ETV Bharat / state

ವಿಜಯಪುರ ಜಿಲ್ಲಾಸ್ಪತ್ರೆ ನೆಲದ ಮೇಲೆ ಕುಳಿತುಕೊಂಡೇ ರೋಗಿಗಳ ಸಂಕಷ್ಟ ಕೇಳಿದ ರಾಮುಲು - 108 Ambulence

ವಿಜಯಪುರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಅಲ್ಲಿನ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು. ಬಳಿಕ ಕೆಲ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು.

ಆರೋಗ್ಯ ಸಚಿವ ಬಿ. ಶ್ರೀರಾಮುಲು ಸಮಸ್ಯೆಗಳ ಕುರಿತು ಮಾಹಿತಿ ಪಡೆದರು
author img

By

Published : Aug 30, 2019, 5:10 PM IST

ವಿಜಯಪುರ: ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧ ಕೇಂದ್ರಗಳನ್ನು ಸ್ಥಾಪನೆ ಮಾಡುವ ಯೋಜನೆ ಇದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದರು.

ನಗರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದ ಅವರು, ಈ ಹಿಂದೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಆಡಳಿತದಲ್ಲಿರುವಾಗ ಆರೋಗ್ಯ ಸಚಿವನಾಗಿದ್ದೆ. ಆಗ 108 ಆ್ಯಂಬ್ಯುಲೆನ್ಸ್​ ಸೇವೆಯನ್ನು ಜಾರಿಗೆ ತಂದಿದ್ದೆ. ಈಗ ಮತ್ತೆ ಅದೇ ಖಾತೆಯಲ್ಲಿ ಕಾರ್ಯ ನಿರ್ವಹಿಸಲಿದ್ದೇನೆ. ನಿಮ್ಮೆಲ್ಲರ ಕೆಲಸ ಮಾಡುವುದು ನನ್ನ ಸೌಭಾಗ್ಯ ಎಂದರು.

ಆರೋಗ್ಯ ಸಚಿವ ಬಿ. ಶ್ರೀರಾಮುಲು ಸಮಸ್ಯೆಗಳ ಕುರಿತು ಮಾಹಿತಿ ಪಡೆದರು

ಇನ್ನು ಇದೇ ವೇಳೆ, ಆಸ್ಪತ್ರೆಗೆ ಬರುವ ರೋಗಿಗಳನ್ನು ಅಥವಾ ಬಾಣಂತಿಯರನ್ನು ಉಪಚರಿಸಲು ಬರುವ ಅವರ ಸಂಬಂಧಿಕರಿಗೆ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಕಲ್ಪಿಸಲು ಶೆಡ್​ಗಳನ್ನು ನಿರ್ಮಾಣ ಮಾಡುತ್ತೇವೆ. ಅಷ್ಟೇ ಅಲ್ಲದೆ, ಶೌಚಾಯಲದ ಸಮಸ್ಯೆಯಿರುವ ಕಾರಣ ಟೆಂಡರ್​ ವಹಿಸಿಕೊಂಡವರಿಗೆ ಸರಿಯಾದ ನಿರ್ವಹಣೆ ಮಾಡಲು ಪತ್ರ ಬರೆಯಿರಿ. ಇಲ್ಲವೇ ಟೆಂಡರ್​ ರದ್ದು ಮಾಡುತ್ತೇನೆ ಎಂದು ಖಡಕ್​ ಎಚ್ಚರಿಕೆ ನೀಡಿದರು.

ಇನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಬಾಣಂತಿಯರಿಗೆ ನೋಟೊ ಔಷಧವನ್ನು ನೀಡಲು ಆದೇಶಿಸಲಾಗುವುದು. ಅಷ್ಟೇ ಅಲ್ಲದೆ, ಬಾಣಂತಿಯರಿಂದ ಯಾರಾದರೂ ಹಣ ವಸೂಲಿ ಮಾಡಿದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾಸ್ಪತ್ರೆಯ ನೆಲದ ಮೇಲೆ ಕುಳಿತು ಜನರ ಸಮಸ್ಯೆಗಳನ್ನು ಆಲಿಸಿದ ಸಚಿವರ ಸರಳತೆಗೆ ಮೆಚ್ಚುಗೆ ವ್ಯಕ್ತವಾಯಿತು.

Intro:ವಿಜಯಪುರ Body:ವಿಜಯಪುರ:
ಕರ್ನಾಟಕ ರಾಜ್ಯದ ಮಂತ್ರಿ ಆದ ಬಳಿಕ ಮೊದಲ‌ ಬಾರಿಗೆ ಸಿದ್ದೇಶ್ವರ ಶ್ರೀ ಗಳ ಆಶಿರ್ವಾದ ಪಡೆದಿದ್ದೇನೆ.
ಜಿಲ್ಲಾಸ್ಪತ್ರೆಗೂ ಇಂದು ಭೇಟಿ ನೀಡಿ ಸಮಸ್ಯೆ ಆಲಿಸಿದ್ದೇನೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.
ನಗರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಅವರು ರೋಗಿಗಳು, ಅವರ ಸಂಬಂಧಿಕರ ಸಮಸ್ಯೆ ಆಲಿಸಿ ನಂತರ ಮಾತನಾಡಿದ ಅವರು,
ನಾನು ಮೊದಲು ಆರೋಗ್ಯ ಸಚಿವನಾಗಿದ್ದ ೧೦೮ ಮಾಡಿದ್ದೆ.
ಈಗ ಮತ್ತೆ‌ ಆರೋಗ್ಯ ಸಚಿವನಾಗಿ ನನ್ನನ್ನು ಯಡಿಯೂರಪ್ಪ ಮಾಡಿದ್ದಾರೆ.
ಹೆರಿಗೆ ಆದ ಬಾಣಂತಿಯರ ಜೊತೆಗೆ ಬಂದವರಿಗೆ ಉಳಿದುಕೊಳ್ಳಲು ಶೆಡ್ ಮಾಡುವ ಪ್ಲ್ಯಾನ್ ಇದೆ.
ಶೌಚಾಲಯ ತೊಂದರೆ ಇರುವ ಕಾರಣ, ಈಗಿರುವವರ ಟೆಂಡರ್ ದಾರರಿಗೆ ಪತ್ರ ಬರೆಯುವ ಇಲ್ಲ ಅವರ ಟೆಂಡರ್ ರದ್ದು ಮಾಡುವೆ ಎಂದು ಎಚ್ಚರಿಸಿದರು.
ಎಲ್ಲ ಕಡೆ ಆಸ್ಪತ್ರೆಗಳಲ್ಲಿ ಜನೌಷದಿ ಕೇಂದ್ರ ತೆರೆಯುವ ಯೋಚನೆ ಇದೆ.
ಹೆರಿಗೆ ಯಾದ ಬಳಿಕ‌ ನೊಟೋ ಅನ್ನುವ ಔಷದ ಹಾಕಿಕೊಳ್ಳಲು ೪.೫ ಸಾವಿರ ಆಗತಿತ್ತು ಹೊರಗಡೆ, ಅದನ್ನು ಉಚಿತವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಹಾಕಲಾಗುವದು ಇದಕ್ಕೆ ಇಂದೇ ಆದೇಶ ಮಾಡಲಾಗುವದು ಎಂದರು.
ಧರ್ಮದ ಕೆಲಸ, ದೇವರ ಕೆಲಸ, ಬಡವರ ಕೆಲಸ ಮಾಡುವದು ನನ್ನ ಸೌಭಾಗ್ಯ.
ಮಕ್ಕಳಿಗೆ ಬೇರೆ ಬೇರೆ ಕಾಯಿಲೆ‌ ಬರಬಾರದು ಎಂಬ ಕಾರಣಕ್ಕೆ‌ ನೋಟೋ ಔಷದ ಹಾಕಲಾಗುವದು ಎಂದರು.
ಸುಲಭ ಶೌಚಾಲಯ, ಸ್ನಾನ. ೨೪*೭ ಕ್ಯಾಂಟಿನ್ ವ್ಯವಸ್ಥೆ, ಬಿಸಿ ನೀರಿನ‌ ವ್ಯವಸ್ಥೆ ಮಾಡುವ ಯೋಚನೆ ಇದೆ ಎಂದರು.
ಬಾಣಂತಿಯರಿಂದ ಯಾರಾದರೂ ಹಣ ವಸೂಲಿ‌ ಮಾಡಿದ ಅಂತವರ ಮೇಲೆ ಕ್ರಮ ಕೈಗೊಳ್ಖಲಾಗುವದು ಎಂದರು.
ಆಸ್ಪತ್ರೆಯಲ್ಲಿ ನೆಲದಲ್ಲಿ ಕುಳಿತ ಸಚಿವ:
ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳನ್ನು ಮಾತನಾಡಿಸುವಾಗ ಸಚಿವ ಶ್ರೀರಾಮುಲು ನೆಲದಲ್ಲಿ ಕುಳಿತು ಸಮಸ್ಯೆ ಆಲಿಸುವ ಮೂಲಕ ಸರಳತೆ ಮೆರೆದರು.
ನಂತರ ಈ. ಕುರಿತು ಪ್ರತಿಕ್ರಿಯೆ ನೀಡಿದ ಅವರು,
ನಾನು ಅನೇಕರ ಕಷ್ಟ ನೋಡಿದ್ದೇನೆ.
ಅಧಿಕಾರ ಯಾವುದೂ ಶಾಶ್ವತವಲ್ಲ.
ನಾವು ಏನೇ ಮಾಡಿದರೂ ದೇವರು ಮೆಚ್ಚುವ ಕೆಲ ಮಾಡಬೇಕು ಎಂದರು.Conclusion:ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.