ETV Bharat / state

ಪತ್ರಕರ್ತರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು: ಪುಂಡಲೀಕ ಮುರಾಳ

ಮುದ್ದೇಬಿಹಾಳ ಪಟ್ಟಣದ ಶಾರದಾ ಶಿಕ್ಷಣ ಸಂಸ್ಥೆಯಲ್ಲಿ ಕೋವಿಡ್ ವಾರಿಯರ್ಸ್​ಗೆ​ ಸನ್ಮಾನ, ಬಸವ ಜಯಂತಿ ಆಚರಿಸಲಾಯಿತು.

Muddebihal
ಕೋವಿಡ್ ವಾರಿಯರ್ಸ್​ಗೆ​ ಸನ್ಮಾನ
author img

By

Published : May 15, 2021, 7:17 AM IST

ಮುದ್ದೇಬಿಹಾಳ (ವಿಜಯಪುರ): ಕೊರೊನಾ ಫ್ರಂಟ್ ಲೈನ್ ವಾರಿಯರ್ಸ್​ಗಳಾಗಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಪತ್ರಕರ್ತ ಶಂಕರ ಹೆಬ್ಬಾಳ ಹಾಗು ಪುಂಡಲೀಕ ಮುರಾಳ ಒತ್ತಾಯಿಸಿದರು.

'ಪತ್ರಕರ್ತರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು'

ಮುದ್ದೇಬಿಹಾಳ ಪಟ್ಟಣದ ಶಾರದಾ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಕೋವಿಡ್ ವಾರಿಯರ್ಸ್​ಗೆ​ ಸನ್ಮಾನ, ಬಸವ ಜಯಂತಿ ಕಾರ್ಯಕ್ರಮದಲ್ಲಿ ಪತ್ರಕರ್ತರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಒತ್ತಾಯಿಸಿದರು.

ಈ ವೇಳೆ ಪುರಸಭೆ ಮಾಜಿ ಸದಸ್ಯ ಕಾಮರಾಜ ಬಿರಾದಾರ ಮಾತನಾಡಿ, ಪತ್ರಕರ್ತರು ಕೊರೊನಾ ಸಂದರ್ಭದಲ್ಲೂ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಹೀಗಾಗಿ, ಕೊರೊನಾ ವಾರಿಯರ್‌ಗಳಿಗೆ ನೀಡುವ ಸೌಲಭ್ಯವನ್ನು ಸರ್ಕಾರ ಪತ್ರಕರ್ತರಿಗೂ ವಿಸ್ತರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಪೊಲೀಸರು, ಪತ್ರಕರ್ತರು, ಪುರಸಭೆ ಆರೋಗ್ಯ ವಿಭಾಗದವರನ್ನು ಸನ್ಮಾನಿಸಲಾಯಿತು.

ಓದಿ: 1-9ನೇ ತರಗತಿ ಫಲಿತಾಂಶ ದಾಖಲಿಸುವ ಸರ್ಕಾರದ ಆದೇಶಕ್ಕೆ ಖಾಸಗಿ ಶಾಲೆಗಳ ಆಕ್ಷೇಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.