬ್ ಇ-ಮೇಲ್ ಬಂದಿದೆ.

ಸಂಗ್ರಹ ಫೋಟೋ
ಸಂಗ್ರಹ ಫೋಟೋ
author img

By ETV Bharat Karnataka Team

Published : Jan 6, 2024, 12:16 PM IST

Updated : Jan 6, 2024, 5:16 PM IST

ಜಿಲ್ಲಾಧಿಕಾರಿ ಟಿ ಭೂಬಾಲನ್

ವಿಜಯಪುರ: ವಿಶ್ವಪ್ರಸಿದ್ಧ ಗೋಳಗುಮ್ಮಟದ ಆವರಣದಲ್ಲಿರುವ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ಕಚೇರಿಗೆ ಹುಸಿ ಬಾಂಬ್‌ ಇ-ಮೇಲ್‌ ಬಂದಿದೆ. ಗೋಳಗುಮ್ಮಟದ ಆವರಣದಲ್ಲಿರುವ ಮ್ಯೂಸಿಯಂನ ಆವರಣದ ಹಲವು ಕಡೆ ಬಾಂಬ್‌ ಇಡಲಾಗಿದೆ ಎಂಬ ಬೆದರಿಸಿ ಕಿಡಿಗೇಡಿಗಳು ಸಂದೇಶ ರವಾನಿಸಿದ್ದಾರೆ.

ಟೆರರೈಸರ್ಸ್ ಗ್ರೂಪ್ ಹೆಸರಲ್ಲಿ ಇ-ಮೇಲ್ ಸಂದೇಶ ಕಳಿಸಲಾಗಿದೆ. ಶುಕ್ರವಾರ ಸಂಜೆ ಇ-ಮೇಲ್ ಪರಿಶೀಲಿಸಿದ ಗೋಳಗುಮ್ಮಟದ ಸಿಬ್ಬಂದಿ, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಡರಾತ್ರಿ ಬಾಂಬ್ ನಿಷ್ಕ್ರಿಯ ದಳ ಆಗಮಿಸಿ ಪರಿಶೀಲನೆ ನಡೆಸಿದ್ದು, ಯಾವುದೇ ಬಾಂಬ್ ಪತ್ತೆ ಆಗಿಲ್ಲ. ಇದೊಂದು‌ ಹುಸಿ ಬಾಂಬ್ ಕರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಸದ್ಯ ಟೆರರೈಸರ್ಸ್ ಹೆಸರಲ್ಲಿ ಬಂದ ಇ-ಮೇಲ್ ಸಂದೇಶದ ಬಗ್ಗೆ ಗೋಳಗುಮ್ಮಟ ಠಾಣೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

''ಭಾರತದ ಹಲವು ವಸ್ತುಸಂಗ್ರಹಾಲಯಗಳಿಗೆ ಇ-ಮೇಲ್ ಮೂಲಕ ಹುಸಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಲಾಗಿತ್ತು. ಅದರಲ್ಲಿನ ಒಂದು ಮೇಲ್ ಐಡಿ ವಿಜಯಪುರದ ಗೋಳಗುಮ್ಮಟ ಮ್ಯೂಸಿಯಂಗೂ ಬಂದಿದೆ. ಈ ಬಗ್ಗೆ ಪರಿಶೀಲಿಸಲಾಗಿದ್ದು, ಇದೊಂದು ಹುಸಿ ಬಾಂಬ್ ಬೆದರಿಕೆ ಸಂದೇಶ ಎಂದು ತಿಳಿದು ಬಂದಿದೆ. ಈಗಾಗಲೇ ಎನ್‌ಸಿಯನ್ನು ದಾಖಲಿಸಲಾಗಿದೆ. ನ್ಯಾಯಾಲಯದ ಅನುಮತಿಯ ನಂತರ ಎಫ್‌ಐಆರ್ ಕೂಡ ದಾಖಲಿಸಲಾಗುತ್ತದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸದ್ಯಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದಾರೆ''. - ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾತಿ ಋಷಿಕೇಶ್​ ಸೋನವಾಣೆ

''ಪುರಾತತ್ವ ಇಲಾಖೆ ಅಧೀನದಲ್ಲಿರುವ ನಗರದ ಮ್ಯೂಸಿಯಂನಲ್ಲಿ ಬಾಂಬ್ ಇಡಲಾಗಿದೆ ಎಂದು ಶುಕ್ರವಾರ ಇ-ಮೇಲ್ ಮೂಲಕ ಶಂದೇಶವೊಂದು ಬಂದಿತ್ತು. ಮಾಹಿತಿ ಮೇರೆಗೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ ತಪಾಸಣೆ ನಡೆಸಿದರು. ತಪಾಸಣೆ ವೇಳೆ ಯಾವುದೇ ಸ್ಫೋಟಕ ವಸ್ತುಗಳು ಕಂಡು ಬಂದಿಲ್ಲ. ಆದ್ದರಿಂದ ಸಾರ್ವಜನಿಕರು ಗಾಬರಿಪಡುವ ಅವಶ್ಯಕತೆ ಇಲ್ಲ. ಇದೊಂದು ಹುಸಿ ಬಾಂಬ್ ಬೆದರಿಕೆ ಕರೆಯಾಗಿದೆ''. ಜಿಲ್ಲಾಧಿಕಾರಿ ಟಿ ಭೂಬಾಲನ್

ಇದನ್ನೂ ಓದಿ: ಬೆಂಗಳೂರು: ಸರ್.ಎಂ.ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಹುಸಿ ಬಾಂಬ್ ಬೆದರಿಕೆ ಕರೆ

ವಿಶ್ವೇಶ್ವರಯ್ಯ ಮ್ಯೂಜಿಯಂಗೂ ಬೆದರಿಕೆ: ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಪಕ್ಕದಲ್ಲಿರುವ ಶೈಕ್ಷಣಿಕ ಪ್ರವಾಸಿ ಸ್ಥಳ ಹಾಗೂ ಅತ್ಯುನ್ನತ ವಸ್ತು ಸಂಗ್ರಹಾಲಯಗಳ ಪೈಕಿ ಒಂದಾಗಿರುವ ಸರ್ ಎಂ. ವಿಶ್ವೇಶ್ವರಯ್ಯ ಮ್ಯೂಜಿಯಂಗೂ ಬಾಂಬ್ ಇಟ್ಟಿರುವುದಾಗಿ ಶುಕ್ರವಾರ ಸಂದೇಶವೊಂದು ಬಂದಿತ್ತು. ಪರಿಣಾಮ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಎಂದಿನಂತೆ ಬೆಳಗ್ಗೆ 9 ಗಂಟೆಗೆ ಮ್ಯೂಸಿಯಂ ಗೇಟ್ ತೆರೆದ ಸಿಬ್ಬಂದಿ ಇ-ಮೇಲ್ ಪರಿಶೀಲಿಸಿದ್ದು, ಅದರಲ್ಲಿನ ಬೆದರಿಕೆ ಸಂದೇಶ ನೋಡುತ್ತಿದ್ದಂತೆ ಶಾಕ್ ಆಗಿದ್ದರು. ಸುದ್ದಿ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸ್ ಸಿಬ್ಬಂದಿ, ಶ್ವಾನ ದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದ್ದರು. ಬಳಿಕ ಯಾವುದೇ ಸ್ಫೋಟಕ ವಸ್ತು ಕಂಡುಬರದ ಹಿನ್ನೆಲೆಯಲ್ಲಿ ಇದೊಂದು ಹುಸಿ ಬಾಂಬ್ ಕರೆ ಎಂದು ಎಲ್ಲರೂ ನಿಟ್ಟುಸಿರುಬಿಟ್ಟರು.

Last Updated : Jan 6, 2024, 5:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.