ETV Bharat / state

ಮುಸುಕುಧಾರಿಗಳಿಂದ ಬಟ್ಟೆ ಅಂಗಡಿ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ - kannada news

ವ್ಯಾಪಾರ ಮುಗಿಸಿ ಹಣ ತೆಗೆದುಕೊಂಡು ಸಿಬ್ಬಂದಿ ಜತೆ ಬೈಕ್​​ನಲ್ಲಿ ತೆರಳುತ್ತಿದ್ದ ಜಿಲ್ಲೆಯ ಪ್ರಮುಖ ವ್ಯಾಪಾರಿ ಮೇಲೆ ಮುಸುಕುಧಾರಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಬಾಹುಬಲಿ ಮುತ್ತಿನ ಬಟ್ಟೆ ಅಂಗಡಿ ಮಾಲೀಕ ಅಜೀತ್ ಮುತ್ತಿನ ಮೇಲೆ ಮಾರಣಾಂತಿಕ‌ ಹಲ್ಲೆ
author img

By

Published : May 10, 2019, 6:24 AM IST

ವಿಜಯಪುರ : ಜಿಲ್ಲೆಯ ಪ್ರಮುಖ ವ್ಯಾಪಾರಿ ಮೇಲೆ ಮುಸುಕುಧಾರಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಡರಾತ್ರಿ ಚಡಚಣ ಪಟ್ಟಣದಲ್ಲಿ ನಡೆದಿದೆ.

ಜಿಲ್ಲೆಯ ಚಡಚಣ ಪಟ್ಟಣದ ಬಾಹುಬಲಿ ಮುತ್ತಿನ ಬಟ್ಟೆ ಅಂಗಡಿ ಮಾಲೀಕ ಅಜೀತ್ ಮುತ್ತಿನ ಮೇಲೆ ಮಾರಣಾಂತಿಕ‌ ಹಲ್ಲೆ ನಡೆದಿದ್ದು, ವ್ಯಾಪಾರ ಮುಗಿಸಿ ಹಣ ತೆಗೆದುಕೊಂಡು ಸಿಬ್ಬಂದಿ ಜತೆ ಬೈಕ್​ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಬೈಕ್ ಹಿಂದೆ ಕುಳಿತ ಸಿಬ್ಬಂದಿ ಪಾರಾಗಿದ್ದಾನೆ. ಆದರೆ ಅಜಿತ್​ಗೆ ಗಂಭೀರ ಗಾಯಗಳಾಗಿದ್ದು, ಮಹಾರಾಷ್ಟ್ರದ ಸೋಲಾಪುರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಹೊಸ ಅಂಗಡಿಯಿಂದ ಹಳೆಯ ಅಂಗಡಿಗೆ ಲಕ್ಷಾಂತರ ಹಣ ತೆಗೆದುಕೊಂಡು ಹೋಗುವಾಗ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ ಮುಸುಕುಧಾರಿಗಳು ಪರಾರಿಯಾಗಿದ್ದಾರೆ. ಆದರೆ ಗಾಯಾಳು ಬಳಿಯಿದ್ದ ಹಣ ಕದ್ದಿರುವ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸ್ಥಳಕ್ಕೆ ಚಡಚಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Intro:ವಿಜಯಪುರ Body:ವಿಜಯಪುರ: ಜಿಲ್ಲೆಯ ಸುಪ್ರಸಿದ್ಧ ವ್ಯಾಪಾರಿಯ ಮೇಲೆ ಮುಸುಕುಧಾರಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಡರಾತ್ರಿ ಚಡಚಣ ಪಟ್ಟಣದಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆ ಯವಚಡಚಣ ಪಟ್ಟಣ
ಬಾಹುಬಲಿ ಮುತ್ತಿನ ಅಂಗಡಿ ಮಾಲಿಕ ಅಜೀತ್ ಮೇಲೆ ಮಾರಣಾಂತಿಕ‌ ಹಲ್ಲೆ ನಡೆದಿದೆ.
ಬಟ್ಟೆ ಅಂಗಡಿ ವ್ಯಾಪಾರ ಮುಗಿಸಿ ಹಣ ತೆಗೆದುಕೊಂಡು ಸಿಬ್ಬಂದಿ ಜತೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಹಲ್ಲೆ ನಡೆದಿದೆ.
ಬೈಕ್ ಹಿಂದೆ ಕುಳಿತ ಸಿಬ್ಬಂದಿ ಪಾರು
ಅಜಿತ ಮುತ್ತಿನ ಹಣೆಯ ಮೇಲೆ ಗಂಭೀರ ಗಾಯಗಳಾಗಿವೆ.
ಮಹಾರಾಷ್ಟ್ರದ ಸೋಲಾಪುರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಹೊಸ ಅಂಗಡಿಯಿಂದ ಹಳೆಯ ಅಂಗಡಿಗೆ ಲಕ್ಷಾಂತರ ಹಣ ತೆಗೆದುಕೊಂಡು ಹೋಗುವಾಗ ಮಾರಕಾಸ್ತ್ರದಿಂದ ಹಲ್ಲೆ ನಡೆದಿದೆ.
ಮುಸುಕುಧಾರಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಆದರೆ ಗಾಯಾಳಿ ಬಳಿವಿದ್ದ ಹಣ ಕದ್ದ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಸ್ಥಳಕ್ಕೆ ಚಡಚಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಡಚಣ ಭಾಗದಲ್ಲಿ ದೊಡ್ಡ ವ್ಯಾಪಾರದ ಬಟ್ಟೆ ಅಂಗಡಿ ಬಾಹುಬಲಿ ಮುತ್ತಿನ ಆಗಿತ್ತು. ನಿತ್ಯ ಲಕ್ಷಾಂತರ ವ್ಯವಹಾರ ನಡೆಯುತ್ತಿತ್ತು. ಇಂಥವರ ಮೇಲೆ ಹಲ್ಲೆ ನಡೆದಿರುವದು ಜನರಲ್ಲಿ ಆತಂಕ ನುಡಿಸಿದೆ.
ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.